ಸಾರಾಂಶ
ವಸಂತನಗರದ ಸ್ಯಾಂಕಿ ರಸ್ತೆ, ರೇನ್ ಟ್ರಿ ಬೊಲೆ ವಾರ್ಡ್ ಕಟ್ಟಡ ಹತ್ತಿರ ಅಳವಡಿಸಿದ್ದ ಅನಧಿಕೃತ ಬ್ಯಾನರನ್ನು ತೆರವುಗೊಳಿಸಿ, ಅಳವಡಿಸಿದ್ದವರಿಗೆ ಬಿಬಿಎಂಪಿಯು ₹50 ಸಾವಿರ ದಂಡ ವಿಧಿಸಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ವಸಂತನಗರದ ಸ್ಯಾಂಕಿ ರಸ್ತೆ, ರೇನ್ ಟ್ರಿ ಬೊಲೆ ವಾರ್ಡ್ ಕಟ್ಟಡ ಹತ್ತಿರ ಅಳವಡಿಸಿದ್ದ ಅನಧಿಕೃತ ಬ್ಯಾನರನ್ನು ತೆರವುಗೊಳಿಸಿ, ಅಳವಡಿಸಿದ್ದವರಿಗೆ ಬಿಬಿಎಂಪಿಯು ₹50 ಸಾವಿರ ದಂಡ ವಿಧಿಸಿದೆ.ಸ್ಯಾಂಕಿ ರಸ್ತೆ, ರೇನ್ ಟ್ರಿ ಬೊಲೆವಾರ್ಡ್ ಕಟ್ಟಡ ಹತ್ತಿರ ಕೆಪಿಸಿಸಿ ಕೋ-ಅರ್ಡಿನೇಟರ್ ಹಾಗೂ ಎಬಿಡಿ ಗ್ರೂಪ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ರಾಜೀವ್ ಗೌಡ ಅವರು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಜನ್ಮ ದಿನದ ಅಂಗವಾಗಿ ಅನಧಿಕೃತವಾಗಿ ಬ್ಯಾನರನ್ನು ಅಳವಡಿಸಿದ್ದರು.
ಬ್ಯಾನರ್ ಅಳವಡಿಕೆಗೆ ಬಿಬಿಎಂಪಿ ಅನುಮತಿ ಪಡೆದಿರಲಿಲ್ಲ. ಈ ಹಿನ್ನೆಲೆಯಲ್ಲಿ ಬ್ಯಾನರ್ ಅಳವಡಿಕೆ ಮಾಡಿದವರಿಗೆ ₹50 ಸಾವಿರ ದಂಡ ವಿಧಿಸಿ ವಸಂತನಗರದ ಸಹಾಯಕ ಕಂದಾಯ ಅಧಿಕಾರಿ ಆದೇಶಿಸಿದ್ದಾರೆ.