ಕನ್ನಡಪ್ರಭ ವಾರ್ತೆ ಮುಧೋಳ

ವಿಶ್ವಗುರು ಜಗಜ್ಯೋತಿ ಬಸವೇಶ್ವರರ 895ನೇ ಜಯಂತ್ಯೋತ್ಸವ ನಿಮಿತ್ತ ತಾಲೂಕು ಆಡಳಿತ ಹಾಗೂ ಬಸವ ಜಯಂತಿ ಆಚರಣೆ ಸಮಿತಿಯಿಂದ ಸೋಮವಾರ ಬೆಳಗ್ಗೆ 9 ಗಂಟೆಗೆ ನಗರದ ಬಸ್ ನಿಲ್ದಾಣದ ಎದುರುಗಡೆ ಇರುವ ಬಸವೇಶ್ವರ ಸರ್ಕಲ್ ನಲ್ಲಿರುವ ಬಸವೇಶ್ವರ ಪುತ್ಥಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.ಬಳಿಕ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬಸವೇಶ್ವರರಿಗೆ ತೊಟ್ಟಿಲು ಪೂಜಾ ಕಾರ್ಯಕ್ರಮ ಜರುಗಿತು, ಮಧ್ಯಾಹ್ನ ಸಕಲ ಭಕ್ತಾಧಿಗಳಿಗೆ ಅನ್ನಪ್ರಸಾದ ಸೇವೆ ನೆರವೇರಿತು.

ಸಂಜೆ 6 ಗಂಟೆಗೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬಸವೇಶ್ವರ ಮೂರ್ತಿಗೆ ಪೂಜೆ ಸಲ್ಲಿಸಿದ ಬಳಿಕ ಭಾವಚಿತ್ರ ಭವ್ಯ ಮೆರವಣಿಗೆಗೆ ಚಾಲನೆ ನೀಡಲಾಯಿತು, ಮೆರವಣಿಗೆ ನಗರದ ಪ್ರಮುಖ ಬೀದಿಗಳ ಮೂಲಕ ಸಂಚರಿಸಿ ಮರಳಿ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಬಂತು. ಕರಡಿ ಮೊಜಲು, ಝಾಂಜ್ ಪಥಕ್, ಸಂಬಾಳ ವಾದನ, ಎತ್ತಿನ ಜೋಡಿಗಳು ಸೇರಿದಂತೆ ವಿವಿಧ ವಾಧ್ಯಮೇಳಗಳು ಭಾಗವಹಿಸಿದ್ದವು. ಬಸಯ ಜಯಂತಿ ಆಚರಣೆ ಸಮಿತಿ ಸದಸ್ಯರು, ಭಕ್ತರು, ಅಭಿಮಾನಿಗಳು ಕೇಸರಿ ವರ್ಣದ ಟೋಪಿ ಮತ್ತು ಬಸವೇಶ್ವರ ಭಾವಚಿತ್ರವಿರುವ ಶಾಲು ಧರಿಸಿ ಮೆರವಣಿಗೆಗೆ ಮತ್ತಷ್ಟು ಕಳೆ ತಂದರು.

ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ರಾಚಪ್ಪಣ್ಣ ವ್ಹಿ. ಕರೆಹೊನ್ನ, ಅಖಿಲ ಭಾರತ ವೀರಶೈವ ಮಹಾಸಭಾ ಮುಧೋಳ ತಾಲೂಕು ಘಟಕದ ಅಧ್ಯಕ್ಷ ಸಿದ್ದು ಆರ್. ಕಾಳಗಿ, ಬಸವೇಶ್ವರ ಕಿರಾಣಾ ವರ್ತಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪ್ರಕಾಶ ಬಸಲಿಂಗಪ್ಪ ರಾಮತೀರ್ಥ, ಜಂಗಮ ಸಮಾಜದ ಅಧ್ಯಕ್ಷ ಬಿ.ಸಿ. ಹಿರೇಮಠ, ಪಂಚಮಸಾಲಿ ಸಮಾಜದ ಅಧ್ಯಕ್ಷ ಎಸ್.ಪಿ. ದಾನಪ್ಪಗೋಳ, ಬಣಜಿಗ ಸಮಾಜದ ಅಧ್ಯಕ್ಷ ಅಶೋಕ ಜಿ. ಪಟ್ಟಣಶೆಟ್ಟಿ, ಗಾಣಿಗ ಸಮಾಜದ ಅಧ್ಯಕ್ಷ ಲಕ್ಷ್ಮಣ ಎಸ್. ಚಿನ್ನಣ್ಣವರ, ಶಿವಸಿಂಪಿ ಸಮಾಜದ ಅಧ್ಯಕ್ಷ ಪ್ರಕಾಶ ಐ. ಗಂಗಣ್ಣವರ, ರೆಡ್ಡಿ ಸಮಾಜದ ಅಧ್ಯಕ್ಷ ದಯಾನಂದ ಎಸ್. ಪಾಟೀಲ, ಆದಿ ಬಣಜಿಗ ಸಮಾಜದ ಅಧ್ಯಕ್ಷ ಎಲ್.ಎಸ್.ಡಂಗಿ, ಕುರುಹಿನಶೆಟ್ಟಿ ಸಮಾಜದ ಅಧ್ಯಕ್ಷ ರುದ್ರಪ್ಪ ಸಿ. ಜಾಡರ, ಪಟ್ಟಸಾಲಿ ಸಮಾಜದ ಅಧ್ಯಕ್ಷ ಬಸವರಾಜ ಎನ್. ಹೆಗಡಿ,

ಭಾವಾಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷ ಟಿ.ಕೆ. ಹಂಚಾಟೆ, ಬಂಡಿವಡ್ಡರ ಸಮಾಜದ ಅಧ್ಯಕ್ಷ ಸೈದು ಮುತ್ತಪ್ಪ ಬಂಡಿವಡ್ಡರ, ಬುರುಡ ಸಮಾಜದ ಅಧ್ಯಕ್ಷ ಚಂದ್ರಶೇಖರ ಸಿದ್ದಪ್ಪ ಬುರುಡ, ಕರ್ನಾಟಕ ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾ ಜಿಲ್ಲಾ ಘಟಕದ ಉಪಾಧ್ಯಕ್ಷ ಶಂಕರ ಜಟ್ಟೆಪ್ಪ ಭಜಂತ್ರಿ, ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಶಂಕರ ಬಿ. ಮಾಯಾಚಾರಿ, ಶಿವಶರಣ ಹರಳಯ್ಯ ಸಮಾಜದ ಅಧ್ಯಕ್ಷ ಬಸವರಾಜ ಕಲ್ಲಪ್ಪ ಬೆಳಗಲಿ, ಕ್ಷತ್ರೀಯ ಸೂರ್ಯವಂಶಿ ಕಲಾಲ ಸಮಾಜದ ಅಧ್ಯಕ್ಷ ಕಲ್ಲಪ್ಪ ಚಿಂತಾಮಣಿ ಕಲಾಲ, ಹೂಗಾರ ಸಮಾಜದ ಅಧ್ಯಕ್ಷ ಶ್ರೀಶೈಲ ಮಲ್ಲಪ್ಪ ಗುರವ, ಮಡಿವಾಳ ಸಮಾಜದ ಅಧ್ಯಕ್ಷ ಪರಶುರಾಮ ಹಣಮಂತ ಪರೀಟ, ಹಡಪದ ಸಮಾಜದ ಅಧ್ಯಕ್ಷ ಸಂತೋಷ ಹನಮಂತಪ್ಪ ಕಟ್ಟಿಮನಿ, ಬಸವರಾಜ ಗಣಿ, ಸುರೇಶ ಅಕ್ಕಿಮರಡಿ, ಗುರುಪಾದ ಕುಳಲಿ, ಕಲ್ಮೇಶ ಗೋಸಾರ, ಸಂತೋಷ ಘೋರ್ಪಡೆ, ಗಿರೀಶ ಮೋದಿ, ದುಂಡಪ್ಪ ಯರಗಟ್ಟಿ, ನಿಂಗಪ್ಪ ನಾವಲಗಿ, ಚಂದ್ರಶೇಖರ ಕಬ್ಬೂರ, ಪಂಚಪ್ಪ ನೆವಣಕ್ಕಿ, ಈಶ್ವರಯ್ಯ ದೇವರಮನಿ ಹಾಗೂ ಶ್ರೀ ಬಸವ ಸಮಿತಿ ಹಾಗೂ ಶ್ರೀ ಬಸವ ಜಯಂತಿ ಆಚರಣಾ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.