ಸೆ.5ರಂದು ರಾಯಚೂರಿನಲ್ಲಿ ಬಸವಸಂಸ್ಕೃತಿ ಅಭಿಯಾನ ರಥ ಆಗಮನ

| Published : Aug 14 2025, 01:00 AM IST

ಸೆ.5ರಂದು ರಾಯಚೂರಿನಲ್ಲಿ ಬಸವಸಂಸ್ಕೃತಿ ಅಭಿಯಾನ ರಥ ಆಗಮನ
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವಗುರು ಬಸವಣ್ಣನವರ ತತ್ವ ಸಿದ್ದಾಂತಗಳು ಹಾಗೂ ವಿಚಾರಧಾರೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ವಳಬಳ್ಳಾರಿ ಸುವರ್ಣಗಿರಿ ವಿರಕ್ತಮಠದ ಸಿದ್ದಲಿಂಗ ಮಹಾಸ್ವಾಮಿ ಹೇಳಿದರು.

ಕನ್ನಡಪ್ರಭ ವಾರ್ತೆ ಸಿಂಧನೂರು

ವಿಶ್ವಗುರು ಬಸವಣ್ಣನವರ ತತ್ವ ಸಿದ್ದಾಂತಗಳು ಹಾಗೂ ವಿಚಾರಧಾರೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ವಳಬಳ್ಳಾರಿ ಸುವರ್ಣಗಿರಿ ವಿರಕ್ತಮಠದ ಸಿದ್ದಲಿಂಗ ಮಹಾಸ್ವಾಮಿ ಹೇಳಿದರು.

ನಗರದ ಕೋಟೆ ಬಸವ ಕಲ್ಯಾಣ ಮಂಟಪದಲ್ಲಿ ಬಸವ ಸಂಸ್ಕೃತಿ ಅಭಿಯಾನದ ಕುರಿತು ವಿವಿಧ ಸಮುದಾಯದ ಪದಾಧಿಕಾರಿಗಳ ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರೊಂದಿಗೆ ಮಂಗಳವಾರ ನಡೆದ ಪೂರ್ವಭಾವಿ ಸಭೆಯ ಸಾನಿಧ್ಯವಹಿಸಿ ಅವರು ಮಾತನಾಡಿದರು. 12ನೇ ಶತಮಾನದಲ್ಲಿದ್ದ ಅಸಮಾನತೆ, ಅಸ್ಪೃಶ್ಯತೆ, ಕಂದಾಚಾರ, ಮೌಢ್ಯತೆಗಳನ್ನು ಬೇರುಸಮೇತ ಕಿತ್ತುಹಾಕಿ ಸಮಸಮಾಜ ನಿರ್ಮಾಣಕ್ಕೆ ಬಸವಣ್ಣನವರು ಶ್ರಮಿಸಿದರು. ಅವರೊಂದಿಗೆ ಎಲ್ಲ ಜಾತಿಯ ಶರಣರು ಇದ್ದರು ಎಂದರು.

ಯದ್ದಲದೊಡ್ಡಿಯ ಮಹಾಲಿಂಗ ಮಹಾಸ್ವಾಮಿ ಮಾತನಾಡಿ, ರಾಜ್ಯದ 31 ಜಿಲ್ಲಾ ಕೇಂದ್ರಗಳಲ್ಲಿ ಬಸವ ಸಂಸ್ಕøತಿ ಅಭಿಯಾನದ ರಥಯಾತ್ರೆ ಸಂಚರಿಸುತ್ತಿದೆ. ರಾಯಚೂರಿಗೆ ಸೆಪ್ಟಂಬರ್ 5 ರಂದು ಆಗಮಿಸುತ್ತಿದ್ದು, ಸಿಂಧನೂರು ತಾಲ್ಲೂಕಿನಿಂದ ಸುಮಾರು 3 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ತೆರಳಿ ಕಾರ್ಯಕ್ರಮ ಯಶಸ್ವಿಗೊಳಿಸೋಣ ಎಂದು ಕರೆ ನೀಡಿದರು.

ಬಳಗಾನೂರಿನ ಸಿದ್ದಬಸವ ಮಹಾಸ್ವಾಮಿ, ವೀರಶೈವ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಟಿ.ಪಂಪನಗೌಡ, ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ, ಎಪಿಎಂಸಿ ಮಾಜಿ ರಾಜ್ಯ ಉಪಾಧ್ಯಕ್ಷ ರಾಜಶೇಖರ್ ಪಾಟೀಲ್, ಆರ್ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಪಂಪನಗೌಡ ಬಾದರ್ಲಿ, ಸೋಮನಗೌಡ ಬಾದರ್ಲಿ, ಮುಖಂಡರಾದ ಸಿದ್ರಾಮಪ್ಪ ಸಾಹುಕಾರ ಮಾಡಶಿರವಾರ, ಪಿ.ರುದ್ರಪ್ಪ ಕುರಕುಂದಿ, ಕೆ.ಭೀಮಣ್ಣ ವಕೀಲ, ನಾಗನಗೌಡ, ಕರೇಗೌಡ ಕುರುಕುಂದಿ, ಆರ್.ತಿಮ್ಮಯ್ಯ ನಾಯಕ್, ಕೆ.ಶರಣಪ್ಪ ತೆಂಗಿನಕಾಯಿ, ವೀರಭದ್ರಗೌಡ ಅಮರಾಪುರ, ಗುಂಡಪ್ಪ ಬಳಿಗಾರ, ಪಿ.ಬಸವರಾಜ ಕುರುಕುಂದಿ, ಎಚ್.ಜಿ.ಹಂಪಣ್ಣ, ಚಂದ್ರಶೇಖರ ಯರದಿಹಾಳ ಇದ್ದರು.