ಚಿಕ್ಕಮಗಳೂರುಬಸವ ಮಂಟಪ ಪುಸ್ತಕದ ಕುರಿತು ಲೇಖಕ ರವಿ ಹಂಜ್ ನೀಡಿರುವ ಹೇಳಿಕೆ ಖಂಡಿಸಿ ರಾಷ್ಟ್ರೀಯ ಬಸವದಳ, ಜಾಗತಿಕ ಲಿಂಗಾಯತ ವೇದಿಕೆ ಸೇರಿದಂತೆ ವಿವಿಧ ಬಸವಪರ ಸಂಘಟನೆಗಳ ನೇತೃತ್ವದಲ್ಲಿ ನೂರಾರು ಬಸವ ಅನುಯಾಯಿಗಳು ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

(ಮೂರು ಪೋಟೋ ಇವೆ.. ಪ್ರತ್ಯೇಕವಾಗಿ ಬಳಸಿ)

- ರವಿ ಹಂಜ್ ಹೇಳಿಕೆ ಖಂಡನೆ । ನಗರದ ತಾಲೂಕು ಕಚೇರಿಯಿಂದ ಬಸವಣ್ಣನ ಭಾವಚಿತ್ರದೊಂದಿಗೆ ಆಜಾದ್ ಪಾರ್ಕ್ ವೃತ್ತದವರೆಗೆ ಮೆರವಣಿಗೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಬಸವ ಮಂಟಪ ಪುಸ್ತಕದ ಕುರಿತು ಲೇಖಕ ರವಿ ಹಂಜ್ ನೀಡಿರುವ ಹೇಳಿಕೆ ಖಂಡಿಸಿ ರಾಷ್ಟ್ರೀಯ ಬಸವದಳ, ಜಾಗತಿಕ ಲಿಂಗಾಯತ ವೇದಿಕೆ ಸೇರಿದಂತೆ ವಿವಿಧ ಬಸವಪರ ಸಂಘಟನೆಗಳ ನೇತೃತ್ವದಲ್ಲಿ ನೂರಾರು ಬಸವ ಅನುಯಾಯಿಗಳು ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.ನಗರದ ತಾಲೂಕು ಕಚೇರಿ ಆವರಣದಿಂದ ಬಸವಣ್ಣನವರ ಭಾವಚಿತ್ರದೊಂದಿಗೆ ಆರಂಭವಾದ ಪ್ರತಿಭಟನಾ ಮೆರವಣಿಗೆ ಆಜಾದ್ ಪಾರ್ಕ್ ವೃತ್ತದವರೆಗೆ ಸಾಗಿತು. ಈ ವೇಳೆ ಲೇಖಕ ರವಿ ಹಂಜ್ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತ ಪಡಿಸಿದ ಪ್ರತಿಭಟನಾಕಾರರು ವಿವಾದಕ್ಕೆ ಕಾರಣವಾದ ಬಸವ ಮಂಟಪ ಪುಸ್ತಕ ನಿಷೇಧಿಸುವಂತೆ ಒತ್ತಾಯಿಸಿದರು.ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯಾಧ್ಯಕ್ಷ ಶಂಕರ್ ಬಿದರಿ ಅವರನ್ನು ಕೂಡಲೇ ಹುದ್ದೆಯಿಂದ ವಜಾ ಗೊಳಿಸಬೇಕೆಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಚಿಕ್ಕಮಗಳೂರಿನ ಬಸವತತ್ವಪೀಠದ ಶ್ರೀ ಡಾ. ಬಸವಮರುಳ ಸಿದ್ದಸ್ವಾಮೀಜಿ, ಯಳನಾಡು ಮಹಾ ಸಂಸ್ಥಾನದ ಶ್ರೀ ಗುರು ಸಿದ್ದರಾಮ ದೇಶೀಕೇಂದ್ರ ಮಹಾಸ್ವಾಮೀಜಿ ಸೇರಿದಂತೆ ವಿವಿಧ ಮಠಗಳ ಸ್ವಾಮೀಜಿ ಹಾಗೂ ಬಸವಪರ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು.ಪ್ರತಿಭಟನಾ ಮೆರವಣಿಗೆ ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಅಪರ ಜಿಲ್ಲಾಧಿಕಾರಿ ನಂಜುಂಡೇಗೌಡ ಅವರಿಗೆ ಮನವಿ ಸಲ್ಲಿಸಲಾಯಿತು.

... ಬಾಕ್ಸ್....ಬಸವ ಮಂಟಪ ಕೃತಿಯ ಆಕ್ಷೇಪಾರ್ಹ ಅಂಶಗಳ ಕುರಿತು ನಿಷ್ಪಕ್ಷಪಾತ ತನಿಖೆಗೆ ಆಗ್ರಹಚಿಕ್ಕಮಗಳೂರು: ‘ಬಸವ ಮಂಟಪ’ ಕೃತಿ ಲೇಖಕ ರವಿ ಹಂಜ್ ಅವರು ಯೂಟ್ಯೂಬ್ ಸಂದರ್ಶನದಲ್ಲಿ ಬಸವಣ್ಣನವರ ಕುರಿತು ನೀಡಿರುವ ಅವಹೇಳನಕಾರಿ ಹೇಳಿಕೆಗಳು ಬಸವಾಭಿಮಾನಿಗಳಿಗೆ ತೀವ್ರ ನೋವುಂಟು ಮಾಡಿವೆ. ಯಾವುದೇ ಐತಿಹಾಸಿಕ ದಾಖಲೆಗಳಿಲ್ಲದೆ ಬಸವಣ್ಣನವರ ವ್ಯಕ್ತಿತ್ವ ಮತ್ತು ಚಾರಿತ್ರ್ಯಕ್ಕೆ ಧಕ್ಕೆ ತರುವ ರೀತಿ ಮಾತನಾಡಿರುವುದು ಖಂಡನೀಯ ಎಂದು ಬಸವ ತತ್ವಪೀಠದ ಡಾ. ಬಸವ ಮರುಳಸಿದ್ದ ಸ್ವಾಮೀಜಿ ಹೇಳಿದರು.ಶನಿವಾರ ಚಿಕ್ಕಮಗಳೂರಿನಲ್ಲಿ ಬಸವಾಭಿಮಾನಿಗಳು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ ಸುಮಾರು ಒಂದೂವರೆ ಗಂಟೆ ಸಂದರ್ಶನದಲ್ಲಿ ನಿರಂತರವಾಗಿ ಬಸವಣ್ಣನವರ ಕುರಿತು ಅವಹೇಳನಕಾರಿ ಹೇಳಿಕೆಗಳನ್ನು ನೀಡಿ ಬಳಿಕ ಜೈನ ಪುರಾಣಗಳ ಆಧಾರವಿದೆ ಎಂದು ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡಲಾಗಿದೆ. ಆದರೆ, ಸಂಶೋಧನಾ ತ್ಮಕವಾಗಿ ಯಾವುದೇ ದಾಖಲೆಗಳನ್ನು ಮುಂದಿಡದೆ ವ್ಯಕ್ತಿತ್ವ ಹರಣ ಮಾಡಿರುವುದು ಸಮಾಜದ ಆಕ್ರೋಶಕ್ಕೆ ಕಾರಣವಾಗಿದೆ ಎಂದರು.ಈ ವಿಚಾರದಲ್ಲಿ ಪಕ್ಷಾತೀತ, ಜಾತ್ಯತೀತ ಮತ್ತು ಪಂಥಾತೀತ ವಿರೋಧ ವ್ಯಕ್ತವಾಗುತ್ತಿದೆ. ಸರ್ಕಾರ ಈಗಾಗಲೇ ಕೃತಿ ಮುಟ್ಟುಗೋಲು ಹಾಕಿಕೊಳ್ಳುವ ನಿರ್ಧಾರ ಕೈಗೊಂಡಿದ್ದು, ಪ್ರಕರಣ ದಾಖಲಾಗಿದೆ. ಕೃತಿಯಲ್ಲಿರುವ ಆಕ್ಷೇಪಾರ್ಹ ಅಂಶಗಳ ಕುರಿತು ಯಾರ ಪ್ರಭಾವಕ್ಕೂ ಒಳಗಾಗದೆ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಬಸವಣ್ಣನವರು ಬದುಕಿದ್ದ ಕಾಲದಲ್ಲೂ ಇಂತಹ ವಿರೋಧಗಳನ್ನು ಎದುರಿಸಿದ್ದರು. ಇಂದಿಗೂ ಅಂತಹ ಮನಸ್ಥಿತಿ ಮುಂದುವರಿದಿರುವುದು ದುರದೃಷ್ಟಕರ ಎಂದರು.

ರವಿ ಹಂಜ್ ಬಂಧನದ ಮೂಲಕ ಬಸವಣ್ಣನವರ ಅವಹೇಳನವನ್ನು ಸರ್ಕಾರ ಸಹಿಸುವುದಿಲ್ಲ ಎಂಬ ಸಂದೇಶ ರವಾನೆ ಯಾಗಿದೆ. ವಿರೋಧ ಪಕ್ಷಗಳೂ ಈ ವಿಚಾರದಲ್ಲಿ ಬೆಂಬಲ ವ್ಯಕ್ತಪಡಿಸಿರುವುದು ಸ್ವಾಗತಾರ್ಹ ಎಂದರು.ಮಾಜಿ ಪೊಲೀಸ್ ಅಧಿಕಾರಿ ಶಂಕರ್ ಬಿದರಿ ಈ ವಿಚಾರದಲ್ಲಿ ಆತ್ಮಸಾಕ್ಷಿ ಪ್ರಶ್ನಿಸಿಕೊಳ್ಳಬೇಕು. ಗಣ್ಯರು ವಿಶ್ವಾಸದ ಮೇರೆಗೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿರಬಹುದು. ಆದರೆ, ಕಾರ್ಯಕ್ರಮದ ಬಳಿಕ ಅವರು ವ್ಯಕ್ತಪಡಿಸಿರುವ ಆಕ್ಷೇಪ ಗಮನಿಸಬೇಕಿದೆ ಎಂದು ಹೇಳಿದರು.ತಾವು ಕೃತಿ ಓದಿಲ್ಲವಾದರೂ ಪತ್ರಿಕೆಗಳಲ್ಲಿ ಪ್ರಕಟವಾದ ಲೇಖನಗಳನ್ನು ಗಮನಿಸಿದ್ದೇನೆ. ಹಿರಿಯ ಸಂಶೋಧಕರ ಕುರಿತು ಬಳಸಿರುವ ಭಾಷೆ ಸಂಶೋಧಕರಿಗೆ ಇರಬೇಕಾದ ಸೌಜನ್ಯ ತೋರಿಸುವುದಿಲ್ಲ. ಕಲಬುರ್ಗಿ ಅವರ ಸಂಶೋಧನೆ ತಪ್ಪಾಗಿರ ಬಹುದು. ಆದರೆ ಸುಳ್ಳಲ್ಲ. ಸಂಶೋಧನೆಯಲ್ಲಿನ ತಪ್ಪುಗಳನ್ನು ಸೌಜನ್ಯಯುತವಾಗಿ ಖಂಡಿಸುವುದು ವಸ್ತುನಿಷ್ಠ ಸಂಶೋಧಕನ ಲಕ್ಷಣ. ಈ ಮಾನದಂಡಗಳು ಪಾಲನೆಯಾಗದಿದ್ದರೆ ಅದನ್ನು ಸಂಶೋಧನಾ ಗ್ರಂಥವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

....... ಬಾಕ್ಸ್....

ಬಸವಣ್ಣನವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಬಂಧನಕ್ಕೆ ಆಗ್ರಹಚಿಕ್ಕಮಗಳೂರು: ಬಸವಣ್ಣನವರ ಕುರಿತು ಆಧಾರರಹಿತ, ಆಕ್ಷೇಪಾರ್ಹ ಆರೋಪ ಮಾಡಿರುವ ಲೇಖಕ ರವಿ ಹಂಜ್, ಶಂಕರ್ ಬಿದರಿ ಮತ್ತು ಮನು ಬಳಿಗಾರ್ ಸೇರಿದಂತೆ ಸಂಬಂಧಪಟ್ಟವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಾಗತಿಕ ಲಿಂಗಾಯತ ಮಹಾಸಭಾ ಆಗ್ರಹಿಸಿದೆ.ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಾಸಭಾದ ಗಂಗಧರಪ್ಪ ಬಸವಣ್ಣನವರು ಜಾತಿ ವ್ಯವಸ್ಥೆ ಕಂದಾಚಾರ ಗಳನ್ನು ಪ್ರಶ್ನಿಸಿ, ಕಾಯಕಕ್ಕೆ ಘನತೆ ನೀಡಿ, ದಾಸೋಹದ ಮೂಲಕ ಸಮಾನತೆ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಮಹಾನ್ ಸುಧಾರಕರು. ಅಂತಹ ಮಹಾನ್ ದಾರ್ಶನಿಕರ ಕುರಿತು ಬಿಜ್ಜಳನ ಕೊಲೆಗೆ ಅವರೇ ಕಾರಣಕರ್ತರು, ಭಂಡಾರದ ಹಣ ದುರುಪಯೋಗಪಡಿಸಿಕೊಂಡು ಶರಣರಿಗೆ ದಾಸೋಹ ಮಾಡಿದರು, ಸುಳ್ಳುಗಾರರು ಎಂಬರ್ಥದ ಹೇಳಿಕೆ ನೀಡಿರುವುದು ಬಸವತತ್ವದ ಅಭಿಮಾನಿಗಳ ಭಾವನೆಗಳಿಗೆ ನೋವುಂಟುಮಾಡಿದೆ ಎಂದು ಖಂಡಿಸಿದರು.ಬಸವಣ್ಣನವರ ವಿರುದ್ಧ ಮಾಡಿದ ಆರೋಪಗಳಿಗೆ ಯಾವ ಐತಿಹಾಸಿಕ ದಾಖಲೆಗಳು, ಸಮಕಾಲೀನ ಶಾಸನಗಳು ಅಥವಾ ಸಂಶೋಧನಾ ಕೃತಿಗಳು ಆಧಾರವಾಗಿವೆ ಎಂಬುದನ್ನು ಬಹಿರಂಗಪಡಿಸಬೇಕು. ದಾಖಲೆಗಳಿಲ್ಲದೆ ವೈಯಕ್ತಿಕ ಅಭಿಪ್ರಾಯ ಗಳನ್ನು ಇತಿಹಾಸದ ಸತ್ಯವೆಂದು ಬಿಂಬಿಸುವುದು ಸರಿಯಲ್ಲ. ಕಲ್ಯಾಣದ ರಾಜಕೀಯ ಸಂಘರ್ಷಗಳು, ಬಸವಣ್ಣನವರ ಆಡಳಿತಾತ್ಮಕ ಜವಾಬ್ದಾರಿ ಹಾಗೂ ದಾಸೋಹದ ತಾತ್ವಿಕ ನೆಲೆ ಸಮಗ್ರವಾಗಿ ಅಧ್ಯಯನ ಮಾಡದೆ ಅವರ ಮೇಲೆ ಬಿಜ್ಜಳನ ಕೊಲೆ ಹೊಣೆ ಹೊರಿಸುವುದು ವ್ಯಕ್ತಿತ್ವ ಹರಣದ ಪ್ರಯತ್ನ ಎಂದರು.ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಐತಿಹಾಸಿಕ ಮಹಾಪುರುಷರನ್ನು ಆಧಾರರಹಿತವಾಗಿ ಅವಮಾನಿಸುವುದನ್ನು ಸಹಿಸ ಲಾಗದು. ಸಂಬಂಧಪಟ್ಟ ಹೇಳಿಕೆಗಳ ಸಂಪೂರ್ಣ ವಿಡಿಯೋ ಮತ್ತು ಸಂಭಾಷಣೆ ಪರಿಶೀಲಿಸಿ ಸ್ವತಂತ್ರ ತನಿಖೆ ನಡೆಸಬೇಕು. ಆರೋಪಗಳು ಆಧಾರರಹಿತವೆಂದು ದೃಢಪಟ್ಟಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು. ತಪ್ಪು ಮಾಹಿತಿ ಪ್ರಸಾರವಾಗಿದ್ದರೆ ಸಾರ್ವಜನಿಕವಾಗಿ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.ಅಲ್ಲದೆ, ಬಸವತತ್ವದ ವಿದ್ವಾಂಸರು, ಇತಿಹಾಸಕಾರರು ಹಾಗೂ ಶರಣ ಸಾಹಿತ್ಯದ ಸಂಶೋಧಕರಿಗೆ ತಮ್ಮ ಅಭಿಪ್ರಾಯ ಗಳನ್ನು ದಾಖಲೆಗಳ ಸಹಿತ ಮಂಡಿಸಲು ಸಮಾನ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಶಿವಮೂರ್ತಿ, ಶಿವಾನಂದ, ಬಸವರಾಜು, ಗಾಯಿತ್ರಿ, ಸೌಮ್ಯ, ಯೋಗಿಶ್ ಹಾಗೂ ಬಿಎಸ್‌ಪಿ ಮುಖಂಡ ಕೆ.ಟಿ. ರಾಧಾಕೃಷ್ಣ ಉಪಸ್ಥಿತರಿದ್ದರು.