ಸಾರಾಂಶ
‘ಸೇನಾಡಳಿತವನ್ನು ನಾವು ಯಾವ ಕಾರಣಕ್ಕೂ ಒಪ್ಪಲ್ಲ. ನೊಬೆಲ್ ಪ್ರಶಸ್ತಿ ಪುರಸ್ಕೃತ ಮೊಹಮ್ಮದ್ ಯೂನುಸ್ ಅವರನ್ನು ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥರನ್ನಾಗಿ ಮಾಡಬೇಕು’ ಬಾಂಗ್ಲಾದೇಶ ವಿದ್ಯಾರ್ಥಿ ಹೋರಾಟಗಾರರು ಮಂಗಳವಾರ ಆಗ್ರಹಿಸಿದ್ದಾರೆ.
ಢಾಕಾ: ‘ಸೇನಾಡಳಿತವನ್ನು ನಾವು ಯಾವ ಕಾರಣಕ್ಕೂ ಒಪ್ಪಲ್ಲ. ನೊಬೆಲ್ ಪ್ರಶಸ್ತಿ ಪುರಸ್ಕೃತ ಮೊಹಮ್ಮದ್ ಯೂನುಸ್ ಅವರನ್ನು ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥರನ್ನಾಗಿ ಮಾಡಬೇಕು’ ಬಾಂಗ್ಲಾದೇಶ ವಿದ್ಯಾರ್ಥಿ ಹೋರಾಟಗಾರರು ಮಂಗಳವಾರ ಆಗ್ರಹಿಸಿದ್ದಾರೆ. ಪ್ರಧಾನಿ ಶೇಖ್ ಹಸೀನಾ ಅವರು ತಮ್ಮ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆಗಳ ನಂತರ ರಾಜೀನಾಮೆ ನೀಡಿ ದೇಶದಿಂದ ಪಲಾಯನ ಮಾಡಿದ ಒಂದು ದಿನದ ನಂತರ ಈ ಆಗ್ರಹ ಕೇಳಿಬಂದಿದೆ. ಇದಕ್ಕೆ ಯೂನುಸ್ ಕೂಡ ಸಕಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ.
ಮಂಗಳವಾರ ಮುಂಜಾನೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ವಿದ್ಯಾರ್ಥಿ ಚಳವಳಿ ನೇತಾರ ನಹೀದ್ ಇಸ್ಲಾಂ ಮಾತನಾಡಿ, ‘ಈಗಾಗಲೇ 84 ವರ್ಷದ ಯೂನುಸ್ ಅವರೊಂದಿಗೆ ಮಾತನಾಡಿದ್ದಾರೆ, ಅವರು ಬಾಂಗ್ಲಾದೇಶವನ್ನು ಉಳಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಒಪ್ಪಿಕೊಂಡಿದ್ದಾರೆ. ಅವರು ಸರ್ಕಾರದ ಮುಖ್ಯ ಸಲಹೆಗಾರ ಆಗಲಿದ್ದಾರೆ’ ಎಂದು ಹೇಳಿದ್ದಾರೆ. ಇದಕ್ಕ ಪ್ರತಿಕ್ರಿಯೆ ನೀಡಿರುವ ಯೂನುಸ್, ‘ವಿದ್ಯಾರ್ಥಿಗಳು ಅಷ್ಟು ತ್ಯಾಗ ಮಾಡಬಹುದಾದರೆ, ದೇಶದ ಜನರು ಇಷ್ಟು ತ್ಯಾಗ ಮಾಡಬಹುದಾದರೆ, ನನಗೂ ಕೆಲವು ಜವಾಬ್ದಾರಿ ಇದೆ. ನಾನು ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇನೆ’ ಎಂದಿದ್ದಾರೆ,ಯಾರು ಯೂನುಸ್?:
ಬಾಂಗ್ಲಾದೇಶದಲ್ಲಿ ಗ್ರಾಮೀಣ ಬ್ಯಾಂಕ್‌ಗಳ ಪರಿಕಲ್ಪನೆಯನ್ನು ತಂದು ಜನರ ಆರ್ಥಿಕ ಸದೃಢತೆಗೆ ನೆರವಾದವರು ಆರ್ಥಿಕ ತಜ್ಞ ಯೂನುಸ್. ವರ ಬಡತನ ವಿರೋಧಿ ಅಭಿಯಾನಕ್ಕಾಗಿ ಟೊಂಕ ಕಟ್ಟಿ ನಿಂತವರು ಇವರು. ಆದರೆ ಶೇಖ್ ಹಸೀನಾ ಜತೆ ಎಣ್ಣೆ-ಸೀಗೆಕಾಯಿ ಸ್ನೇಹ ಹೊಂದಿದ್ದರು. ಹಸೀನಾ ಸರ್ಕಾರ ಇವರ ಮೇಲೆ ಭ್ರಷ್ಟಾಚಾರ ಆರೋಪ ಹೊರಿಸಿತ್ತು.