ಬಾಂಗ್ಲಾ ಬಾಕ್ಸ್‌ ಆರೋಪಿಗಳ ಕರೆ ತಂದು ಸ್ಥಳ ಮಹಜರು

| Published : Nov 08 2023, 01:03 AM IST

ಬಾಂಗ್ಲಾ ಬಾಕ್ಸ್‌ ಆರೋಪಿಗಳ ಕರೆ ತಂದು ಸ್ಥಳ ಮಹಜರು
Share this Article
  • FB
  • TW
  • Linkdin
  • Email

ಸಾರಾಂಶ

ಜಯನಗರ ಪೊಲೀಸ್ ಠಾಣೆಗೆ ಅವರು ದೂರು ನೀಡಿದ್ದರು.

ಶಿವಮೊಗ್ಗ: ನಗರದ ರೈಲ್ವೆ ನಿಲ್ದಾಣದಲ್ಲಿ ಬಾಂಗ್ಲಾ ದೇಶದ ಮುದ್ರೆ ಹೊತ್ತು ಪತ್ತೆಯಾದ 2 ಬಾಕ್ಸ್‌ಗಳನ್ನು ಇರಿಸಿದ್ದ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಮಂಗಳವಾರ ಮಹಜರು ಮಾಡುವ ಸಲುವಾಗಿ ಸ್ಥಳಕ್ಕೆ ಆರೋಪಿಗಳನ್ನು ಕರೆದೊಯ್ದರು.

ಜಯನಗರ ಪೊಲೀಸರು ಆರೋಪಿಗಳಾದ ನಸ್ರುಲ್ಲಾ ಮತ್ತು ಜಬ್ಬಿ ಅವರನ್ನು ಬಂಧಿಸಿದ್ದು, ಘಟನೆ ಸ್ಥಳದ ಮಹಜರು ನಡೆಸಿದರು.

ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡಿಸುವ ಆಸೆ ಹುಟ್ಟಿಸಿ, ಮುಂಗಡ ಬಡ್ಡಿ ವಸೂಲು ಮಾಡುತ್ತಿದ್ದ ಈ ತಂಡ ಬಳಿಕ ಫಲಾನುಭವಿಗಳಿಗೆ ಹಣ ತುಂಬಿದ ಟ್ರಂಕ್ ಎಂದು ನಂಬಿಸಿ, ಕಸ ತುಂಬಿದ ಬಾಕ್ಸ್ ನೀಡಿ ವಂಚನೆ ನಡೆಸುತ್ತಿತ್ತು. ಇದರ ಒಂದು ಭಾಗವಾಗಿಯೇ ಶನಿವಾರ ರಾತ್ರಿ ಈ ತ್ಯಾಜ್ಯ ತುಂಬಿದ ಬಾಕ್ಸ್‌ಗಳನ್ನು ರೈಲ್ವೆ ನಿಲ್ದಾಣಕ್ಕೆ ತಂದು ಇರಿಸಲಾಗಿತ್ತು. ಇದು ತೀವ್ರ ಆತಂಕ್ಕೆ ಕಾರಣವಾಗಿತ್ತು. ಬಾಕ್ಸ್‌ಗಳು ಪತ್ತೆಯಾದ ಬೆನ್ನಲ್ಲೇ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.

ತಿಪಟೂರು ಮೂಲದ ಗಿರೀಶ್ ವಂಚನೆಗೆ ಒಳಗಾಗಿದ್ದು, ಜಯನಗರ ಪೊಲೀಸ್ ಠಾಣೆಗೆ ಅವರು ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಆರೋಪಿಗಳನ್ನು ಪೊಲೀಸರು ಬಂಧಿಸಿದರು.