ಸಾರಾಂಶ
ರಾಜ್ಯಾದ್ಯಂತ ಬಸವಣ್ಣನ ವಚನ, ಸಂಸ್ಕಾರಗಳನ್ನು ಭಿತ್ತರಿಸುವ ಉದ್ದೇಶದಿಂದ ಸಾಂಸ್ಕೃತಿಕ ನಾಯಕ ಬಸವಣ್ಣನ ವಿಚಾರಧಾರೆ ಪಸರಿಸಲು ಸೆ. 1ರಿಂದ ಬಸವ ಸಂಸ್ಕೃತಿ ಅಭಿಯಾನ ಆರಂಭಸಿ ಪ್ರತಿ ಜಿಲ್ಲೆಯಲ್ಲಿ ಕಾರ್ಯಕ್ರಮ ನಡೆಸಲಾಗುತ್ತಿದೆ.
ಕೊಪ್ಪಳ:
ನಗರದ ಮಧುಶ್ರೀ ಗಾರ್ಡನ್ ಸಭಾಂಗಣದಲ್ಲಿ ಸೆ. 8ರಂದು ಸಂಜೆ ಬಸವ ಸಂಸ್ಕೃತಿ ಅಭಿಯಾನ ನಡೆಯಲಿದೆ ಎಂದು ಬಸವ ಸಂಸ್ಕೃತಿ ಅಭಿಯಾನ ಸಮಿತಿಯ ಬಸವರಾಜ ಬಳ್ಳೊಳ್ಳಿ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ ಬಸವಣ್ಣನ ವಚನ, ಸಂಸ್ಕಾರಗಳನ್ನು ಭಿತ್ತರಿಸುವ ಉದ್ದೇಶದಿಂದ ಸಾಂಸ್ಕೃತಿಕ ನಾಯಕ ಬಸವಣ್ಣನ ವಿಚಾರಧಾರೆ ಪಸರಿಸಲು ಸೆ. 1ರಿಂದ ಬಸವ ಸಂಸ್ಕೃತಿ ಅಭಿಯಾನ ಆರಂಭಸಿ ಪ್ರತಿ ಜಿಲ್ಲೆಯಲ್ಲಿ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.
ಪ್ರಸ್ತುತ ವಚನಗಳನ್ನು ಮನೆ-ಮನೆಗೂ ತಲುಪಿಸಿ ಸಮಾಜದಲ್ಲಿ ಶರಣ ಸಂಸ್ಕೃತಿ ಬೆಳೆಸಬೇಕಿದೆ. ಆ ನಿಟ್ಟಿನಲ್ಲಿ ಬಸವ ಸಂಸ್ಕೃತಿ ಅಭಿಯಾನ ಹಮ್ಮಿಕೊಂಡಿದೆ. ಕೊಪ್ಪಳದಲ್ಲಿ ಅಂದು ಬೆಳಗ್ಗೆ 11ರಿಂದ 12ರ ವರೆಗೂ ಶಾರದಾ ಪಿಯು ಕಾಲೇಜು ಆವರಣದಲ್ಲಿ ಕಾಲೇಜು ವಿದ್ಯಾರ್ಥಿಗಳೊಂದಿಗೆ ವಚನ ಸಂವಾದ ನಡೆಯಲಿದೆ. ಸಂಜೆ 5ರಿಂದ 6ರ ವರೆಗೂ ಸಮಿತಿ ಸೇರಿದಂತೆ ಶರಣಾಸಕ್ತರು ಪಾದಯಾತ್ರೆ ನಡೆಸಿ ಮಧುಶ್ರೀ ಗಾರ್ಡ್‌ನ ತಲುಪಲಿದೆ ಎಂದು ಹೇಳಿದರು.ಮಧುಶ್ರೀ ಗಾರ್ಡ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮನಗುಂಡಿ ಶ್ರೀಗುರುಬಸವ ಮಹಾಮನೆ ಚನ್ನಯ್ಯಗಿರಿಯ ಬಸವಾನಂದ ಸ್ವಾಮೀಜಿ ಬಸವ ಸಂಸ್ಕೃತಿಯಲ್ಲಿ ಸ್ವಾತಂತ್ರ್ಯದ ಪರಿಕಲ್ಪನೆ ವಿಷಯದ ಕುರಿತು ಮಾತನಾಡಲಿದ್ದಾರೆ. ಸಾಹಿತಿ ಡಾ. ಕಾವಶ್ರೀ ಮಹಾಗಾಂಕರ್, ವಚನ ಚಳವಳಿ ಇಂದಿನ ಅಗತ್ಯ ವಿಷಯ ಕುರಿತು ಉಪನ್ಯಾಸ ನೀಡಲಿದ್ದಾರೆ. ರಾತ್ರಿ 8ಕ್ಕೆ ಜಂಗಮದಡೆಗೆ ಎನ್ನುವ ಕಾರ್ಯಕ್ರಮ ನಡೆಯಲಿದೆ ಎಂದರು.
ಈ ಅಭಿಯಾನ ಲಿಂಗಾಯತ ಮಹಾಪೀಠಾಧಿಪತಿಗಳ ಒಕ್ಕೂಟ, ಜಾಗತಿಕ ಲಿಂಗಾಯತ ಮಹಾಸಭಾ, ಬಸವ ಸಮಿತಿ, ವಿಶ್ವಗುರು ಬಸವೇಶ್ವರ ಟ್ರಸ್ಟ್, ರಾಷ್ಟ್ರೀಯ ಬಸವದಳ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸೇರಿದಂತೆ ವಿವಿಧ ಶರಣ ಚಿಂತನೆಯ ಸಮಿತಿಗಳ ಸಹಯೋಗದಲ್ಲಿ ಈಅಭಿಯಾನ ನಡೆಯಲಿದೆ ಎಂದು ತಿಳಿಸಿದರು.
ಸರ್ಕಾರಿ ಅಭಿಯೋಜಕ ಬಿ.ಎಸ್. ಪಾಟೀಲ್ ಮಾತನಾಡಿ, ಯುವ ಜನತೆಗೆ ಶರಣ ಚಿಂತನೆ ತಲುಪಿಸಲು ಈ ಅಭಿಯಾನ ಹಮ್ಮಿಕೊಂಡಿದೆ. ಪ್ರಸ್ತುತ ದಿನದಲ್ಲಿ ಯುವ ಜನತೆಗೆ ಇದು ಅಗತ್ಯವಾಗಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಸಮಿತಿಯ ರಾಜೇಶ ಸಸಿಮಠ, ಶಿವಕುಮಾರ ಕುಕನೂರು, ಶೇಖರ ಇಂಗಳದಾಳ ಇದ್ದರು.