ಸಾರಾಂಶ
ಈ ಹಿಂದೆ 1971ರಲ್ಲಿ ಬಾಂಗ್ಲಾದೇಶ ನಿರ್ಮಾಣವಾದಾಗ ಶೇ. 21ರಷ್ಟು ಇದ್ದ ಹಿಂದೂಗಳ ಪ್ರಮಾಣ ಈಗ ಕೇವಲ ಶೇ.1ಕ್ಕೆ ಗಣನೀಯ ಇಳಿಕೆಯಾಗಿದೆ. ರಾಕ್ಷಸರ ಅಟ್ಟಹಾಸದಿಂದ ಕೋಮು ಹಿಂಸಾಚಾರಗಳು ಆತಂಕಕಾರಿ ಬೆಳವಣಿಗೆ. ಕರ್ನಾಟಕದಲ್ಲಿ ಅಕ್ರಮ ಬಾಂಗ್ಲಾ ಹಾಗೂ ರೋಹಿಂಗ್ಯಾ ಮುಸ್ಲಿಮರು 10 ಲಕ್ಷ ಇರುವ ಅಂದಾಜಿದೆ.
ಕನ್ನಡಪ್ರಭ ವಾರ್ತೆ ಕನಕಪುರ
ಅಕ್ರಮ ಬಾಂಗ್ಲಾ ನುಸುಳುಕೋರರನ್ನು ಜಿಲ್ಲೆಯಿಂದ ಹೊರ ಹಾಕುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ನಾಗರ್ಜುನ್‌ಗೌಡ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ಕಾರ್ತಿಕ್ ರೆಡ್ಡಿ ಅವರಿಗೆ ಮನವಿ ಸಲ್ಲಿಸಿದರು.ಬಳಿಕ ಮಾತನಾಡಿದ ನಾಗರ್ಜುನ್‌ಗೌಡ ಅವರು, ನೆರೆಯ ರಾಷ್ಟ್ರ ಬಾಂಗ್ಲಾ ನಮ್ಮಿಂದ ನಿರ್ಮಾಣಗೊಂಡ ದಿನದಿಂದ ಭಾರತ ಹಾಗೂ ಬಾಂಗ್ಲಾದ ಹಿಂದೂಗಳ ಮೇಲೆ ದೌರ್ಜನ್ಯ ಮಾಡುತ್ತಿರುವುದು ಖಂಡನೀಯ. ಪ್ರಸ್ತುತ ಬಾಂಗ್ಲಾದಲ್ಲಿ ಆಂತರಿಕ ಮೀಸಲಾತಿಗಾಗಿ ನಡೆಯುತ್ತಿರುವ ಗಲಭೆಯಲ್ಲೂ ಅನಗತ್ಯವಾಗಿ ಹಿಂದೂಗಳ ಮೇಲೆ ಅಮಾನುಷವಾಗಿ ದೌರ್ಜನ್ಯ ನಡೆಯುತ್ತಿದೆ. ಹಿಂದೂ ದೇವಸ್ಥಾನಗಳ ನಾಶ, ಮನೆಗಳ ಲೂಟಿ, ಬೆಂಕಿ ಹಚ್ಚುವುದು, ಹಿಂದು ಹೆಣ್ಣುಮಕ್ಕಳ ಅತ್ಯಾಚಾರ, ಕೊಲೆ ಸೇರಿದಂತೆ ಪೈಶಾಚಿಕ ಕೃತ್ಯಗಳನ್ನು ಎಸಗುತ್ತಿರುವುದನ್ನು ಖಂಡಿಸಿದರು.ಈ ಹಿಂದೆ 1971ರಲ್ಲಿ ಬಾಂಗ್ಲಾದೇಶ ನಿರ್ಮಾಣವಾದಾಗ ಶೇ. 21ರಷ್ಟು ಇದ್ದ ಹಿಂದೂಗಳ ಪ್ರಮಾಣ ಈಗ ಕೇವಲ ಶೇ.1ಕ್ಕೆ ಗಣನೀಯ ಇಳಿಕೆಯಾಗಿದೆ. ರಾಕ್ಷಸರ ಅಟ್ಟಹಾಸದಿಂದ ಕೋಮು ಹಿಂಸಾಚಾರಗಳು ಆತಂಕಕಾರಿ ಬೆಳವಣಿಗೆ. ಕರ್ನಾಟಕದಲ್ಲಿ ಅಕ್ರಮ ಬಾಂಗ್ಲಾ ಹಾಗೂ ರೋಹಿಂಗ್ಯಾ ಮುಸ್ಲಿಮರು 10 ಲಕ್ಷ ಇರುವ ಅಂದಾಜಿದೆ. ಇವರು ಕಾನೂನುಬಾಹಿರ ಚಟುವಟಿಕೆಗಳು ನಡೆಸುವುದಲ್ಲದೆ, ದೇಶದ ಸುರಕ್ಷತೆಗೆ ಕಂಟಕರಾಗಿದ್ದಾರೆ. ಆದ್ದರಿಂದ ದೇಶದ್ರೋಹಿ ಬಾಂಗ್ಲಾ ರೋಹಿಂಗ್ಯಾಗಳನ್ನು ಕರ್ನಾಟಕದಿಂದ ಗಡಿಪಾರು ಮಾಡಬೇಕು. ಇಲ್ಲದಿದ್ದರೆ ಶ್ರೀರಾಮ ಸೇನಾ ಉಗ್ರ ಸ್ವರೂಪದ ಹೋರಾಟ ಮಾಡುತ್ತದೆ ಎಂದು ಎಚ್ಚರಿಸಿದರು.
ಶ್ರೀ ರಾಮ ಸೇನೆ ಕಾರ್ಯದರ್ಶಿ ನವೀನ್, ಅರುಣ ಉದಾರಹಳ್ಳಿ, ಪವನ್ ಕುಮಾರ್, ಕಾರ್ಯಕರ್ತರಾದ ಹರ್ಷವರ್ಧನ್, ಸುಹಾಸ್ ಕುಮಾರ್ ಇತರರಿದ್ದರು.