ಬಂಟ್ವಾಳ: ಸಂವಿಧಾನದ ರಕ್ಷಣೆ ಜಾಗೃತಿ ಕಾರ್ಯಕ್ರಮ

| Published : Aug 16 2025, 12:02 AM IST

ಸಾರಾಂಶ

ಸಂವಿಧಾನದ ರಕ್ಷಣೆ ಕುರಿತು ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಆಯೋಜಿಸುವಂತೆ ಕೆಪಿಸಿಸಿ ನಿರ್ದೇಶನ ನೀಡಿದ್ದು, ಈ ಹಿನ್ನೆಲೆಯಲ್ಲಿ ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಜಾಗೃತಿ ಕಾರ್ಯಕ್ರಮ ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಬಿ.ಸಿ. ರೋಡಿನಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಬಂಟ್ವಾಳ

ಇದೇ ಸಂದರ್ಭ ಮಾತನಾಡಿದ‌ ಮಾಜಿ‌ ಸಚಿವ ಬಿ.ರಮಾನಾಥ ರೈ, ರಾಹುಲ್‌ಗಾಂಧಿಯವರು ಮತಕಳ್ಳತನದ‌ ವಿರುದ್ಧ ನಡೆಸುತ್ತಿರುವ ಹೋರಾಟಕ್ಕೆ ತನ್ನ ಬೆಂಬಲವಿದೆ. ಚುನಾವಣಾ ಇಲಾಖೆಯ ವೈಫಲ್ಯದ ಬಗ್ಗೆ ಮಾತನಾಡಿದರೆ, ಅದಕ್ಕೆ ಆ ಇಲಾಖೆಯೇ ಉತ್ತರ ನೀಡಬೇಕಾದ್ದು ನಿಯಮ. ಆದರೆ ಇದಕ್ಕೆ ಬಿಜೆಪಿ ಯಾಕೆ ಉತ್ತರ ನೀಡುವ ಕಾರ್ಯಕ್ಕೆ ಮುಂದಾಗಿದೆ ಎಂದು ಪ್ರಶ್ನಿಸಿದ ಅವರು, ಹಾಗಾದರೆ ಬಿಜೆಪಿಯವರು ಮತಕಳ್ಳರಾ? ಎಂದು ಪ್ರಶ್ನಿಸಿದರು.ಮತಗಳ್ಳತನದ ಪ್ರಕರಣಗಳಿಂದಾಗಿ ಅರ್ಹ ಮತದಾರರಿಗೆ ಅನ್ಯಾಯವಾಗುತ್ತಿದ್ದು, ಪಾರದರ್ಶಕವಾಗಿ ಮತದಾರರ ಪಟ್ಟಿಗೆ ಸೇರ್ಪಡೆ ಕಾರ್ಯ ಆಗಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭ ಕಾಂಗ್ರೆಸ್ ಪ್ರಮುಖರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪದ್ಮಶೇಖರ್ ಜೈನ್, ವಾಸು ಪೂಜಾರಿ, ಬೇಬಿಕುಂದ‌ರ್, ಪಿಯೂಸ್ ಎಲ್ ರೊಡ್ರಿಗಸ್, ಜಯಂತಿ ಪೂಜಾರಿ, ಐಡಾ ಸುರೇಶ್, ನವಾಜ್ ಬಡಕಬೈಲು, ಸುರೇಶ್ ನಾವೂರ, ಡೆಂನ್ಝಿಲ್, ವೆಂಕಪ್ಪ ಪೂಜಾರಿ, ಜಗದೀಶ್ ಕುಂದರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಬಾಲಕೃಷ್ಣ ಅಂಚನ್ ಮತ್ತು ಚಂದ್ರಶೇಖರ್ ಭಂಡಾರಿ ಹಾಗೂ ಅನೇಕ ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.