ಸಾರಾಂಶ
ಕಾಸರಗೋಡು ವಳಕುಂಜೆಯ ವೆಂಕಟರಮಣ ಭಟ್ ಅವರ ಪುತ್ರ ಮುರಳೀಕೃಷ್ಣ ಶರ್ಮ ಹಾಗೂ ವಿಮರ್ಶಕರಾದ ಸದಾನಂ ನಾರಾಯಣ ಪೊದುವಾಳ್ ಮುಖ್ಯ ಭೂಮಿಕೆಯಲ್ಲಿ ದೇವಳದ ಜ್ಞಾನಮಂದಿರದಲ್ಲಿ ಜುಲೈ 2ರಿಂದ 4ರ ವರೆಗೆ ನಡೆದ ಪ್ರಶ್ನಾ ಚಿಂತನೆಯಲ್ಲಿ ದೇವಸ್ಥಾನಕ್ಕೆ ಪ್ರತ್ಯೇಕ ಯಾಗಶಾಲೆ ನಿರ್ಮಾಣ, ದೇವಳದ ಒಳಗಿನ ಸ್ನಾನದ ಬಾವಿ ಅಭಿವೃದ್ಧಿ, ದೇವಸ್ಥಾನಕ್ಕೆ ಸಂಬಂಧಪಟ್ಟ ಕ್ಷೇತ್ರಪಾಲನ ಸಾನ್ನಿಧ್ಯ ಅಭಿವೃದ್ಧಿ ಚರ್ಚೆ ನಡೆದು ಮುಂದಿನ ವಿಮರ್ಶಾ ಚಿಂತನೆ ಜುಲೈ 22ರಿಂದ ನಡೆಯಲಿದೆ ಎಂದು ತಿಳಿಸಲಾಯಿತು.
ಕನ್ನಡಪ್ರಭ ವಾರ್ತೆ ಮೂಲ್ಕಿ
ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಏಪ್ರಿಲ್‌ನಲ್ಲಿ ರಥೋತ್ಸವ ಸಂದರ್ಭದ ಅವಘಡದ ಹಿನ್ನೆಲೆಯಲ್ಲಿ ನಡೆಯುತ್ತಿರುವ ಅಷ್ಟಮಂಗಳ ಪ್ರಶ್ನೆಯ ಮುಂದಿನ ಭಾಗವಾಗಿ ವಿಮರ್ಶೆ ಮತ್ತು ಪರಿಹಾರಗಳ ಬಗ್ಗೆ ಪ್ರಶ್ನಾ ಚಿಂತನೆಯು ಜುಲೈ 22ರಂದು ಮುಂದುವರಿಯಲಿದೆ.ಕಾಸರಗೋಡು ವಳಕುಂಜೆಯ ವೆಂಕಟರಮಣ ಭಟ್ ಅವರ ಪುತ್ರ ಮುರಳೀಕೃಷ್ಣ ಶರ್ಮ ಹಾಗೂ ವಿಮರ್ಶಕರಾದ ಸದಾನಂ ನಾರಾಯಣ ಪೊದುವಾಳ್ ಮುಖ್ಯ ಭೂಮಿಕೆಯಲ್ಲಿ ದೇವಳದ ಜ್ಞಾನಮಂದಿರದಲ್ಲಿ ಜುಲೈ 2ರಿಂದ 4ರ ವರೆಗೆ ನಡೆದ ಪ್ರಶ್ನಾ ಚಿಂತನೆಯಲ್ಲಿ ದೇವಸ್ಥಾನಕ್ಕೆ ಪ್ರತ್ಯೇಕ ಯಾಗಶಾಲೆ ನಿರ್ಮಾಣ, ದೇವಳದ ಒಳಗಿನ ಸ್ನಾನದ ಬಾವಿ ಅಭಿವೃದ್ಧಿ, ದೇವಸ್ಥಾನಕ್ಕೆ ಸಂಬಂಧಪಟ್ಟ ಕ್ಷೇತ್ರಪಾಲನ ಸಾನ್ನಿಧ್ಯ ಅಭಿವೃದ್ಧಿ ಚರ್ಚೆ ನಡೆದು ಮುಂದಿನ ವಿಮರ್ಶಾ ಚಿಂತನೆ ಜುಲೈ 22ರಿಂದ ನಡೆಯಲಿದೆ ಎಂದು ತಿಳಿಸಲಾಯಿತು.
ದೇವಳದ ತಂತ್ರಿ ಶಿಬರೂರು ಗೋಪಾಲಕೃಷ್ಣ ತಂತ್ರಿ, ಅರ್ಚಕದ್ವಯರಾದ ಶ್ರೀಪತಿ ಉಪಾಧ್ಯಾಯ ಮತ್ತು ನರಸಿಂಹ ಭಟ್, ಕ್ಷೇತ್ರದ ಅನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತ ಅರಸರು , ಕಾರ್ಯನಿರ್ವಹಣಾಧಿಕಾರಿ ಶ್ವೇತಾ ಪಳ್ಳಿ, ಅತ್ತೂರುಬೈಲು ವೆಂಕಟರಾಜ ಉಡುಪ, ಡಾ.ಹರಿಕೃಷ್ಣ ಪುನರೂರು, ಜ್ಯೋತಿಷ್ಯ ವಿ. ವಾಸುದೇವ ಭಟ್ ಪಾವಂಜೆ, ವೇದಮೂರ್ತಿ ವಾದಿರಾಜ ಉಪಾಧ್ಯಾಯ ಕೊಲಕಾಡಿ, ಶ್ರೀ ವೆಂಕಟರಮಣ ದೇವಳದ ಮೊಕ್ತೇಸರ ಅತುಲ್ ಕುಡ್ವ, ಸುನಿಲ್ ಆಳ್ವ, ಶರತ್ ಸಾಲ್ಯಾನ್, ರಾಮಚಂದ್ರ ನಾಯ್ಕ್ ಕೊಲ್ನಾಡುಗುತ್ತು, ಚಂದ್ರಶೇಖರ ಕಾಸಪಯ್ಯನವರ ಮನೆ, ನಾಗೇಶ್ ಬಪ್ಪನಾಡು ಮತ್ತಿತರರು ಉಪಸ್ಥಿತರಿದ್ದರು.