ಹಬ್ಬದ ಅಂಗವಾಗಿ ಬೆಳಗಿನ ಜಾವದಿಂದಲೇ ವಿಶೇಷ ಪೂಜೆ, ಅಭಿಷೇಕ, ಹೋಮಹವನ, ಅಲಂಕಾರ ಸೇವೆಗಳು ನಡೆಯಿತು. ದೇವಿಯನ್ನು ಪುಷ್ಪಗಳಿಂದ ಸಿಂಗರಿಸಿ, ದೀಪಾಲಂಕಾರ ಮಾಡಲಾಗಿದ್ದು, ದೇಗುಲದ ಸುತ್ತಮುತ್ತ ಭಕ್ತಿಭರಿತ ವಾತಾವರಣ ನಿರ್ಮಾಣವಾಗಿತ್ತು. ಬನದ ಹುಣ್ಣಿಮೆಯ ಮಹತ್ವವನ್ನು ವಿವರಿಸಿದ ಪುರೋಹಿತರು, ಪ್ರಕೃತಿ ಆರಾಧನೆ ಹಾಗೂ ಸಮೃದ್ಧಿಯ ಸಂಕೇತವಾಗಿರುವ ಈ ಹಬ್ಬವು ಸಮಾಜದಲ್ಲಿ ಶಾಂತಿ, ಸಮೃದ್ಧಿ ತರುವಂತೆ ಪ್ರಾರ್ಥಿಸಿದರು.

ಬೇಲೂರು: ಪಟ್ಟಣದ ದೇವಾಂಗ ಬೀದಿಯಲ್ಲಿರುವ ಶ್ರೀ ಚೌಡೇಶ್ವರಿ ಅಮ್ಮನವರ ದೇಗುಲದಲ್ಲಿ ಬನದ ಹುಣ್ಣಿಮೆ ಹಬ್ಬವನ್ನು ಭಕ್ತಿಭಾವ ಹಾಗೂ ಸಂಭ್ರಮದಿಂದ ಅದ್ಧೂರಿಯಾಗಿ ಆಚರಿಸಲಾಯಿತು.ಹಬ್ಬದ ಅಂಗವಾಗಿ ಬೆಳಗಿನ ಜಾವದಿಂದಲೇ ವಿಶೇಷ ಪೂಜೆ, ಅಭಿಷೇಕ, ಹೋಮಹವನ, ಅಲಂಕಾರ ಸೇವೆಗಳು ನಡೆಯಿತು. ದೇವಿಯನ್ನು ಪುಷ್ಪಗಳಿಂದ ಸಿಂಗರಿಸಿ, ದೀಪಾಲಂಕಾರ ಮಾಡಲಾಗಿದ್ದು, ದೇಗುಲದ ಸುತ್ತಮುತ್ತ ಭಕ್ತಿಭರಿತ ವಾತಾವರಣ ನಿರ್ಮಾಣವಾಗಿತ್ತು. ಬನದ ಹುಣ್ಣಿಮೆಯ ಮಹತ್ವವನ್ನು ವಿವರಿಸಿದ ಪುರೋಹಿತರು, ಪ್ರಕೃತಿ ಆರಾಧನೆ ಹಾಗೂ ಸಮೃದ್ಧಿಯ ಸಂಕೇತವಾಗಿರುವ ಈ ಹಬ್ಬವು ಸಮಾಜದಲ್ಲಿ ಶಾಂತಿ, ಸಮೃದ್ಧಿ ತರುವಂತೆ ಪ್ರಾರ್ಥಿಸಿದರು.ಈ ವೇಳೆ ಮಾತನಾಡಿದ ಸಮಿತಿ ಅಧ್ಯಕ್ಷ ವಸಂತ್ ಕುಮಾರ್ ಹಾಗೂ ಗೌರವ ಅಧ್ಯಕ್ಷ ಗಿರಿಯಪ್ಪ ಶೆಟ್ಟಿ ಬೆಳಗಿನ ಜಾವದಿಂದಲೇ ವಿಶೇಷ ಪೂಜೆ, ಅಭಿಷೇಕ, ಹೋಮ–ಹವನ ಹಾಗೂ ಅಲಂಕಾರ ಸೇವೆಗಳು ನಡೆಯಿತು. ಬನದ ಹುಣ್ಣಿಮೆ ಪ್ರಕೃತಿ, ತಾಯಿ ಶಕ್ತಿಯ ಆರಾಧನೆಯ ಸಂಕೇತವಾಗಿದ್ದು, ಸಮೃದ್ಧಿ, ಸುಖ–ಶಾಂತಿ ಹಾಗೂ ಉತ್ತಮ ಫಲವನ್ನೇ ನೀಡುತ್ತದೆ ಎಂಬ ನಂಬಿಕೆ ಇದೆ. ದೇವಾಂಗಬೀದಿ ಸೇರಿದಂತೆ ಸುತ್ತಮುತ್ತಲ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಬನಶಂಕರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿ ಹರಕೆ ತೀರಿಸಿದ್ದಾರೆ.ಈ ಸಂದರ್ಭದಲ್ಲಿ ಪ್ರಸಾದ್, ರಾಜಶೇಖರ್, ಮಾಜಿ ಅಧ್ಯಕ್ಷ ರಂಗನಾಥ್, ತಾಲೂಕು ದೇವಾಂಗ ನೇಕಾರರ ಸಂಘದ ಅಧ್ಯಕ್ಷರಾದ ಎಚ್ ಎಸ್ ದ್ರಾಕ್ಷಾಯಿಣಿ, ಶಾಂತಪ್ಪ ಶೆಟ್ಟಿ, ಸೇವಾರ್ಥದಾರರಾದ ಯಶೋಧ, ಲೊಕೇಶ್, ನಾಗರತ್ನ ಎಂಬಿ ಲೋಕೇಶ್, ಗೀತಾ, ಡಾ. ಎಸ್ ನಾರಾಯಣ್, ದೇವಾಂಗ ಸಂಘದ ಕುಲಬಾಂಧವರು ಹಾಜರಿದ್ದರು.