ರಾಷ್ಟ್ರ ಮಟ್ಟದಲ್ಲಿ ಬಸವ ಜಯಂತಿ ಆಚರಣೆಗೆ ಬರಲಿ

| Published : Mar 10 2025, 12:19 AM IST

ಸಾರಾಂಶ

ಕೇಂದ್ರ ಸರ್ಕಾರ ರಾಷ್ಟ್ರದ ಎಲ್ಲ ರಾಜ್ಯಗಳಲ್ಲಿ ಬಸವ ಜಯಂತಿ ಆಚರಿಸಲು ಕ್ರಮ ಕೈಗೊಳ್ಳಬೇಕೆಂದು ಸವದಿ ಇಳಕಲ್ಲ ಮಠದ ಗುರು ಮಹಾಂತ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಅಥಣಿ

ಅನುಭವ ಮಂಟಪದ ಮೂಲಕ ವಿಶ್ವದ ಮೊದಲ ಸಂಸತ್ತು ರಚನೆಯಾದದ್ದು ಬಸವಾದಿ ಶರಣರ ಕಾಲದ 12ನೇ ಶತಮಾನದಲ್ಲಿ. ಕೇಂದ್ರ ಸರ್ಕಾರ ರಾಷ್ಟ್ರದ ಎಲ್ಲ ರಾಜ್ಯಗಳಲ್ಲಿ ಬಸವ ಜಯಂತಿ ಆಚರಿಸಲು ಕ್ರಮ ಕೈಗೊಳ್ಳಬೇಕೆಂದು ಸವದಿ ಇಳಕಲ್ಲ ಮಠದ ಗುರು ಮಹಾಂತ ಸ್ವಾಮೀಜಿ ಹೇಳಿದರು.

ತಾಲೂಕಿನ ಸವದಿ ಗ್ರಾಮದ ಸಾರವಾಡ ತೋಟದಲ್ಲಿ ಜರುಗಿದ ಶ್ರೀ ಎಡೆಯೂರು ತೋಂಟದ ಸಿದ್ದಲಿಂಗೇಶ್ವರ ಜಾತ್ರಾ ಮಹೋತ್ಸವ ಹಾಗೂ ತೆಪ್ಪೋತ್ಸವ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಬಸವಾದಿ ಶರಣರು ಕೇವಲ ಕರ್ನಾಟಕ ರಾಜ್ಯಕ್ಕೆ ಮಾತ್ರ ಸೀಮಿತವಾಗ ಬಾರದು, ಅವರು ವಿಶ್ವ ಮಾನ್ಯರು. ಬಸವ ತತ್ವಗಳು ಎಂದೆಂದಿಗೂ ಪ್ರತಿಯೊಬ್ಬರಿಗೂ ದಾರಿದೀಪವಾಗಿವೆ ಎಂದು ಹೇಳಿದ ಅವರು, ಸಾರವಾಡ ಮನೆತನದವರು ಕಳೆದ ಅನೇಕ ವರ್ಷಗಳಿಂದ ಶ್ರೀ ಎಡೆಯೂರು ತೋಂಟದ ಸಿದ್ದಲಿಂಗೇಶ್ವರ ಜಾತ್ರಾ ಮಹೋತ್ಸವ ಆಚರಿಸಿ ಕೊಂಡು ಬರುತ್ತಿರುವುದು ಅವರ ಕಾಯಕ ದಾಸೋಹದ ನಿಷ್ಠೆಯನ್ನು ತೋರಿಸುತ್ತದೆ ಎಂದು ಹೇಳಿದರು.

ಡಾ. ಬಸವಲಿಂಗ ಸ್ವಾಮೀಜಿ, ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿದರು. ಈ ಸಂದರ್ಭದಲ್ಲಿ ಶ್ರೀ ವಿರತೇಶಾನಂದ ಸ್ವಾಮೀಜಿ, ಶ್ರೀ ಯಶವಂತ ದೇವರು, ಗ್ರಾ.ಪಂ. ಅಧ್ಯಕ್ಷೆ ಬಿಸ್ಮಿಲ್ಲಾ ಬೆಳ್ಳುಬ್ಬಿ, ಮಲ್ಲನಗೌಡ ಪಾಟೀಲ, ಸದಾಶಿವ ಸಾರವಾಡ, ನಿಂಗಪ್ಪ ಸಾರವಾಡ, ರಾಯಪ್ಪ ಜಿವೋಜಿ, ಮಹಾಂತೇಶ ಸಾರವಾಡ, ಪ್ರಕಾಶ ಪಾಟೀಲ, ಬಸವರಾಜ ಸಾರವಾಡ, ಭೀಮಣ್ಣ ಅಥಣಿ, ಡಾ. ಶ್ರೀಶೈಲ ಕೊಪ್ಪದ, ಮಹೇಶ ಮಠದ, ಅದೃಶಿ ಪಾಟೀಲ, ಮಲ್ಲಿಕಾರ್ಜುನ ಠಕ್ಕನ್ನವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.