ವಕೀಲರ ಸಂಘದ ಅಧ್ಯಕ್ಷ ವಂಟಮೂರಿಗೆ ಸನ್ಮಾನ

| Published : Dec 28 2023, 01:45 AM IST

ಸಾರಾಂಶ

ಹುಕ್ಕೇರಿ : ಇಲ್ಲಿನ ವಕೀಲರ ಸಂಘದ ನೂತನ ಅಧ್ಯಕ್ಷ ಅನೀಸ್‌ ವಂಟಮೂರಿಗೆ ದಿ.ಯಮಕನಮರಡಿ ಲಕ್ಷ್ಮಿ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿಯ ಹುಕ್ಕೇರಿ ಶಾಖೆಯಲ್ಲಿ ಸನ್ಮಾನಿಸಲಾಯಿತು.

ಹುಕ್ಕೇರಿ : ಇಲ್ಲಿನ ವಕೀಲರ ಸಂಘದ ನೂತನ ಅಧ್ಯಕ್ಷ ಅನೀಸ್‌ ವಂಟಮೂರಿಗೆ ದಿ.ಯಮಕನಮರಡಿ ಲಕ್ಷ್ಮಿ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿಯ ಹುಕ್ಕೇರಿ ಶಾಖೆಯಲ್ಲಿ ಸನ್ಮಾನಿಸಲಾಯಿತು.

ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ರವೀಂದ್ರ ಜಿಂಡ್ರಾಳಿ ಮಾತನಾಡಿ, ಹಿರಿಯ ವಕೀಲರ ಮಾರ್ಗದರ್ಶನದಲ್ಲಿ ಕಿರಿಯ ವಕೀಲರು ಹಾಗೂ ಕಕ್ಷಿದಾರರ ಹಿತ ಕಾಪಾಡುವಲ್ಲಿ ನೂತನ ಆಡಳಿತ ಮಂಡಳಿ ಶ್ರಮಿಸಬೇಕು ಎಂದು ಸಲಹೆ ಮಾಡಿ ಶುಭ ಹಾರೈಸಿದರು.

ಪ್ರಧಾನ ವ್ಯವಸ್ಥಾಪಕ ರಾಜು ಸೂಜಿ, ಶಾಖಾ ವ್ಯವಸ್ಥಾಪಕ ಎ.ಬಿ.ಪಾಟೀಲ, ಗಿರೀಧರ ಕರೋಶಿ, ನಿಂಗೌಡ ಪಾಟೀಲ, ಎಸ್.ಎಸ್.ಮಲಾಜಿ, ಎಮ್.ಆರ್.ಖೇಮಾಳೆ, ಐ.ಬಿ.ನೇರ್ಲಿ ಮತ್ತಿತರರು ಉಪಸ್ಥಿತರಿದ್ದರು.