ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ

| Published : Jan 20 2025, 01:32 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ದೇವರ ಹಿಪ್ಪರಗಿ ತಾಲೂಕಿನ ಕಲಕೇರಿ ಗ್ರಾಮದಲ್ಲಿ ಭಾನುವಾರ ಬೆಳಗಿನ ಜಾವ ನಡೆದಿದೆ. ಈರಗಂಟೆಪ್ಪ ಮಡಿವಾಳಪ್ಪ ಬೇಡರ(40)ಕೊಲೆಯಾಗಿರುವ ವ್ಯಕ್ತಿ. ಈರಗಂಟೆಪ್ಪ ಬೆಳಗಿನ ಜಾವ ಬಹಿರ್ದೆಸೆಗೆ ತೆರಳುತ್ತಿದ್ದರು. ಈ ವೇಳೆ ಆತನನ್ನು ಕೊಲೆ ಮಾಡಲೆಂದೆ ಹೊಂಚುಹಾಕಿ ಕುಳಿತಿದ್ದ ದುಷ್ಕರ್ಮಿಗಳು ಗ್ರಾಮದ ಹೊರವಲಯದಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಆತನನ್ನು ರಸ್ತೆ ಮಧ್ಯದಲ್ಲಿ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಭೀಕರವಾಗಿ ಹಲ್ಲೆ ಮಾಡಿ ಕೊಲೆಗೈದಿದ್ದಾರೆ.

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ದೇವರ ಹಿಪ್ಪರಗಿ ತಾಲೂಕಿನ ಕಲಕೇರಿ ಗ್ರಾಮದಲ್ಲಿ ಭಾನುವಾರ ಬೆಳಗಿನ ಜಾವ ನಡೆದಿದೆ. ಈರಗಂಟೆಪ್ಪ ಮಡಿವಾಳಪ್ಪ ಬೇಡರ(40)ಕೊಲೆಯಾಗಿರುವ ವ್ಯಕ್ತಿ. ಈರಗಂಟೆಪ್ಪ ಬೆಳಗಿನ ಜಾವ ಬಹಿರ್ದೆಸೆಗೆ ತೆರಳುತ್ತಿದ್ದರು. ಈ ವೇಳೆ ಆತನನ್ನು ಕೊಲೆ ಮಾಡಲೆಂದೆ ಹೊಂಚುಹಾಕಿ ಕುಳಿತಿದ್ದ ದುಷ್ಕರ್ಮಿಗಳು ಗ್ರಾಮದ ಹೊರವಲಯದಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಆತನನ್ನು ರಸ್ತೆ ಮಧ್ಯದಲ್ಲಿ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಭೀಕರವಾಗಿ ಹಲ್ಲೆ ಮಾಡಿ ಕೊಲೆಗೈದಿದ್ದಾರೆ. ಅಲ್ಲದೇ, ಬಳಿಕ, ಈತನ ತಂದೆಯನ್ನು ಕೊಲೆ ಮಾಡಲು ದುಷ್ಕರ್ಮಿಗಳು ಮನೆಗೆ ಬಂದಾಗ ಆತನನ್ನು ಕೊಲೆ ಮಾಡಿರುವ ವಿಷಯ ಗೊತ್ತಾಗಿದೆ. ಈರಗಂಟೆಪ್ಪ ತಂದೆಯ ಮೇಲೂ ಹಲ್ಲೆ ನಡೆಸಿದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ. ಈ ವೇಳೆ ಗ್ರಾಮಸ್ಥರು ದುಷ್ಕರ್ಮಿಗಳನ್ನು ಹಿಡಿದು ಆಯುಧಗಳನ್ನು ಕಸಿದುಕೊಂಡಿದ್ದು, ಒಟ್ಟು 7 ಜನ ಆರೋಪಿಗಳ ಪೈಕಿ ಐವರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಇನ್ನಿಬ್ಬರು ಗ್ರಾಮದಿಂದ ನಾಪತ್ತೆಯಾಗಿದ್ದಾರೆ.

ಅಯ್ಯಣ್ಣ ಲವ ನಾಗರಾಳ(19), ತಿಪ್ಪಣ್ಣ ಬಸಪ್ಪ ರಕ್ಕಸಗಿ (20), ಶ್ರೀನಿವಾಸ ಶ್ರೀಶೈಲ್ ವಾಲಿಕಾರ(22), ಸಂತೋಷ್ ಸಂಗಪ್ಪ ದೊರೆಗೊಳು(21), ಪ್ರಶಾಂತ ಕಳಸಪ್ಪ ವಡ್ಡರ(21) ಹಾಗೂ ಪರಾರಿಯಾದ ಆರೋಪಿಗಳು ಈರಗಂಟೆಪ್ಪ ಸಂಗಪ್ಪ ದೊರೆಗೊಳು(23), ಬಲವಂತ ಸಂಗಪ್ಪ ದೊರೆಗೊಳು (22) ಎಂದು ತಿಳಿದು ಬಂದಿದೆ.

ಕೊಲೆಯಾದ ಈರಗಂಟೆಪ್ಪ ಮತ್ತು ಕೊಲೆ ಆರೋಪಿಗಳು ಒಂದೇ ಗ್ರಾಮದವರು. ಕೊಲೆ ಆರೋಪಿಗಳಿಗೆ ಈ ಹಿಂದೆ ಕೊಲೆಯಾದ ಈರಗಂಟೆಪ್ಪ ಬೇಡರ ಬುದ್ದಿವಾದ ಹೇಳಿದ್ದನಂತೆ. ಅದೇ ದ್ವೇಷದಿಂದ ಈ ಯುವಕರು ಆತನನ್ನು ಕೊಲೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಪರಾರಿಯಾಗಿರುವ ಆರೋಪಿಗಳಿಗೆ ಪೊಲೀಸರು ಶೋಧ ನಡೆಸಿದ್ದಾರೆ.ಸ್ಥಳಕ್ಕೆ ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ಅವರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿ ಪೊಲೀಸರಿಂದ ಮಾಹಿತಿ ಪಡೆದರು. ಕೊಲೆಯಾದ ಸ್ಥಳಕ್ಕೆ ಕಲಕೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತ ದೇಹವನ್ನು ಸಿಂದಗಿ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕಲಕೇರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ. ಬಳಿಕ, ಸ್ಥಳಕ್ಕೆ ಇಂಡಿ ಡಿವೈಎಸ್ಪಿ ಹೆಚ್.ಎಸ್.ಜಗದೀಶ, ಸಿಂದಗಿ ಸಿಪಿಐ ನಾನಾಗೌಡ.ಆರ್ ಭೇಟಿ ನೀಡಿದ್ದಾರೆ.