ಬಂಕಾಪುರ ಹಿಂದೂ ಮಹಾ ಗಣಪತಿ ವಿಸರ್ಜನೆ, ಬೃಹತ್ ಶೋಭಾಯಾತ್ರೆ

| Published : Sep 28 2024, 01:29 AM IST

ಬಂಕಾಪುರ ಹಿಂದೂ ಮಹಾ ಗಣಪತಿ ವಿಸರ್ಜನೆ, ಬೃಹತ್ ಶೋಭಾಯಾತ್ರೆ
Share this Article
  • FB
  • TW
  • Linkdin
  • Email

ಸಾರಾಂಶ

ಹಿಂದೂ ಮಹಾ ಗಣಪತಿಯ ಶೋಭಾಯಾತ್ರೆಯ ಮೆರವಣಿಗೆಗೆ ಬಂಕಾಪುರ ಅರಳೆಲೆ ಹಿರೇಮಠದ ಶ್ರೀಗಳಾದ ರೇವಣಸಿದ್ದೇಶ್ವರ ಮಹಾಸ್ವಾಮಿಗಳು ಹಾಗೂ ಕೆಂಡದ ಮಠದ ಶ್ರೀಗಳಾದ ಸಿದ್ದೇಶ್ವರ ಮಹಾಸ್ವಾಮಿಗಳು ವಿಶೇಷ ಪೂಜೆಯೊಂದಿಗೆ ಚಾಲನೆ ನೀಡಿದರು.

ಬಂಕಾಪೂರ: ಹಿಂದೂ ಮಹಾ ಗಣಪತಿಯ ಶೋಭಾಯಾತ್ರೆಯ ಮೆರವಣಿಗೆಗೆ ಬಂಕಾಪುರ ಅರಳೆಲೆ ಹಿರೇಮಠದ ಶ್ರೀಗಳಾದ ರೇವಣಸಿದ್ದೇಶ್ವರ ಮಹಾಸ್ವಾಮಿಗಳು ಹಾಗೂ ಕೆಂಡದ ಮಠದ ಶ್ರೀಗಳಾದ ಸಿದ್ದೇಶ್ವರ ಮಹಾಸ್ವಾಮಿಗಳು ವಿಶೇಷ ಪೂಜೆಯೊಂದಿಗೆ ಚಾಲನೆ ನೀಡಿದರು. ೨೧ ದಿನಗಳ ಕಾಲ ಸತತವಾಗಿ ವಿಶೇಷ ಪೂಜೆ ಹಾಗೂ ದಿನನಿತ್ಯ ಅನ್ನಸಂತರ್ಪಣೆಯೊಂದಿಗೆ ಸುತ್ತಮುತ್ತಲಿನ ಗ್ರಾಮಸ್ಥರ ಭಕ್ತಿಗೆ ಕಾರಣನಾದ ಹಿಂದೂ ಮಹಾ ಗಣಪತಿ ವಿಸರ್ಜನಾ ಬೃಹತ್ ಶೋಭಾಯಾತ್ರೆಯು ಜರುಗಿತು. ಮೆರವಣಿಗೆಯು ಮುಂದೆ ಸಾಗುತ್ತಿದ್ದಂತೆ ಮಳೆಯನ್ನೂ ಲೆಕ್ಕಿಸದೇ ಡಿಜೆ ಅಬ್ಬರಕ್ಕೆ ಸುತ್ತ ಮುತ್ತಲಿನ ಗ್ರಾಮದ ಜನರು, ಚಿಕ್ಕಮಕ್ಕಳು ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು. ರಸ್ತೆಯುದ್ದಕ್ಕೂ ಭದ್ರತೆಗಾಗಿ ಪೊಲೀಸ ಬಂದೋಬಸ್ತ್ ಕಲ್ಪಿಸಿದ್ದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯೊಂದಿಗೆ ಗಣಪತಿಯ ಮೂರ್ತಿಯನ್ನು ಎಂದಿನಂತೆ ಸಾಂಪ್ರದಾಯಿಕವಾಗಿ ವಿಸರ್ಜನೆ ಮಾಡಲಾಯಿತು.ಇದಕ್ಕೂ ಮುನ್ನ ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಅವರು ಗಣಪತಿಗೆ ಪೂಜೆ ಸಲ್ಲಿಸಿ, ನಂತರ ಮೆರವಣಿಗೆಯಲ್ಲಿ ಪಾಲ್ಗೊಂಡರು.