ಸಾರಾಂಶ
ಕರ್ನಾಟಕ ಬ್ಯಾಂಕ್ ತರೀಕೆರೆ ಶಾಖೆಯ 64ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದ ಉದ್ಘಾಟನೆಯನ್ನು ಶಿವಮೊಗ್ಗ ಕರ್ನಾಟಕ ಬ್ಯಾಂಕ್ ಪ್ರಾದೇಶಿಕ ಕಚೇರಿ ಸಹಾಯಕ ಮಹಾ ಪ್ರಬಂದಕರಾದ ನಾಗರಾಜ್ ಎಚ್. ಎ. ನೆರವೇರಿಸಿದರು.
ಕನ್ನಡಪ್ರಭ ವಾರ್ತೆ ತರೀಕೆರೆ
ಗ್ರಾಹಕರ ಸಹಕಾರದಿಂದ ಬ್ಯಾಂಕ್ ಅಭಿವೃದ್ದಿಯಾಗುತ್ತದೆ ಎಂದು ಶಿವಮೊಗ್ಗ ಕರ್ಣಾಟಕ ಬ್ಯಾಂಕ್ ಪ್ರಾದೇಶಿಕ ಕಚೇರಿ ಸಹಾಯಕ ಮಹಾ ಪ್ರಬಂದಕರಾದ ನಾಗರಾಜ. ಎಚ್.ಎ ಹೇಳಿದ್ದಾರೆ.ಪಟ್ಟಣದ ಕರ್ಣಾಟಕ ಬ್ಯಾಂಕ್ ವತಿಯಿಂದ ಬ್ಯಾಂಕ್ ಅವರಣದಲ್ಲಿ ಏರ್ಪಡಿಸಲಾಗಿದ್ದ ಕರ್ನಾಟಕ ಬ್ಯಾಂಕ್ ತರೀಕೆರೆ ಶಾಖೆಯ 64ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಬ್ಯಾಂಕ್ ಸಿಬ್ಬಂದಿಗೆ ಉತ್ತಮ ತರಬೇತಿ ನೀಡಲಾಗುತ್ತಿದ್ದು, ಗ್ರಾಹಕರ ನಂಬಿಕೆ ಉಳಿಸಿಕೊಳ್ಳುವುದು ಬ್ಯಾಂಕ್ ನ ಜವಾಬ್ದಾರಿಯಾಗಿರುತ್ತದೆ, ತರೀಕೆರೆ ಶಾಖೆಯು 138 ಕೋಟಿ ರು.ವ್ಯವಹಾರ ನೆಡೆಸಿದ್ದು, ಎಲ್ಲರಿಗೂ ಉತ್ತಮ ಸೇವೆ ನೀಡುತ್ತಿದೆ, ಎಲ್ಲರ ಸಹಕಾರದಿಂದ ಕರ್ಣಾಟಕ ಬ್ಯಾಂಕ್ ತರೀಕೆರೆ ಶಾಖೆ ಹೆಚ್ಚು ಅಭಿವೃದ್ಧಿ ಹೊಂದಲಿ ಎಂದು ಆಶಿಸಿದರು.ಕರ್ಣಾಟಕ ಬ್ಯಾಂಕ್ ತರೀಕೆರೆ ಶಾಖೆ ವ್ಯವಸ್ಥಾಪಕರಾದ ಶಶಿಧರ್ ಎ.ಒ. ಮಾತನಾಡಿ, ಕರ್ಣಾಟಕ ಬ್ಯಾಂಕ್ ತರೀಕೆರೆ ಶಾಖೆ 64ನೇ ವರ್ಷದ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವುದು ಎಲ್ಲರಿಗೂ ಸಂತೋಷ ತಂದಿದೆ. ಬ್ಯಾಂಕ್ ನ ಯಶಸ್ವಿಗೆ ಗ್ರಾಹಕರ ಸಹಕಾರವೇ ಮುಖ್ಯ ಕಾರಣ ಎಂದು ಹೇಳಿದರು.
ಮಾಜಿ ಪುರಸಭಾಧ್ಯಕ್ಷ ಟಿ.ಜೆ.ಗೋಪಿಕುಮಾರ್ ಮಾತನಾಡಿ, ಗ್ರಾಹಕರು ಮತ್ತು ಬ್ಯಾಂಕಿನ ಸಿಬ್ಬಂದಿ ವರ್ಗದವರಿಂದ ಮಾತ್ರ ಬ್ಯಾಂಕ್ ಅಭಿವೃದ್ದಿ ಸಾಧ್ಯವಾಗುತ್ತದೆ ಎಂದರು.ಇದೇ ವೇಳೆ ಬ್ಯಾಂಕ್ ನ ಪ್ಯಾನಲ್ ಇಂಜಿನಿಯರ್ ಎಚ್.ಸಿ.ಗೋಪಾಲಕೃಷ್ಣ ಮಾತನಾಡಿದರು. ಕಾರ್ಯಕ್ರಮದಲ್ಲಿ ಬ್ಯಾಂಕ್ ಸಿಬ್ಬಂದಿಗಳಾದ ಗಿರೀಶ್ ಮಯ್ಯ, ಕಾವ್ಯಶ್ರೀ, ಛಾಯಾ, ಪ್ರಭುಕುಮಾರ್, ವೆಂಕಟೇಶ್, ಶಮಂತ, ಅನಂತೇಶ, ಅನ್ನಪೂರ್ಣ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.