ಅಕ್ಷಯ ತೃತೀಯ: ಆಭರಣ ಖರೀದಿಗೆ ಮುಗಿ ಬಿದ್ದ ಗ್ರಾಹಕರು

| Published : May 10 2024, 11:47 PM IST

ಸಾರಾಂಶ

ಚಿಕ್ಕಮಗಳೂರು: ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯಾವನ್ನು ಅಕ್ಷಯ ತೃತೀಯ ಎಂದು ಕರೆಯಲಾಗುತ್ತದೆ. ಶುಭ ಕಾರ್ಯಗಳನ್ನು ನೆರವೇರಿಸಲು ಮತ್ತು ಖರೀದಿ ಮಾಡಲು ಈ ದಿನ ಬಹಳ ಮಂಗಳಕರವಾದ ದಿನವೆಂಬ ನಂಬಿಕೆಯಿದೆ.

ಚಿಕ್ಕಮಗಳೂರು: ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯಾವನ್ನು ಅಕ್ಷಯ ತೃತೀಯ ಎಂದು ಕರೆಯಲಾಗುತ್ತದೆ. ಶುಭ ಕಾರ್ಯಗಳನ್ನು ನೆರವೇರಿಸಲು ಮತ್ತು ಖರೀದಿ ಮಾಡಲು ಈ ದಿನ ಬಹಳ ಮಂಗಳಕರವಾದ ದಿನವೆಂಬ ನಂಬಿಕೆಯಿದೆ.

ಈ ಹಿನ್ನಲೆಯಲ್ಲಿ ವ್ಯಾಪಾರ, ಗೃಹಪ್ರವೇಶ, ಹೊಸ ಮನೆ, ಕಾರು, ಚಿನ್ನ ಮತ್ತು ಬೆಳ್ಳಿ ಆಭರಣ ಖರೀದಿಯಂತಹ ಶುಭ ಕಾರ್ಯಗಳನ್ನು ಮಾಡುತ್ತಾರೆ. ಇದರಿಂದ ವರ್ಷವಿಡಿ ಅವರ ಜೀವನದಲ್ಲಿ ಸಂತೋಷ ಸಮೃದ್ಧಿ ನೆಲೆಸಿರುತ್ತದೆ ಎಂಬುದು ಪ್ರತೀತಿ.

ಚಿಕ್ಕಮಗಳೂರು ನಗರದ ಬಹುತೇಕ ಎಲ್ಲಾ ಚಿನ್ನಾಭರಣ ಅಂಗಡಿಗಳು ಗ್ರಾಹಕರನ್ನು ಆಕರ್ಷಿಸಲು ಅಂಗಡಿಗಳ ಮುಂದೆ ತಳಿರು ತೋರಣ ಕಟ್ಟಿ ಅಲಂಕಾರಗೊಳಿಸಿದ್ದರು. ಬೆಳಿಗ್ಗೆಯಿಂದಲೇ ಅಂಗಡಿಗಳು ಗ್ರಾಹಕರಿಂದ ತುಂಬಿ ತುಳುಕಾಡುತ್ತಿದ್ದವು. ಕೆಲವು ಅಂಗಡಿಗಳ ಒಳ ಭಾಗದಲ್ಲಿ ಪಂಕ್ತಿಯಂತೆ ಗ್ರಾಹಕರು ಕಾಯುತ್ತಾ ನಿಂತಿದ್ದರು. ಸಂಜೆ 8 ಗಂಟೆಗೆ ವ್ಯಾಪಾರ ಮುಗಿಸುತ್ತಿದ್ದ ಚಿನ್ನಾಭರಣ ಅಂಗಡಿಗಳು ರಾತ್ರಿ 9 ಗಂಟೆಯವರೆಗೆ ಓಪನ್‌ ಆಗಿದ್ದವು.

ಅಂಗಡಿಗಳಲ್ಲಿ ಜನ ದಟ್ಟಣೆ ಹೆಚ್ಚಿದ್ದರಿಂದ ಹಲವು ಗ್ರಾಹಕರು ವಾಪಸ್‌ ಹೋಗಿ ಸಂಜೆ ನಂತರ ಖರೀದಿಗೆ ಆಗಮಿಸುತ್ತಿ ರುವುದು ಎಲ್ಲೆಡೆ ಕಂಡು ಬಂದಿತು.ಪೋಟೋ ಫೈಲ್‌ ನೇಮ್‌ 10 ಕೆಸಿಕೆಎಂ 6ಚಿಕ್ಕಮಗಳೂರಿನ ಮಾರ್ಕೇಟ್‌ ರಸ್ತೆಯಲ್ಲಿರುವ ಆಭರಣ ಅಂಗಡಿಯಲ್ಲಿ ಗೋಲ್ಡ್‌ ಖರೀದಿಯಲ್ಲಿ ತೊಡಗಿದ್ದ ಗ್ರಾಹಕರು.