ಸಾರಾಂಶ
ಕನ್ನಡಪ್ರಭ ವಾರ್ತೆ ಪುತ್ತೂರು
ನಗರದ ಬಪ್ಪಳಿಗೆ ಶಿವಾಮೃತ ಫ್ರೆಂಡ್ಸ್ ಆಶ್ರಯದಲ್ಲಿ ಪ್ರಥಮ ವರ್ಷದ ಪಿಲಿಪಜ್ಜೆ ಹುಲಿ ಕುಣಿತ ಪ್ರದರ್ಶನ ನಗರದ ಬಪ್ಪಳಿಗೆ ಸಿಂಗಾಣಿಯ ಹಿಲ್ ಗ್ರೌಂಡ್‌ನಲ್ಲಿ ನಡೆಯಿತು.ಕಾರ್ಯಕ್ರಮದಲ್ಲಿ ಶ್ರೀ ದೇವಿ ಕಲ್ಲೇಗ ಹುಲಿ ವೇಷಧಾರಿಗಳ ತಂಡ ಪ್ರದರ್ಶನ ನೀಡುವ ವೀಕ್ಷಕರ ಗಮನ ಸೆಳೆಯಿತು. ಸುಮಾರು ೫೦೦ ಕ್ಕೂ ಅಧಿಕ ಮಂದಿ ಶ್ರೀದೇವಿ ಕಲ್ಲೇಗ ಹುಲಿ ವೇಷಧಾರಿಗಳು, ವಿವಿಧ ಶೈಲಿಯ ನೃತ್ಯದ ಪ್ರದರ್ಶನ ನೀಡಿದರು. ತೆಂಗಿನಕಾಯಿ ಕೈಯಲ್ಲಿ ಒಡೆಯುವುದು, ನಿಂಬೆ ಹಣ್ಣು ತಲೆಯಲ್ಲಿ ಒಡೆಯುವುದು, ಹಣವನ್ನು ವಿವಿಧ ಭಂಗಿಯಲ್ಲಿ ಹೆಕ್ಕುವುದು, ತೆಂಗಿನ ಕಾಯಿಯ ಸಿಪ್ಪೆಯನ್ನ ಬಾಯಿಯಲ್ಲಿ ಕಚ್ಚಿ ತಗೆಯುವುದು ಹೀಗೆ ಹತ್ತು ಹಲವು ಪ್ರದರ್ಶನ ನೀಡಿ ಗಮನಸೆಳೆದರು.
ಶಿವಾಮೃತ ಫ್ರೆಂಡ್ಸ್ ಬಪ್ಪಳಿಗೆಯ ಶರತ್ ಪುತ್ತೂರು, ಗಿರೀಶ್ ಸಿಂಗಾಣಿ, ಅರುಣ್ ಬಪ್ಪಳಿಗೆ, ಲಿಖಿತ್ ಸಿಂಗಾಣಿ, ಬಾಲಕೃಷ್ಣ ಸಿಂಗಾಣಿ, ಶರತ್ ಬಪ್ಪಳಿಗೆ, ಸಂದೀಪ್ ಬಪ್ಪಳಿಗೆ, ರವಿ ಬಪ್ಪಳಿಗೆ, ಸುರೇಶ್ ನೆಕ್ಕಿತಪುಣಿ, ಗಣೇಶ್ ಸಿಂಗಾಣಿ, ಸುಬ್ರಹ್ಮಣ್ಯ ಸಿಂಗಾಣಿ, ನಿವೃತ್ತ ಸೈನಿಕ ನೀಲಪ್ಪ ಗೌಡ, ಸ್ಟೀವನ್ ವೇಗಸ್ ಮತ್ತಿತರರು ಇದ್ದರು.ಮೊದಲ ಬಾರಿಗೆ ಶಿವಾಮೃತ ಫ್ರೆಂಡ್ಸ್ ಬಪ್ಪಳಿಗೆ ಹುಲಿವೇಷ ಕುಣಿತ ಪ್ರದರ್ಶನ ಮಾಡಿದೆ. ಈಗಾಗಲೇ ಹತ್ತು ಹಲವು ಕಾರ್ಯಕ್ರಮಗಳನ್ನ ಮಾಡಿ ಬಡವರಿಗೆ ನೆರವು, ಚಿಕಿತ್ಸೆಗೆ ಹಣವಿಲ್ಲದವರಿಗೆ ನೆರವು, ಬಡ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡುವ ಮೂಲಕ ಸಮಾಜದಲ್ಲಿ ಗುರುತಿಸಿಕೊಂಡಿದೆ. ಮುಂದಿನ ವರ್ಷ ಹುಲಿ ಕುಣಿತ ಪ್ರದರ್ಶನ ನೀಡುವ ಆಯ್ದ ಕೆಲವು ತಂಡಗಳನ್ನ ಕರೆದು ಅದರಲ್ಲಿ ಉಳಿಯುವ ಮೊತ್ತವನ್ನ ಬಡವರಿಗೆ ದೇಣಿಗೆ ನೀಡುವ ಚಿಂತನೆ ನಡೆಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.