ಬಂಜಾರ ಸಮಾಜದ ಬೆಂಬಲ ಕಾಂಗ್ರೆಸ್‌ಗೆ: ಅರ್ಜುನ ರಾಠೋಡ,

| Published : Apr 22 2024, 02:15 AM IST

ಸಾರಾಂಶ

ಇಂಡಿ: ಒಳ ಮೀಸಲಾತಿ ಜಾರಿಗೆ ತಂದು ಬಂಜಾರ ಸಮಾಜಕ್ಕೆ ಅನ್ಯಾಯ ಮಾಡಿದ ಬಿಜೆಪಿ ಸರ್ಕಾರಕ್ಕೆ ಈ ಬಾರಿ ಬಂಜಾರ ಸಮಾಜ ತಕ್ಕ ಪಾಠ ಕಲಿಸಲಿದೆ. ಈಗಾಗಲೇ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ನಮ್ಮ ಸಮಾಜ ತಕ್ಕ ಪಾಠ ಕಲಿಸಿದ್ದು, ಲೋಕಸಭಾ ಚುನಾವಣೆಯಲ್ಲಿಯೂ ನಮ್ಮ ಶಕ್ತಿ ಏನೆಂಬುದನ್ನು ತೋರಿಸಲಿದ್ದೇವೆ ಎಂದು ಬಂಜಾರ ಸಮಾಜದ ಮುಖಂಡ, ಜಿಪಂ ಮಾಜಿ ಅಧ್ಯಕ್ಷ ಅರ್ಜುನ ರಾಠೋಡ್ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಇಂಡಿ: ಒಳ ಮೀಸಲಾತಿ ಜಾರಿಗೆ ತಂದು ಬಂಜಾರ ಸಮಾಜಕ್ಕೆ ಅನ್ಯಾಯ ಮಾಡಿದ ಬಿಜೆಪಿ ಸರ್ಕಾರಕ್ಕೆ ಈ ಬಾರಿ ಬಂಜಾರ ಸಮಾಜ ತಕ್ಕ ಪಾಠ ಕಲಿಸಲಿದೆ. ಈಗಾಗಲೇ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ನಮ್ಮ ಸಮಾಜ ತಕ್ಕ ಪಾಠ ಕಲಿಸಿದ್ದು, ಲೋಕಸಭಾ ಚುನಾವಣೆಯಲ್ಲಿಯೂ ನಮ್ಮ ಶಕ್ತಿ ಏನೆಂಬುದನ್ನು ತೋರಿಸಲಿದ್ದೇವೆ ಎಂದು ಬಂಜಾರ ಸಮಾಜದ ಮುಖಂಡ, ಜಿಪಂ ಮಾಜಿ ಅಧ್ಯಕ್ಷ ಅರ್ಜುನ ರಾಠೋಡ್ ಹೇಳಿದ್ದಾರೆ.

ಪಟ್ಟಣದ ಖಾಸಗಿ ಹೊಟೆಲ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕದಲ್ಲಿ ಬಂಜಾರ ಸಮಾಜ 45 ಲಕ್ಷ ಜನಸಂಖ್ಯೆ ಇದೆ. ವಿಜಯಪುರ ಜಿಲ್ಲೆಯಲ್ಲಿ ಅತಿ ಹೆಚ್ಚು ತಾಂಡಗಳು ಅಂದರೆ 518 ತಾಂಡಾಗಳು ಜಿಲ್ಲೆಯಲ್ಲಿವೆ. ಇಂಡಿ ತಾಲೂಕಿನಲ್ಲಿ 42 ತಾಂಡಗಳಿವೆ ಎಂದು ಮಾಹಿತಿ ನೀಡಿದರು.

ಬಿಜೆಪಿ ಸರ್ಕಾರ ಅವೈಜ್ಞಾನಿಕ ವರದಿ ಸಲ್ಲಿಸಿ ಒಳ ಮೀಸಲಾತಿ ಜಾರಿಗೆ ತಂದಿದ್ದು, ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಮ್ಮದೇ ಸಮಾಜದ ಪಿ.ರಾಜೀವ್, ಪ್ರಭು ಚೌಹಾಣ್, ಗೋವಿಂದ ಕಾರಜೋಳ ಹಾಗೂ ರಮೇಶ ಜಿಗಿಜಿಣಗಿ ಅವರು ನಮ್ಮ ಸಮಾಜವನ್ನು ಪರಿಶಿಷ್ಟ ಜಾತಿಯಿಂದ ತೆಗೆಯಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದರು.

ಪುರಸಭೆ ಸದಸ್ಯ ಲಿಂಬಾಜಿ ರಾಠೋಡ ಮಾತನಾಡಿದರು. ಈ ವೇಳೆ ಶಂಕರ ಚೌಹಾಣ, ವಿಶ್ವನಾಥ ಚೌಹಾಣ, ಶೇಖರ ನಾಯಕ, ಅಶೋಕ ನಾಯಕ, ಲಿಂಬಾಜಿ ರಾಠೋಡ್, ಭೀಮು ರಾಠೋಡ್, ರಾಜು ಪವಾರ, ಶೈಲಾಜಿ ಜಾದವ, ನಾರಾಯಣ ಚೌಹಾಣ್, ಕಾಶೀನಾಥ ಪವಾರ, ಮೇಘನಾಥ ಚೌಹಾಣ, ಶಿವಾಜಿ ಚೌಹಾಣ್, ಸಂಜು ಚೌಹಾಣ್, ಸುನಿಲ ರಾಠೋಡ್, ಗೋಪಾಲ ಚೌಹಾಣ, ಮೋಹನ ರಾಠೋಡ, ಗಣೇಶ ರಾಥೋಡ, ರಾಜು ಪವಾರ ಸೇರಿದಂತೆ ಇನ್ನಿತರರು ಇದ್ದರು.