ಬಂಕ್ ಹಣ ದುರ್ಬಳಕೆ ಮಾಡಿಕೊಂಡಿಲ್ಲ: ನೌಕರ ಸ್ಪಷ್ಟನೆ

| Published : Apr 12 2025, 12:45 AM IST

ಬಂಕ್ ಹಣ ದುರ್ಬಳಕೆ ಮಾಡಿಕೊಂಡಿಲ್ಲ: ನೌಕರ ಸ್ಪಷ್ಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಹಿರಿಯ ಸಹಕಾರಿ ಅಧಕಾರಿಗಳಿಗೆ ಚಿನ್ನಸ್ವಾಮಿ ತನಗೆ ಅನ್ಯಾಯವಾಗಿದೆ ಎಂದು ನೀಡಿರುವ ದೂರು ಪ್ರತಿ.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಟಿಎಪಿಸಿಎಂಎಸ್ ಸ್ವಾಧೀನದಲ್ಲಿರುವ ಪೆಟ್ರೋಲ್ ಬಂಕ್‌ನಲ್ಲಿ ಜರುಗಿರುವ ಹಣ ವ್ಯತ್ಯಾಸಕ್ಕೆ ನಾನು ಹೊಣೆಯಲ್ಲ. ನಾನು ತಪ್ಪೇ ಮಾಡಿಲ್ಲ, ಆದರೂ ಈಗಿನ ಪ್ರಭಾರಿ ಕಾರ್ಯದರ್ಶಿ ನನಗೆ ನೋಟಿಸ್ ನೀಡದೆ 2021ರಿಂದ 3 ವರ್ಷಗಳಲ್ಲಿನ ವ್ಯತ್ಯಾಸದ ಹಣ 90 ಸಾವಿರ ಪಾವತಿಸಿ ಕೆಲಸಕ್ಕೆ ಬಾ, ಅಲ್ಲಿ ತನಕ ಬರಬೇಡ ಎಂನ್ನುತ್ತಿದ್ದಾರೆ ಎಂದು ದೂರಿದರು.

ನನ್ನನ್ನು ಕೆಲಸಕ್ಕೆ ಸೇರಿಸದೆ 9 ದಿನಗಳಿಂದ ಕಿರುಕುಳ ನೀಡುತ್ತಿದ್ದಾರೆ ಎಂದು ಡಿಗ್ರೂಪ್ ನೌಕರ ಚಿನ್ನಸ್ವಾಮಿ ಸಹಕಾರ ಸಂಘಗಳ ಮೈಸೂರಿನ ಜಂಟಿ ನಿಬಂಧಕರು, ಚಾ.ನಗರದ ಉಪನಿಬಂಧಕರು ಸೇರಿದಂತೆ ಹಲವು ಅಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸಿದ್ದಾರೆ. ಪ್ರಭಾರಿ ಕಾರ್ಯದರ್ಶಿ ಲಿಂಗರಾಜು ನನಗೆ 2021, 2022, 2023 ಮತ್ತು 2024ರಲ್ಲಿನ ವ್ಯತ್ಯಾಸದ ಹಣ 90 ಸಾವಿರ ಕಟ್ಟು ಎಂದು ನನ್ನನ್ನು ಬಂಕ್ ಕೆಲಸಕ್ಕೆ ಸೇರಿಸದೆ, ಹಾಜರಾತಿ ಪುಸ್ತಕ ನೀಡದೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ, ನಾನು ತಪ್ಪು ಮಾಡಿಲ್ಲ, 2021ರ ಹಳೆ ಬಾಕಿಗೂ ನನಗೂ ಸಂಬಂಧವಿಲ್ಲ ಎಂದರೂ ಸಹಾ ಕೇಳುತ್ತಿಲ್ಲ, ಹಾಜರಾತಿ ಪುಸ್ತಕ ಸಹಾ ನೀಡುತ್ತಿಲ್ಲ, ಕಳೆದ 20ವರ್ಷಗಳಿಂದ ಕೆಲಸ ಮಾಡುತ್ತಿರುವ ನನಗೆ ಹಿಂದಿನಿಂದಲೂ ಇವರು ಕಿರುಕುಳ ನೀಡುತ್ತಲೆ ಬಂದಿದ್ದು ನನ್ನದಲ್ಲದೆ ತಪ್ಪಿಗೆ ನಾನು ಏಕೆ 90ಸಾವಿರ ಪಾವತಿಸಬೇಕು ಎಂದು ಹಿರಿಯ ಅಧಿಕಾರಿಗಳಿಗೆ ನೌಕರ ನೀಡಿರುವ ದೂರಿನಲ್ಲಿ ತನ್ನ ಅಳಲು ತೋಡಿಕೊಂಡಿದ್ದು ಬಂಕ್ ವ್ಯವಸ್ಥಾಪಕರೂ ಪ್ರಭಾರಿ ಕಾರ್ಯದರ್ಶಿಗಳೆ ಆಗಿದ್ದು ಯಾರೋ ಮಾಡಿದ ತಪ್ಪಿಗೆ ನನ್ನನು ಹೊಣೆಗಾರರನ್ನಾಗಿಸಲು ಹೊರಟಿದ್ದಾರೆ, ನನಗೆ ನ್ಯಾಯ ದೊರಕಿಸಿಕೊಡಬೇಕು, ಇಲ್ಲದಿದ್ದರೆ ಪ್ರಭಾರಿ ಕಾರ್ಯದರ್ಶಿ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳದೆ ವಿಧಿ ಇಲ್ಲ ಎಂದು ನೌಕರ ಚಿನ್ನಸ್ವಾಮಿ ಲಿಖಿತ ದೂರಿನಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಘಟನೆ ಕುರಿತು ನಿರ್ದೇಶಕರು ಏನಂತಾರೆ?

ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ಟಿಎಪಿಸಿಎಂಎಸ್ ಬೋರ್ಡ್‌ನ ನಿರ್ದೇಶಕ ಅಜ್ಜಿಪುರ ಮುರಳಿ ಬಂಕ್‌ನಲ್ಲಿ 1.40 ಲಕ್ಷಕ್ಕೂ ಅಧಿಕ ಹಣ ಕಳೆದ ವರ್ಷ ವ್ಯತ್ಯಾಸವಾಗಿದೆ. ಮೂರು ನೌಕರರ ಪೈಕಿ ಇಬ್ಬರು 40 ಸಾವಿರಕ್ಕೂ ಅಧಿಕ ಹಣ ಕಟ್ಟಿದ್ದಾರೆ. 2021, 2022ರ ಹಣ ಪಾವತಿಸಲು ನೌಕರ ಚಿನ್ನಸ್ವಾಮಿ ಮೌಖಿಕ ಸೂಚಿಸಿರುವ ಹಾಗೂ ಕೆಲಸಕ್ಕೆ ಸೇರಿಸದಿರುವ ಕುರಿತು ನನಗೆ ಮಾಹಿತಿ ಲಭ್ಯವಿಲ್ಲ. ನಾವು ಭೇಟಿ ನೀಡಿದ ವೇಳೆ 2024ರ ಲೆಕ್ಕ ತಪಾಸಣೆ ಮಾಡಿದ್ದೇವೆ, 2021ರ ಲೆಕ್ಕ ವೀಕ್ಷಿಸಿಲ್ಲ, ಈ ಕುರಿತು ನೋಟಿಸ್ ನೀಡಿ ಹಣ ವಸೂಲಿ ಮಾಡಿ, ಇಲ್ಲ ನೀವೆ ಕಟ್ಟಿ ಎಂದು ಸೂಚಿಸಲಾಗಿದೆ ಎಂದರು.