ಜಗಳೂರಲ್ಲಿ ಅಖಿಲ ಭಾರತ ವೀರಶೈವ ಸಮಾಜ ಹೆಸರಲ್ಲಿ ಬ್ಯಾಂಕ್

| Published : Jul 17 2024, 12:58 AM IST

ಸಾರಾಂಶ

ಅಖಿಲ ಭಾರತ ವೀರಶೈವ ಸಮಾಜ ಹೆಸರಿನಲ್ಲಿ ಜಗಳೂರುನಲ್ಲಿ ಬ್ಯಾಂಕ್ ತೆರೆಯಲಾಗುವುದು. ಸಮಾಜದ ಅಭಿವೃದ್ಧಿಗೆ ವೈಯಕ್ತಿಕವಾಗಿ ಬ್ಯಾಂಕಿನಲ್ಲಿ ₹5 ಲಕ್ಷ ಠೇವಣಿ ಇಡಲಾಗುವುದು ಎಂದು ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಅಜ್ಜಯ್ಯ ನಾಡಿಗರ್ ಜಗಳೂರಲ್ಲಿ ಹೇಳಿದ್ದಾರೆ.

- ಮಹಾಸಭಾ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಅಜ್ಜಯ್ಯ ನಾಡಿಗರ್

- - - ಕನ್ನಡಪ್ರಭ ವಾರ್ತೆ ಜಗಳೂರು

ಅಖಿಲ ಭಾರತ ವೀರಶೈವ ಸಮಾಜ ಹೆಸರಿನಲ್ಲಿ ಜಗಳೂರುನಲ್ಲಿ ಬ್ಯಾಂಕ್ ತೆರೆಯಲಾಗುವುದು. ಸಮಾಜದ ಅಭಿವೃದ್ಧಿಗೆ ವೈಯಕ್ತಿಕವಾಗಿ ಬ್ಯಾಂಕಿನಲ್ಲಿ ₹5 ಲಕ್ಷ ಠೇವಣಿ ಇಡಲಾಗುವುದು ಎಂದು ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಅಜ್ಜಯ್ಯ ನಾಡಿಗರ್ ಹೇಳಿದರು.

ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವೀರಶೈವ ಸಮಾಜವು ತಾಲೂಕಿನಲ್ಲಿ ದೊಡ್ಡ ಜನಸಂಖ್ಯೆ ಹೊಂದಿದೆ. ನಮ್ಮಲ್ಲಿರುವ ಒಳಪಂಗಡಗಳನ್ನು ಒಗ್ಗೂಡಿಸಿ ಸಂಘಟಿತರಾಗಬೇಕಾಗಿದೆ. ತಾಲೂಕಿನಲ್ಲಿ ೫ ಸಾವಿರ ಸದಸ್ಯತ್ವ ಗುರಿ, ವೀರಶೈವ ಜನಾಂಗವಿರುವ ಪ್ರತಿ ಹಳ್ಳಿಯಲ್ಲೂ ಸ್ಮಶಾನ ಮಂಟಪ ವಿತರಿಸಲು ಚಿಂತನೆ ಇದೆ ಎಂದರು.

ಮಹಾಸಭಾ ಸದಸ್ಯ ಎನ್.ಎಸ್ .ರಾಜು ಮಾತನಾಡಿ, ಸಮಾಜಕ್ಕೆ ಉಪಯೋಗವಾಗುವ ಕೆಲಸ ಮಾಡಬೇಕು. ಬಡಕುಟುಂಬಗಳಿಗೆ ಆರ್ಥಿಕ ನೆರವು ನೀಡಬೇಕು. ಒಗ್ಗಟ್ಟಾಗಿ ಕೆಲಸ ಮಾಡಿ ಸಮಾಜದ ಅಭಿವೃದ್ಧಿಗೆ ಗಮನಹರಿಸಬೇಕು ಎಂದರು.

ವೈ.ಎನ್. ಮಂಜುನಾಥ್ ಮಾತನಾಡಿ, ಸಮಾಜ ಕಟ್ಟಿ ಬೆಳೆಸುವುದು ತುಂಬ ಕಷ್ಟವಾಗಿದೆ. 12 ವರ್ಷಗಳ ಕಾಲ ಪ್ರಧಾನ ಕಾರ್ಯದರ್ಶಿಯಾಗಿ ಆಡಳಿತ ಮಾಡಿದ ಸೇವೆ ತೃಪ್ತಿ ತಂದಿದೆ ಎಂದರು.

ಜಿ.ಎಸ್. ವೀಣಾ ರಾಜು ಮಾತನಾಡಿ, ವೀರಶೈವ ಸಮಾಜ ಅಭಿವೃದ್ಧಿ ಶ್ರಮಿಸಲಾಗುವುದು. ಸಂಘದ ಬೆಳವಣಿಗೆಗೆ ₹2 ಲಕ್ಷ ಠೇವಣಿ ಇಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭ ಚುನಾವಣಾಧಿಕಾರಿ ಜಿ.ಎಸ್. ಸುಭಾಷ್ ಚಂದ್ರ ಬೋಸ್, ಸಹಾಯಕ ಚುನಾವಣಾಧಿಕಾರಿ ಜಗನ್ನಾಥ್, ಸದಸ್ಯರಾದ ದಿದ್ದಿಗಿ ಕರಿಬಸವನಗೌಡ, ಎಸ್.ಕೆ. ಮಂಜುನಾಥ್, ಎನ್.ಎಂ. ಹಾಲಸ್ವಾಮಿ, ಗೋಡೆ ಪ್ರಕಾಶ್, ಎಂ.ಎನ್. ವೀರೇಂದ್ರ ಪಾಟೀಲ್, ಹನುಮಂತಾಪುರ ಬಸವರಾಜ್, ಸಿ.ಟಿ. ಬಸವರಾಜ್, ವೀರಭದ್ರಪ್ಪ, ಗೌರಿಪುರ ಶಿವಣ್ಣ, ವಾಣಿ. ಎಸ್.ಟಿ., ರೇಖಾ ಎಂ.ಎಸ್., ಕುಸುಮಾ, ಆಶಾ ಆರ್.ವಿ., ಶೋಭಾ ಎಂ.ಆರ್., ಗೌರಿಪುರ ಶಿವಣ್ಣ, ಮುಖಂಡರಾದ ತಿಪ್ಪೇಸ್ವಾಮಿ, ಗೋಗುದ್ದ ರಾಜಣ್ಣ ಮತ್ತಿತರರಿದ್ದರು.

- - - -16ಜೆಎಲ್‌ಆರ್‌1:

ಜಗಳೂರು ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ನೂತನ ಪದಾಧಿಕಾರಿಗಳಿಗೆ ಚುನಾವಣಾಧಿಕಾರಿ ಸುಭಾಷ್‌ಚಂದ್ರ ಬೋಸ್ ಪ್ರಮಾಣ ಪತ್ರ ವಿತರಿಸಿದರು.