ಉಡುಪಿ: ಇಲ್ಲಿನ ಬನ್ನಂಜೆ ಶ್ರೀ ಶನಿ ಕ್ಷೇತ್ರದಲ್ಲಿ ಶ್ರೀ ಶನಿ ದೇವರ 23 ಅಡಿ ಎತ್ತರದ ಏಕಶಿಲಾ ವಿಗ್ರಹದ ಸನ್ನಿಧಿಯಲ್ಲಿ ಶ್ರೀ ಬನ್ನಂಜೆ ರಾಘವೇಂದ್ರ ತೀರ್ಥ ಶ್ರೀಪಾದರ ಮಾರ್ಗದರ್ಶನದಲ್ಲಿ ಚಂದ್ರ ಮಂಡಲ ರಥೋತ್ಸವ ಅದ್ದೂರಿಯಾಗಿ ನಡೆಯಿತು.
ಉಡುಪಿ: ಇಲ್ಲಿನ ಬನ್ನಂಜೆ ಶ್ರೀ ಶನಿ ಕ್ಷೇತ್ರದಲ್ಲಿ ಶ್ರೀ ಶನಿ ದೇವರ 23 ಅಡಿ ಎತ್ತರದ ಏಕಶಿಲಾ ವಿಗ್ರಹದ ಸನ್ನಿಧಿಯಲ್ಲಿ ಶ್ರೀ ಬನ್ನಂಜೆ ರಾಘವೇಂದ್ರ ತೀರ್ಥ ಶ್ರೀಪಾದರ ಮಾರ್ಗದರ್ಶನದಲ್ಲಿ ಚಂದ್ರ ಮಂಡಲ ರಥೋತ್ಸವ ಅದ್ದೂರಿಯಾಗಿ ನಡೆಯಿತು.ಕೊರಂಗ್ರಪಾಡಿ ಕುಮಾರಗುರು ತಂತ್ರಿ ನೇತೃತ್ವದಲ್ಲಿ ಧಾರ್ಮಿಕ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಇಲ್ಲಿನ ಶ್ರೀ ರಾಮ ವಿಠಲ ಹಾಗೂ ಶ್ರೀ ಶನೈಶ್ವರಸ್ವಾಮಿ ಸನ್ನಿಧಿಯಲ್ಲಿ ಕೊಳಲು ವಾದನ, ಮಂಗಳವಾದ್ಯ, ಚಂಡೆ ವಾದನಗಳು ರಥೋತ್ಸವಕ್ಕೆ ಇನ್ನಷ್ಟು ದೈವಿಕ ಕಳೆ ನೀಡಿದವು. ಸಾವಿರಾರು ಭಕ್ತರು ಶನಿ ದೇವರಿಗೆ ಎಳ್ಳುಗಂಟು ದೀಪ ಬೆಳಗಿಸಿ, ಪ್ರಸಾದ ಸ್ವೀಕರಿಸಿದರು. ಈ ಎಲ್ಲ ಕಾರ್ಯಕ್ರಮಗಳಲ್ಲಿ ದೇವಳದ ಪ್ರಧಾನ ಅರ್ಚಕ ಸತ್ಯನಾರಾಯಣ ಆಚಾರ್ಯ, ಪ್ರಮುಖರಾದ ವಿಜಯಲಕ್ಷ್ಮೀ ಆಚಾರ್ಯ, ಯತೀಶ್ ಆಚಾರ್ಯ, ಪ್ರತೀಕ್ ಅಚಾರ್ಯ ಹಾಗೂ ನೂರಾರು ಭಕ್ತರು ಉಪಸ್ಥಿತರಿದ್ದರು, ಇದೇ ಸಂದರ್ಭ ಶ್ರೀ ರಾಮವಿಠಲ ವೇದಿಕೆಯಲ್ಲಿ ಗೋಕುಲ ದ್ವನಿ ಕರ್ನಾಟಕ ಕಲಾಶ್ರೀ ವಿದ್ವಾನ್ ಎಚ್.ಎಸ್. ವೇಣುಗೋಪಾಲ್ ಬೆಂಗಳೂರು ತಂಡದವರಿಂದ ಕೊಳಲು ವಾದನ ನಡೆಯಿತು.