ಮಹಾಸಭಾದ ನಿರ್ಣಯದಂತೆ ಬಸವ ಜಯಂತಿ ಆಚರಣೆ: ಸಾಣೇಹಳ್ಳಿ ರೇಣುಕಾರಾಧ್ಯ

| Published : Apr 27 2025, 01:33 AM IST

ಮಹಾಸಭಾದ ನಿರ್ಣಯದಂತೆ ಬಸವ ಜಯಂತಿ ಆಚರಣೆ: ಸಾಣೇಹಳ್ಳಿ ರೇಣುಕಾರಾಧ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಕಡೂರು, ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಸೂಚಿಸಿರುವಂತೆ ಏ.30ರಂದು ಶ್ರೀ ಬಸವೇಶ್ವರರು, ಶ್ರೀ ರೇಣುಕಾ ಚಾರ್ಯರು ಸೇರಿದಂತೆ ಎಲ್ಲ 770 ಅಮರ ಗಣಂಗಳ ಜಯಂತಿ ಮಹೋತ್ಸವವನ್ನು ಆಚರಿಸಲಾಗುವುದು ಎಂದು ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಸಾಣೇಹಳ್ಳಿ ರೇಣುಕಾರಾಧ್ಯ ತಿಳಿಸಿದರು.

ನಿವೃತ್ತ ನೌಕರ ಭವನದಲ್ಲಿ ನಡೆದ ಬಸವೇಶ್ವರ ಜಯಂತಿ ಪೂರ್ವಭಾವಿ ಸಭೆ

ಕನ್ನಡ ಪ್ರಭ ವಾರ್ತೆ, ಕಡೂರು

ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಸೂಚಿಸಿರುವಂತೆ ಏ.30ರಂದು ಶ್ರೀ ಬಸವೇಶ್ವರರು, ಶ್ರೀ ರೇಣುಕಾ ಚಾರ್ಯರು ಸೇರಿದಂತೆ ಎಲ್ಲ 770 ಅಮರ ಗಣಂಗಳ ಜಯಂತಿ ಮಹೋತ್ಸವವನ್ನು ಆಚರಿಸಲಾಗುವುದು ಎಂದು ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಸಾಣೇಹಳ್ಳಿ ರೇಣುಕಾರಾಧ್ಯ ತಿಳಿಸಿದರು.ಶನಿವಾರ ಪಟ್ಟಣದ ನಿವೃತ್ತ ನೌಕರ ಭವನದಲ್ಲಿ ಸಾಣೇಹಳ್ಳಿ ರೇಣುಕಾರಾದ್ಯ ಅಧ್ಯಕ್ಷತೆಯಲ್ಲಿ ನಡೆದ ಬಸವೇಶ್ವರ ಜಯಂತಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಈ ಭಾರಿ ಶ್ರೀ ಬಸವೇಶ್ವರರ ಮತ್ತು ರೇಣುಕಾಚಾರ್ಯರಪ ಸೇರಿದಂತೆ ಎಲ್ಲ 770 ಅಮರ ಗಣಂಗಳ ಜಯಂತಿಯನ್ನು ಏ.30 ರಂದೇ ಆಚರಿಸಲು ರಾಜ್ಯಾಧ್ಯಕ್ಷ ಶಂಕರ ಮಹಾದೇವ ಬಿದರಿ ಅವರು ಸೂಚಿಸಿರುವಂತೆ ಆಚರಿಸಲಾಗುವುದು ಎಂದರು. ಏ.30 ರಂದು ಬಸವೇಶ್ವರ ಜಯಂತಿಯಂದು ಬೆಳಗ್ಗೆ ಪಟ್ಟಣದ ಸುರುಚಿ ಹೋಟೆಲ್ ಮುಂಭಾಗದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಕಚೇರಿಯಲ್ಲಿ ಪೂಜೆ ಸಲ್ಲಿಸಿದ ನಂತರ 8 ಗಂಟೆಗೆ ಶ್ರೀ ಬಸವೇಶ್ವರ ವೃತ್ತದಲ್ಲಿ ವೀರಶೈವ ನೌಕರ ಸಂಘದಿಂದ ಶ್ರೀ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ನಡೆಯಲಿದೆ. ಆನಂತರ 9.30ಕ್ಕೆ ತಾಲೂಕು ರಾಷ್ಟ್ರೀಯ ಹಬ್ಬಗಳ ಸಮಿತಿ ಆಹ್ವಾನದ ಮೇರೆಗೆ ನಡೆಯುವ ಶ್ರೀ ಬಸವೇಶ್ವರ ಜಯಂತಿ ಕಾರ್ಯಕ್ರಮಕ್ಕೆ ತೆರಳಲಾಗುವುದು ಎಂದರು.ಸಮಾಜದ ಬಂಧುಗಳು ಈ ಮೂರು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು. ಮಹಾಸಭಾ ಈಗಾಗಲೇ ತಾಲೂಕು ಮಹಿಳಾ ಘಟಕ, ಯುವ ಘಟಕಗಳನ್ನು ರಚನೆ ಮಾಡಲು ಸೂಚಿಸಿದ್ದು ಆಯ್ಕೆ ಪ್ರಕ್ರಿಯೆ ನಡೆದಿದ್ದು ಶೀಘ್ರವೇ ಪಟ್ಟಿ ಬಿಡುಗಡೆ ಮಾಡಲಾಗುವುದು. ಸಮಾಜ ಮುಖಿಯಾಗಿ ಕಾರ್ಯನಿರ್ವಹಿಸಿ ಸಂಘಟನೆಗೆ ಒತ್ತು ನೀಡುವ ಯುವಕರು ಹಾಗೂ ಮಹಿಳೆಯರನ್ನು ಆಯ್ಕೆ ಮಾಡಲಾಗುವುದು ಎಂದರು. ಪೂರ್ವಭಾವಿ ಸಭೆಯಲ್ಲಿ ಎಚ್.ಸಿ.ರೇವಣಸಿದ್ದಪ್ಪ, ಯಗಟಿ ಶಿವಲಿಂಗಸ್ವಾಮಿ, ನಿವೃತ್ತ ಸಮಾಜ ಕಲ್ಯಾಣಧಿಕಾರಿ ಎಂ.ಎಚ್.ಪ್ರಕಾಶಮೂರ್ತಿ, ಕುಪ್ಪಾಳು ನಂಜುಂಡಾರಾದ್ಯ, ಶೇಖರಪ್ಪ, ಚಂದ್ರಶೇಖರಯ್ಯ, ತುರುವನಹಳ್ಳಿ ರೇಣುಕಪ್ಪ, ಅಂತರಗಟ್ಟೆ ಸವಿತಾ ಬಸವೇಶ್ವರ ಜಯಂತಿ ಕುರಿತು ಮಾತನಾಡಿದರು. ಸಭೆಯಲ್ಲಿ ನಿವೃತ್ತ ಉಪ ನಿರ್ದೇಶಕ ಗಿರಿಯಾಪುರದ ಪ್ರಭುಸ್ವಾಮಿ, ಶಿಕ್ಷಕ ದಿನೇಶ್, ಯತೀಶ್, ಚಂದ್ರಪ್ಪ, ವೀಣಾ, ಶ್ರೀಕಂಠಯ್ಯ, ರಾಜಶೇಖರಯ್ಯ, ಮಂಜಣ್ಣ, ಭಾರ್ಗೇಶಪ್ಪ, ಕಾಶಿನಾಥ್,ಶುಭಮಂಗಳ,ಶೇಖರಪ್ಪ,ಜಗದೀಶ್,ಕೆ.ಹೊಸಹಳ್ಳಿ ಸತೀಶ್ ಮತ್ತು ಲೀಲಾ ಭಾಗವಹಿಸಿದ್ದರು.26ಕೆಕೆಡಿಯು1..ಕಡೂರು ತಾಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ಶ್ರೀ ಬಸವೇಶ್ವರ ಜಯಂತಿ ಪೂರ್ವ ಭಾವಿ ಸಭೆಯಲ್ಲಿ ಮಹಾಸಭಾದ ತಾಲೂಕು ಘಟಕದ ಅಧ್ಯಕ್ಷ ಸಾಣೇಹಳ್ಲಿ.ರೇಣುಕಾರಾಧ್ಯ ಮಾತನಾಡಿದರು.