ಸಿದ್ದಕಟ್ಟೆ ಸಹಕಾರಿ ವ್ಯವಸಾಯಿಕ ಸಂಘ: 3ನೇ ಶಾಖೆ ಉದ್ಘಾಟನೆ

| Published : Feb 10 2024, 01:54 AM IST

ಸಾರಾಂಶ

ಸಂಘದ ವತಿಯಿಂದ ಜನರ ಅನುಕೂಲಕ್ಕಾಗಿ ಸಿದ್ದಕಟ್ಟೆಯಲ್ಲಿ ನೂತನ ಬಸ್ ತಂಗುದಾಣ ಹಾಗೂ ಅಟೋರಿಕ್ಷಾ ತಂಗುದಾಣವನ್ನು ನಿರ್ಮಿಸಲಾಗಿದೆ.

ಕನ್ನಡಪ್ರಭ ವಾರ್ತೆ ಬಂಟ್ವಾಳ

ಬಂಟ್ವಾಳ ತಾಲೂಕಿನ ಸಿದ್ದಕಟ್ಟೆಯಲ್ಲಿ ಕೇಂದ್ರ ಕಚೇರಿ ಹೊಂದಿರುವ ಸಿದ್ದಕಟ್ಟೆ ಸಹಕಾರಿ ವ್ಯವಸಾಯಿಕ ಸಂಘದ 3ನೇ ಶಾಖೆಯ ಉದ್ಘಾಟನಾ ಕಾರ್ಯಕ್ರಮ ಗುರುವಾರ ಎಲಿಯನಡುಗೋಡು ಗ್ರಾಮದ ಮಾವಿನಕಟ್ಟೆ ಎಂಬಲ್ಲಿನ ಚಾಮುಂಡೇಶ್ವರಿ ಕಾಂಪ್ಲೆಕ್ಸ್‌ನಲ್ಲಿ ನಡೆಯಿತು.

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅವರು ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅವರು ನಿತ್ಯ ನಿಧಿ ಠೇವಣಿ ಸಂಗ್ರಹ ಯಂತ್ರವನ್ನು ಮತ್ತು ಪ್ರಥಮ ಠೇವಣಿ ಪತ್ರವನ್ನು ಹಸ್ತಾಂತರಗೊಳಿಸಿದರು

ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಟಿ.ಜಿ.ರಾಜಾರಾಮ ಭಟ್ ಅವರು ಭದ್ರತಾ ಕೊಠಡಿ ಉದ್ಘಾಟಿಸಿದರು. ಕುಕ್ಕಿಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶೇಖರ್ ಶೆಟ್ಟಿ ಗಣಕಯಂತ್ರಕ್ಕೆ ಚಾಲನೆ ನೀಡಿದರು. ಬಂಟ್ವಾಳ ತಾಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘದ ಅಧ್ಯಕ್ಷ ರವೀಂದ್ರ ಕಂಬಳಿ, ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕ್‌ನ ಅಧ್ಯಕ್ಷ ಅರುಣ್ ರೋಶನ್ ಡಿಸೋಜ ಶುಭ ಹಾರೈಸಿದರು.

ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಪ್ರಸ್ತಾವಿಸಿದರು. ಸಂಘದ ವತಿಯಿಂದ ಜನರ ಅನುಕೂಲಕ್ಕಾಗಿ ಸಿದ್ದಕಟ್ಟೆಯಲ್ಲಿ ನೂತನ ಬಸ್ ತಂಗುದಾಣ ಹಾಗೂ ಅಟೋರಿಕ್ಷಾ ತಂಗುದಾಣವನ್ನು ನಿರ್ಮಿಸಲಾಗಿದೆ ಎಂದರು.

ಸಂಘದ ಮಾಜಿ ಅಧ್ಯಕ್ಷ ಗೋಪಿನಾಥ್ ರೈ, ಕುಕ್ಕಿಪಾಡಿ ಗ್ರಾ.ಪಂ. ಉಪಾಧ್ಯಕ್ಷೆ ಬೇಬಿ, ಸದಸ್ಯರಾದ ಯೋಗೀಶ್ ಆಚಾರ್ಯ, ಲಿಂಗಪ್ಪಪೂಜಾರಿ ಸುಜಾತಾ, ಪ್ರತಿಭಾ ಶೆಟ್ಟಿ, ಗೀತಾ,ಪೂರ್ಣಿಮಾ, ಪುಷ್ಪಾ, ಶೋಭಾ, ಚಂದ್ರ, ದಿನೇಶ್ ಸುಂದರ ಶಾಂತಿ, ಕಟ್ಟಡ ಮಾಲಕ ಜಗದೀಶ್ ಶೆಟ್ಟಿ, ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆರತಿ ಶೆಟ್ಟಿ, ನಿರ್ದೇಶಕರಾದ ಸಂದೇಶ ಶೆಟ್ಟಿ ಪೊಡುಂಬ, ರಾಜೇಶ್ ಶೆಟ್ಟಿ ಕೊನೆರಬೆಟ್ಟು, ಹರೀಶ್ ಆಚಾರ್ಯ ರಾಯಿ, ಉಮೇಶ್ ಗೌಡ, ದಿನೇಶ್ ಪೂಜಾರಿ ಹುಲಿಮೇರು, ದೇವರಾಜ್ ಸಾಲ್ಯಾನ್, ಜಾರಪ್ಪ ನಾಯ್ಕ, ವೀರಪ್ಪ ಪರವ, ಅರುಣಾ ಎಸ್.ಶೆಟ್ಟಿ, ವೃತ್ತಿಪರ ನಿರ್ದೇಶಕ ಮಾಧವ ಶೆಟ್ಟಿಗಾರ್, ಸಂಘದ ಕಾನೂನು ಸಲಹೆಗಾರರಾದ ಸುರೇಶ್ ಶೆಟ್ಟಿ, ರಿಚಾರ್ಡ್ ಡಿಕೋಸ್ತಾ, ಲಕ್ಷ್ಮೀನಾರಾಯಣ ಶೆಟ್ಟಿಗಾರ್, ಕೆ. ಶಿವಯ್ಯ, ಸಂಘದ ಎಂಜಿನಿಯರ್‌ ಸಂತೋಷ್ ಸಿದ್ದಕಟ್ಟೆ, ವಿಘ್ನೇಶ್ ರಾಯಿ, ಕಿರಣ್ ಶೆಟ್ಟಿಗಾರ್ ಸಿದ್ದಕಟ್ಟೆ, ಮಾವಿನಕಟ್ಟೆ ಶಾಖೆ ಪ್ರಬಂಧಕ ಜೇಸನ್ ಫೆರ್ನಾಂಡಿಸ್, ಸಂಘದ ಸಿಬಂದಿ ಇದ್ದರು.

ಪ್ರಭಾಕರ ಪ್ರಭು ಸ್ವಾಗತಿಸಿದರು. ನಿರ್ದೇಶಕಿ ಮಂದಾರತಿ ಶೆಟ್ಟಿ ವಂದಿಸಿದರು. ಸಿಬಂದಿ ಸುಭಾಷ್ ನಿರೂಪಿಸಿದರು.