ಬಸವ ಜಯಂತಿ, ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಣೆ

| Published : May 10 2024, 11:46 PM IST

ಸಾರಾಂಶ

ಸಿಂಧನೂರಿನಲ್ಲಿ ಬಸವ ಜಯಂತಿ ಅಂಗವಾಗಿ ಶುಕ್ರವಾರ ಸಂಜೆ ಬಸವ ವೃತ್ತದಿಂದ ಆರ್ಜಿಎಂ ಶಾಲಾ ಮೈದಾನದ ವರೆಗೆ ಬಸವಣ್ಣನ ಮೂರ್ತಿಯ ಮೆರವಣಿಗೆ ನಡೆಸಲಾಯಿತು

ಸಿಂಧನೂರು: ತಾಲೂಕು ಆಡಳಿತದಿಂದ ಶುಕ್ರವಾರ ವಿಶ್ವಗುರು ಬಸವಣ್ಣ ಹಾಗೂ ಹೇಮರೆಡ್ಡಿ ಮಲ್ಲಮ್ಮನ ಜಯಂತಿ ಆಚರಿಸಲಾಯಿತು.ಬಸವ ಕೇಂದ್ರದ ಜಿಲ್ಲಾ ಘಟಕದ ಅಧ್ಯಕ್ಷ ವೀರಭದ್ರಪ್ಪ ಕುರುಕುಂದಿ ಮಾತನಾಡಿ, ಬಸವಣ್ಣನವರು ಕಾಯಕ ಮತ್ತು ದಾಸೋಹಕ್ಕೆ ಪ್ರಾಧ್ಯಾನ್ಯತೆ ನೀಡಿದ್ದರು. ಇಂದಿನ ಸಂಸತ್ತು ಮತ್ತು ವಿಧಾನಸಭೆ ಜನ ಪ್ರತಿನಿಧಿಗಳಂತಿರದೆ ಭ್ರಷ್ಟಾಚಾರದ ಮನೋಭಾವದಿಂದ ಎಲ್ಲ ಶರಣರು ಮುಕ್ತರಾಗಿದ್ದರು ಎಂದು ಹೇಳಿದರು.ತಹಸೀಲ್ದಾರ್ ಎಚ್.ಅರುಣ ದೇಸಾಯಿ ಮಾತನಾಡಿ, ಹೇಮರೆಡ್ಡಿ ಮಲ್ಲಮ್ಮ ಅವರು ಅತ್ಯಂತ ಸಾದ್ವಿ ಮಹಿಳೆಯಾಗಿ ಮೈದುನನ ಮನ ಪರಿವರ್ತನೆ ಮಾಡುವ ಮೂಲಕ ವೇಮನನನ್ನು ಮಹಾ ಜ್ಞಾನಿ ಮತ್ತು ದಾರ್ಶನಿಕನನ್ನಾಗಿ ಮಾಡಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ ಎಂದು ಅರುಣ ದೇಸಾಯಿ ಹೇಳಿದರು.ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಬಸವರಾಜ ನಾಡಗೌಡ ಮಾತನಾಡಿದರು. ಮುಖಂಡರಾದ ಕೆ.ಕರಿಯಪ್ಪ, ಕರೆಗೌಡ ಕುರುಕುಂದಿ, ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಅಧಿಕಾರಿ ರುದ್ರಪ್ಪ ಕುರುಕುಂದಿ, ನಿರುಪದೆಪ್ಪ ವಕೀಲ, ಗುಂಡಪ್ಪ ಬಳಿಗಾರ, ವೆಂಕೋಬ ನಾಯಕ, ಅಶೋಕಗೌಡ ಗದ್ರಟಗಿ, ಚಂದ್ರಗೌಡ ಬಾದರ್ಲಿ, ಶಿವಕುಮಾರ ಜವಳಿ, ನಿರೂಪಾದೆಪ್ಪ ಜೋಳದರಾಶಿ, ಲಿಂಗಾಧರ ಗುರುಸ್ವಾಮಿ, ಖಾಜಿ ಮಲ್ಲಿಕ್ ವಕೀಲ ಇದ್ದರು.