ಸಾರಾಂಶ
ಮೂಲ್ಕಿಯ ಬಪ್ಪನಾಡು ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಆ.27ರಂದು ನಡೆಯುವ 50ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಸಂಭ್ರಮಾಚರಣೆಯ ಕುರಿತು ಬಪ್ಪನಾಡು ದೇವಸ್ಥಾನದ ಜ್ಞಾನ ಮಂದಿರ ಸಭಾಂಗಣದಲ್ಲಿ ಪೂರ್ವಭಾವಿ ಸಮಾಲೋಚನಾ ಸಭೆ ನಡೆಯಿತು.
ಕನ್ನಡಪ್ರಭ ವಾರ್ತೆ ಮೂಲ್ಕಿ
ಸುವರ್ಣ ಮಹೋತ್ಸವದ ಸಂಭ್ರಮದಲ್ಲಿರುವ ಮೂಲ್ಕಿಯ ಬಪ್ಪನಾಡಿನ 50ನೇ ವರ್ಷದ ಗಣೇಶೋತ್ಸವವನ್ನು ಗ್ರಾಮದ ಸಂಘಟನೆಗಳನ್ನು ಒಗ್ಗೂಡಿಸಿ ಸಮಾಜಕ್ಕೆ ಒಳ್ಳೆಯ ಸಂದೇಶ ಹಾಗೂ ಸಾಮರಸ್ಯ ನೀಡುವ ಕಾರ್ಯಕ್ರಮಗಳನ್ನು ನೀಡುವ ಮೂಲಕ ಆಚರಿಸಬೇಕೆಂದು ಜೈ ಕೃಷ್ಣ ಸುಧಾಮ ವೆಲ್ಫೇರ್ ಫೌಂಡೇಶನ್ ಅಧ್ಯಕ್ಷ ಸುನಿಲ್ ಆಳ್ವ ಹೇಳಿದರು.ಮೂಲ್ಕಿಯ ಬಪ್ಪನಾಡು ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಆ.27ರಂದು ನಡೆಯುವ 50ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಸಂಭ್ರಮಾಚರಣೆಯ ಕುರಿತು ಬಪ್ಪನಾಡು ದೇವಸ್ಥಾನದ ಜ್ಞಾನ ಮಂದಿರ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಣೇಶೋತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ ಸುವರ್ಣ ವಹಿಸಿದ್ದು, ಮುಂದಿನ ದಿನಗಳಲ್ಲಿ ಸೂಕ್ತ ಸಮಿತಿ ರಚನೆ ಮಾಡುವ ಬಗ್ಗೆ ನಿರ್ಧರಿಸಲಾಯಿತು.
ಸಮಿತಿಯ ಗೌರವಾಧ್ಯಕ್ಷ ಪಟೇಲ್ ವಾಸುದೇವ ರಾವ್ ಪುನರೂರು ಮಾತನಾಡಿ, ಸಾರ್ವಜನಿಕ ಶ್ರೀ ಗಣೇಶೋತ್ಸವದ 50ನೇ ವರ್ಷದ ಸವಿ ನೆನಪಿಗೆ ದಾನಿಗಳಿಂದ ಶ್ರೀ ದೇವರಿಗೆ ನೆನಪಿನ ಕಾಣಿಕೆ ಸಮರ್ಪಣೆ ಹಾಗೂ ಐದು ದಿನವೂ ಅನ್ನ ಸಂತರ್ಪಣೆ ನಡೆಯಬೇಕೆಂದು ಹೇಳಿದರು.ಸಭೆಯಲ್ಲಿ ಸಮಿತಿಯ ಬಾಲಚಂದ್ರ ಕಾಮತ್ ಮಹೀಮ್ ಹೆಗ್ಡೆ, ಹರಿಶ್ಚಂದ್ರ ಬಪ್ಪನಾಡು, ವಾಸು ಪೂಜಾರಿ ಕೊಲಕಾಡಿ, ಶಶಿ ಅಮೀನ್ ಗೇರುಕಟ್ಟೆ ಸಲಹೆ ಸೂಚನೆಗಳನ್ನು ನೀಡಿದರು. ಅರ್ಚಕರಾದ ಕೃಷ್ಣರಾಜ ಭಟ್, ಮೂಲ್ಕಿ ನಗರ ಪಂಚಾಯಿತಿ ಅಧ್ಯಕ್ಷ ಸತೀಶ್ ಅಂಚನ್, ಸದಸ್ಯೆ ದಯಾವತಿ ಅಂಚನ್, ಉದ್ಯಮಿ ಯದು ನಾರಾಯಣಶೆಟ್ಟಿ, ಸಂಜೀವ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))