ಅಸ್ಕಿಯಲ್ಲಿ ಹೇಮರಡ್ಡಿ ಮಲ್ಲಮ್ಮ, ಬಸವ ಜಯಂತಿ

| Published : May 12 2024, 01:22 AM IST / Updated: May 12 2024, 01:23 AM IST

ಅಸ್ಕಿಯಲ್ಲಿ ಹೇಮರಡ್ಡಿ ಮಲ್ಲಮ್ಮ, ಬಸವ ಜಯಂತಿ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಅಸ್ಕಿ ಗ್ರಾಮದಲ್ಲಿ ಸ್ವಾದಿ ಶಿರೋಮಣಿ ಹೇಮರೆಡ್ಡಿ ಮಲ್ಲಮ್ಮನವರ ಜಯಂತಿ ಹಾಗೂ ಸಾಂಸ್ಕೃತಿಕ ನಾಯಕ ಜಗಜ್ಯೋತಿ ಶ್ರೀ ಬಸವೇಶ್ವರರ ಜಯಂತಿ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ತಾಲೂಕಿನ ಅಸ್ಕಿ ಗ್ರಾಮದಲ್ಲಿ ಸ್ವಾದಿ ಶಿರೋಮಣಿ ಹೇಮರೆಡ್ಡಿ ಮಲ್ಲಮ್ಮನವರ ಜಯಂತಿ ಹಾಗೂ ಸಾಂಸ್ಕೃತಿಕ ನಾಯಕ ಜಗಜ್ಯೋತಿ ಶ್ರೀ ಬಸವೇಶ್ವರರ ಜಯಂತಿ ಆಚರಿಸಲಾಯಿತು.

ಹೇಮರಡ್ಡಿ ಮಲ್ಲಮ್ಮನವರ ಹಾಗೂ ಶ್ರೀ ಬಸವೇಶ್ವರರ ಭಾವಚಿತ್ರದ ಮಹಾಪೂಜೆ ಸಲ್ಲಿಸಿ ಭವ್ಯ ಮೆರವಣಿಗೆಗೆ ಗ್ರಾಮದ ರೆಡ್ಡಿ ಸಮಾಜದ ಹಿರಿಯ ಎಸ್.ಎಸ್.ಪಾಟೀಲ ಅವರು ಚಾಲನೆ ನೀಡಿದರು.

ಮೆರವಣಿಗೆ ಉದ್ದಗಲಕ್ಕೂ ಸಮಾಜದ ಮಹಿಳೆಯರು ಕುಂಭಹೂತ್ತು ಕಾರ್ಯಕ್ರಮಕ್ಕೆ ಶೋಭೆ ತಂದರು. ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರಾದ ಎಸ್.ಎಸ್.ಪಾಟೀಲ, ಸಂಗನಗೌಡ ನಾಗರೆಡ್ಡಿ, ಪ್ರಭುಗೌಡ ಬಿರಾದಾರ, ಪ್ರಭುಗೌಡ ಅಮರಖೇಡ, ರುದ್ರಗೌಡ ಬಿರಾದಾರ, ರಾಜು ದೇಸಾಯಿ, ಬಸನಗೌಡ ಕೊಡ್ಲಿ, ಎಚ್.ಎನ್.ಬಿರಾದಾರ, ಯುವ ಮುಖಂಡರಗಳಾದ ಶಿವನಗೌಡ ಬಿರಾದಾರ, ವಿಜಯರೆಡ್ಡಿ ಟಕ್ಕಳಕಿ, ದೇವರೆಡ್ಡಿ ಬಿರಾದಾರ, ಪ್ರಭುಗೌಡ ಬಿರಾದಾರ, ಮಾಂತಗೌಡ ದಂಡಪ್ಪಗೋಳ, ರಾಜು ಟಕ್ಕಳಕಿ, ಅಯ್ಯನಗೌಡ ಪಾಟೀಲ, ರವಿ ಅಮರಖೇಡ, ಮೊದಲಾದವರು ಉಪಸ್ಥಿತರಿದ್ದರು.