ಸಾರಾಂಶ
ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಿಗೆ ಅರ್ಪಿಸಲಿರುವ ನೂತನ ಬ್ರಹ್ಮರಥ ನಿರ್ಮಾಣ ಹಾಗೂ ಕ್ಷೇತ್ರಾಭಿವೃದ್ಧಿ ಕಾರ್ಯಗಳ ಪ್ರಾರಂಭಿಕ ಹಂತವಾಗಿ ಭಾನುವಾರ ಶ್ರೀ ದೇವಿಯ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ನಡೆದು ಮುಷ್ಟಿ ಕಾಣಿಕೆ ಸಮರ್ಪಣೆ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಮೂಲ್ಕಿ
ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಿಗೆ ಅರ್ಪಿಸಲಿರುವ ನೂತನ ಬ್ರಹ್ಮರಥ ನಿರ್ಮಾಣ ಹಾಗೂ ಕ್ಷೇತ್ರಾಭಿವೃದ್ಧಿ ಕಾರ್ಯಗಳ ಪ್ರಾರಂಭಿಕ ಹಂತವಾಗಿ ಭಾನುವಾರ ಶ್ರೀ ದೇವಿಯ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ನಡೆದು ಮುಷ್ಟಿ ಕಾಣಿಕೆ ಸಮರ್ಪಣೆ ಕಾರ್ಯಕ್ರಮ ನಡೆಯಿತು.ಇತ್ತೀಚೆಗೆ ನಡೆದ ಅಷ್ಟಮಂಗಳ ಪ್ರಶ್ನಾ ಚಿಂತನೆಯಂತೆ ಕ್ಷೇತ್ರದ ಭವಿಷ್ಯದ ಧಾರ್ಮಿಕ ಹಾಗೂ ಸಾನ್ನಿಧ್ಯಪೂರಕ ಅಭಿವೃದ್ಧಿ ಕಾರ್ಯಕ್ರಮಗಳ ಪೂರಕವಾಗಿ ಈ ಕಾರ್ಯ ನಡೆಯಿತು.
ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಪವಿತ್ರಪಾಣಿ ಅತ್ತೂರು ಬೈಲು ವೆಂಕಟರಾಜ ಉಡುಪ, ತಂತ್ರಿಗಳಾದ ಬ್ರಹ್ಮಶ್ರೀ ಶಿಬರೂರು ಗೋಪಾಲಕೃಷ್ಣ ತಂತ್ರಿ, ಅರ್ಚಕರಾದ ನರಸಿಂಹ ಭಟ್, ಶ್ರೀಪತಿ ಭಟ್ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು.ಅನುವಂಶಿಕ ಮೊಕೇಸರ ದುಗ್ಗಣ್ಣ ಸಾವಂತ ಅರಸರು, ಮಾಜಿ ಆಡಳಿತ ಮೊಕ್ತೇಸರ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಶ್ವೇತಾ ಪಳ್ಳಿ, ಸಸಿಹಿತ್ಲು ಭಗವತಿ ಕ್ಷೇತ್ರದ ಅರ್ಚಕ ಅಪ್ಪು ಯಾನೆ ಶ್ರೀನಿವಾಸ ಪೂಜಾರಿ ಸಸಿಹಿತ್ಲು, ಜೀರ್ಣೋದ್ಧಾರ ಸಮಿತಿಯ ಸುನಿಲ್ ಆಳ್ವ, ಉದ್ಯಮಿ ಅರವಿಂದ ಪೂಂಜಾ ಕಾರ್ನಾಡ್,ಯದು ನಾರಾಯಣಶೆಟ್ಟಿ, ಶರತ್ ನರ್ಸಪ್ಪ ಸಾಲ್ಯಾನ್, ರಾಮಚಂದ್ರ ನಾಯಕ್ ಕೊಲ್ನಾಡುಗುತ್ತು, ಸುಕುಮಾರ್ ಶೆಟ್ಟಿ, ಅತುಲ್ ಕುಡ್ಡ ಮತ್ತಿತರಿದ್ದರು. ದೇವಳದಲ್ಲಿ ಮುಷ್ಟಿ ಕಾಣಿಕೆ ಹಾಕುವ ಭಕ್ತರಿಗೆ ಅ.10ರ ವರೆಗೆ ಅವಕಾಶವಿದೆಯೆಂದು ದೇವಳದ ಆಡಳಿತ ಮಂಡಳಿ ತಿಳಿಸಿದೆ.