ಬಪ್ಪನಾಡು ಜಾತ್ರೆ: ಹಗಲು ರಥೋತ್ಸವ

| Published : Apr 19 2025, 12:42 AM IST

ಸಾರಾಂಶ

ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ಹಗಲು ರಥೋತ್ಸವ ವಿಜೃಂಭಣೆಯಿಂದ ನಡೆಯಿತು. ರಾತ್ರಿ ಶ್ರೀ ದೇವರ ಚಂದ್ರಮಂಡಲ ರಥೋತ್ಸವ, ಶಯನೋತ್ಸವ ನಡೆಯಿತು. ಮೂಲ್ಕಿಯ ಬಪ್ಪನಾಡು ದುರ್ಗೆಯ ಶಯನೋತ್ಸವ ವಿಶೇಷವಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಿಗೆ ಮಲ್ಲಿಗೆ ಹೂವನ್ನು ಸಲ್ಲಿಸುತ್ತಾರೆ.

ಕನ್ನಡಪ್ರಭ ವಾರ್ತೆ ಮೂಲ್ಕಿ

ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ಹಗಲು ರಥೋತ್ಸವ ವಿಜೃಂಭಣೆಯಿಂದ ನಡೆಯಿತು. ಕ್ಷೇತ್ರದ ಶಿಬರೂರು ಗೋಪಾಲಕೃಷ್ಣ ತಂತ್ರಿ ನೇತ್ರತ್ವದಲ್ಲಿ ಅತ್ತೂರು ರಾಘವೇಂದ್ರ ಉಡುಪ, ಅರ್ಚಕರಾದ ಶ್ರೀಪತಿ ಉಪಾಧ್ಯಾಯ, ನರಸಿಂಹ ಭಟ್‌ ಉಪಸ್ಥಿತಿಯಲ್ಲಿ ವಿಶೇಷ ಪ್ರಾರ್ಥನೆ, ಶ್ರೀ ದೇವರ ಹಗಲು ರಥೋತ್ಸವ, ಪಲ್ಲಪೂಜೆ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನೆರವೇರಿತು.

ರಾತ್ರಿ ಶ್ರೀ ದೇವರ ಚಂದ್ರಮಂಡಲ ರಥೋತ್ಸವ, ಶಯನೋತ್ಸವ ನಡೆಯಿತು. ಮೂಲ್ಕಿಯ ಬಪ್ಪನಾಡು ದುರ್ಗೆಯ ಶಯನೋತ್ಸವ ವಿಶೇಷವಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಿಗೆ ಮಲ್ಲಿಗೆ ಹೂವನ್ನು ಸಲ್ಲಿಸುತ್ತಾರೆ.

ಕ್ಷೇತ್ರದ ಅನುವಂಶಿಕ ಮೊಕ್ತೇಸರ ಹಾಗೂ ಮೂಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು, ಕಾರ್ಯ ನಿರ್ವಹಣಾಧಿಕಾರಿ ಶ್ವೇತ ಪಳ್ಳಿ, ಮಾಜಿ ಸಚಿವ ಅಭಯ ಚಂದ್ರ ಜೈನ್, ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ವೇದಮೂರ್ತಿ ವಾದಿರಾಜ ಉಪಾಧ್ಯಾಯ ಕೊಲಕಾಡಿ, ಜೀರ್ಣೋದ್ದಾರ ಸಮಿತಿಯ ಶೇಖರ್ ಶೆಟ್ಟಿ ಕಿಲ್ಪಾಡಿ ಭಂಡಸಾಲೆ, ರಾಮಚಂದ್ರ ನಾಯಕ್ ಕೊಲ್ನಾಡು ಗುತ್ತು, ಸುನೀಲ್‌ ಆಳ್ವ, ಭುವನಾಭಿರಾಮ ಉಡುಪ , ಮೂಲ್ಕಿ ನ.ಪಂ ಅಧ್ಯಕ್ಷ ಸತೀಶ್ ಅಂಚನ್ , ಗೋಪಾಲಕೃಷ್ಣ ಭಟ್, ಶ್ರೀ ವೆಂಕಟರಮಣ ದೇವಸ್ಥಾನದ ಮೊಕ್ತೇಸರ ಅತುಲ್ ಕುಡ್ವ, ನಾಗೇಶ್ ಬಪ್ಪನಾಡು, ಶಿವಶಂಕರ್ ವರ್ಮ ಮತ್ತಿತರರು ಉಪಸ್ಥಿತರಿದ್ದರು.

ಬುಧವಾರ ರಾತ್ರಿ ಶ್ರೀ ದೇವರ ಉತ್ಸವ ಬಲಿ, ಪಲ್ಲಕಿ ಉತ್ಸವ, ಕೆರೆ ದೀಪೋತ್ಸವ ಬೊಂಬೆ ರಥೋತ್ಸವ ನಡೆಯಿತು.

ಮೂಲ್ಕಿಯ ಬಪ್ಪನಾಡಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವರ್ಷಾವಧಿ ಮಹೋತ್ಸವದ 7ನೇ ದಿನದಂದು ಗುರುವಾರ ರಾತ್ರಿ ದುರ್ಗೆಗೆ ಶಯನೋತ್ಸವ ನಡೆಯಿತು.ಊರ, ಪರವೂರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಮಲ್ಲಿಗೆ ಸಮರ್ಪಿಸಿದ್ದು ಸುಮಾರು 60000 ಸಾವಿರಕ್ಕೂ ಮಿಕ್ಕಿ ಮಲ್ಲಿಗೆ ಚೆಂಡು ಸಮರ್ಪಿಸಲಾಗಿದೆ. ಈ ಬಾರಿ ಅಟ್ಟಿಗೆ 1000 ಕ್ಕೂ ಮಿಕ್ಕಿ ದರ ಇದ್ದು ದರ ಹೆಚ್ಚಿದ್ದರೂ ಭಕ್ತರು ಹೆಚ್ಚಿನಂತೆ ಮಲ್ಲಿಗೆ ಸಮರ್ಪಿಸಿದ್ದಾರೆ.ರಾತ್ರಿ ಬಲಿ ಬಳಿಕ ಕವಾಟ ಬಂಧನ ವಾಗಿ ಗರ್ಭ ಗುಡಿಯ ಮುಖ್ಯ ದ್ವಾರ ಮುಚ್ಚಲಾಗುತ್ತದೆ. ಶುಕ್ರವಾರ ಬೆಳಿಗ್ಗೆ ಕವಾಟೋದ್ಘಾಟನೆ ಯಾಗಿ ಮಹಾ ಪೂಜೆ ನಡೆದ ಮಲ್ಲಿಗೆ ಸಮರ್ಪಿಸಿದ ಭಕ್ತರಿಗೆ ಮಲ್ಲಿಗೆಯ ಪ್ರಸಾದವನ್ನು ವಿತರಿಸಲಾಗುತ್ತದೆ.