ಸಾರಾಂಶ
ಬಂಜಾರ ಸಮುದಾಯದವರು ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಗೌಡ ಪಾಟೀಲ ಹೇಳಿದರು.
ಗದಗ: ಬಂಜಾರ ಸಮುದಾಯದವರು ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಗೌಡ ಪಾಟೀಲ ಹೇಳಿದರು.
ಅವರು ನಗರದ ಐಎಂಎ ಹಾಲ್‌ನಲ್ಲಿ ಶ್ರೀನಿವಾಸ ಸೇವಾ ಪ್ರತಿಷ್ಠಾನ ಉದ್ಘಾಟನಾ ಸಮಾರಂಭ ಹಾಗೂ ಶ್ರೀ ಸಂತ ಸೇವಾಲಾಲ 286 ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಶ್ರೀನಿವಾಸ ಸೇವಾ ಪ್ರತಿಷ್ಠಾನದ ಮೂಲಕ ಜನಸೇವೆ ಮಾಡುವ ಉದ್ದೇಶದೊಂದಿಗೆ ಈ ಸೇವಾ ಪ್ರತಿಷ್ಠಾನ ಪ್ರಾರಂಭಿಸಿರುವುದು ಶ್ಲಾಘನೀಯವಾಗಿದೆ ಮತ್ತು ಈ ಪ್ರತಿಷ್ಠಾನಕ್ಕೆ ಸಮಾಜದ ಯುವಕರು ಕೈ ಜೋಡಿಸಿ ಸಮಾಜಪರ ಕೆಲಸ ಮಾಡಬೇಕು ಎಂದರು.
ಶ್ರೀನಿವಾಸ ಸೇವಾ ಪ್ರತಿಷ್ಠಾನ ಅಧ್ಯಕ್ಷ ಸುಭಾಸ ಲಮಾಣಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಜಿ.ಬಿ. ಬಿಡನಾಳ, ಜೈಪಾಲಸಿಂಗ್ ಸಮೋರಕರ, ವೆಂಕಟೇಶ ರಾಠೋಡ, ಐ.ಎಸ್. ಪೂಜಾರ, ದಯಾನಂದ ಪವಾರ, ರವಿಕಾಂತ ಅಂಗಡಿ, ಸುರೇಶ ಮಹಾರಾಜ ಲಮಾಣಿ ಮುಂತಾದವರು ಸನ್ಮಾನಿಸಿ ಗೌರವಿಸಲಾಯಿತು.ಸನ್ಮಾನ ಸ್ವೀಕರಿಸಿ ಡಾ.ಜಿ.ಬಿ. ಬಿಡನಾಳ ಮುಂತಾದವರು ಮಾತನಾಡಿದರು. ಪ್ರಾಸ್ತಾವಿಕವಾಗಿ ಚಂದ್ರಕಾಂತ ಚವ್ಹಾಣ ಮಾತನಾಡಿದರು. ರಾಘು ಶಾಂತಗೇರಿ ನಿರೂಪಿಸಿದರು. ಡಾ. ಸಂಜೀವ ನಾರಪ್ಪನವರ, ಎಂ.ಓ. ಅಸುಂಡಿ, ಶಿವಪ್ಪ ನಾಯಕ, ಲಕ್ಷ್ಮಣ ಲಮಾಣಿ, ಚನ್ನಪ್ಪ ಲಮಾಣಿ, ತೇಜಪ್ಪ ಲಮಾಣಿ, ತೇಜಪ್ಪ ಕಟ್ಟಿಮನಿ, ಸುರೇಶ ಪವಾರ, ಲೋಕೇಶ ಕಟ್ಟಿಮನಿ, ಕುಬೇರಪ್ಪ ಪವಾರ, ವಿಠ್ಠಲ ಪೂಜಾರ, ಠಾಕ್ರಪ್ಪ ಚನ್ನಳ್ಳಿ, ಠಾಕೂರ ಲಮಾಣಿ, ಮಲ್ಲಿಕಾರ್ಜುನ ಖಂಡಮ್ಮನವರ, ಉಮೇಶ ಲಮಾಣಿ, ರೂಪಾಬಾಯಿ ಜಾಧವ ಮುಂತಾದವರು ಹಾಜರಿದ್ದರು.