ಸಾರಾಂಶ
ಪಿಎಸ್ಐ ರುದ್ರಪ್ಪ ಗಡದಾರಿ ಜನ್ಮದಿನದ ಆಚರಣೆ ಸಂದರ್ಭದಲ್ಲಿ ರೌಡಿಶೀಟರ್‌ಗಳಿಂದ ಶಾಲು ಹೊಂದಿಸಿಕೊಂಡು ಸನ್ಮಾನ ಸ್ವೀಕರಿಸಿದ್ದಾರೆ.
ಧಾರವಾಡ:
ರೌಡಿಶೀಟರ್‌ಗಳ ಜತೆಗೆ ಧಾರವಾಡ ಉಪ ನಗರ ಪೊಲೀಸ್ ಠಾಣೆಯ ಪಿಎಸ್ಐ ರುದ್ರಪ್ಪ ಗಡದಾರಿ ಬರ್ತೆಡೆ ಆಚರಿಸಿಕೊಂಡು ವಿವಾದಕ್ಕೆ ಗುರಿಯಾಗಿದ್ದಾರೆ.ಬುಧವಾರ ನಡೆದ ಜನ್ಮದಿನದ ಆಚರಣೆ ಸಂದರ್ಭದಲ್ಲಿ ರೌಡಿಶೀಟರ್‌ಗಳಿಂದ ಶಾಲು ಹೊಂದಿಸಿಕೊಂಡು ಸನ್ಮಾನ ಸ್ವೀಕರಿಸಿದ್ದಾರೆ. ಧಾರವಾಡ ಜಿಲ್ಲೆಯಿಂದ ಗಡಿಪಾರು ಆಗಿದ್ದ ರೌಡಿಶೀಟರ್ ಸುನಿಲ್ ಮಾಳಗಿ, ಕಾರ್ತಿಕ್ ಬಡಿಗೇರ ಜತೆಗೆ ಪೊಟೋ ಸಹ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಪೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಇತ್ತೀಚೆಗೆ ಸುನೀಲ ಮಾಳಗಿ ಹಾಗೂ ಕಾರ್ತಿಕ ಬಡಿಗೇರ ಗಡಿಪಾರಿಗೆ ನ್ಯಾಯಾಲಯದಿಂದ ತಡೆಯಾಜ್ಞೆ ತೆಗೆದುಕೊಂಡು ಧಾರವಾಡ ಜಿಲ್ಲೆಯ ಪ್ರವೇಶ ಪಡೆದಿದ್ದಾರೆ. ಇನ್ನೂ ಬೇರೆ ಬೇರೆ ಪ್ರಕರಣದಲ್ಲಿ ಭಾಗಿಯಾಗಿರುವ ತೌಸೀಫ್, ಅಬ್ರಾರ್ ಅವರು ಸಹ ಜನ್ಮದಿನದ ಕಾರ್ಯಕ್ರಮದಲ್ಲಿ ಇದ್ದರು. ಈ ಫೋಟೋಗಳನ್ನು ರೌಡಿಶೀಟರ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಪೊಲೀಸ್ ಅಧಿಕಾರಿ ರುದ್ರಪ್ಪ ಗಡದಾರಿ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
;Resize=(128,128))
;Resize=(128,128))
;Resize=(128,128))
;Resize=(128,128))