ಹಾವಿಗೆ ಹಾಲು ನೀಡದೇ ರೋಗಿಗಳಿಗೆ ಹಾಲು ವಿತರಿಸಿ ಬಸವ ಪಂಚಮಿ ಆಚರಣೆ

| Published : Jul 30 2025, 12:45 AM IST

ಹಾವಿಗೆ ಹಾಲು ನೀಡದೇ ರೋಗಿಗಳಿಗೆ ಹಾಲು ವಿತರಿಸಿ ಬಸವ ಪಂಚಮಿ ಆಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಜಯಲಕ್ಷ್ಮಿ ಮಾತನಾಡಿ, ಮಾನವ ಬಂಧುತ್ವ ವೇದಿಕೆಯಿಂದ ರೋಗಿಗಳಿಗೆ ಹಾಲು, ಬ್ರೆಡ್ ವಿತರಿಸಿ ನಾಗರ ಪಂಚಮಿಯನ್ನು ಬಸವ ಪಂಚಮಿಯನ್ನಾಗಿ ಆಚರಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಕಾರಣ ಹಾವುಗಳು ಹಾಲನ್ನು ಕುಡಿಯುವುದಿಲ್ಲ. ಆದರೂ ಹಾಲನ್ನು ಹುತ್ತಕ್ಕೆಎರೆದು ಹಾಳು ಮಾಡುತಿದ್ದೇವೆ. ಆದರೆ ದೇಶದಲ್ಲಿ ಸಾಕಷ್ಟು ಮಕ್ಕಳು ಅಪೌಷ್ಠಿಕತೆಯಿಂದ ಬಳಲುತಿದ್ದಾರೆ. ಈ ಹಾಲಿನಲ್ಲಿ ಕಾರ್ಬೋಹೈಡೆಟ್, ಪ್ರೋಟೀನ್ ಸೇರಿದಂತೆ ಮಕ್ಕಳಿಗೆ ಏನು ಬೇಕು ಅದೆಲ್ಲ ಇರುತ್ತೆ. ಹಾಲನ್ನು ವೇಸ್ಟ್ ಮಾಡದೆ ಒಳ್ಳೆ ಉದ್ದೇಶಕ್ಕೆ ಬಳಸಿದರೆ ಸಾರ್ಥಕವಾಗುತ್ತದೆ ಎಂದರು.

ಕನ್ನಡಪ್ರಭ ವಾರ್ತೆ ಬೇಲೂರುಕರ್ನಾಟಕ ಮಾನವ ಬಂಧುತ್ವ ವೇದಿಕೆ ತಾಲೂಕು ಘಟಕದಿಂದ ನಾಗರ ಪಂಚಮಿ ಅಂಗವಾಗಿ ಬಸವ ಪಂಚಮಿ ಹೆಸರಲ್ಲಿ ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ರೋಗಿಗಳಿಗೆ ಮಂಗಳವಾರ ವೈದ್ಯರು ಹಾಗೂ ಗಣ್ಯರ ಸಮ್ಮುಖದಲ್ಲಿ ಹಾಲು, ಬ್ರೆಡ್ ವಿತರಿಸುವ ಮೂಲಕ ಬಸವ ಪಂಚಮಿ ಆಚರಿಸಿದರು.ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಜಯಲಕ್ಷ್ಮಿ ಮಾತನಾಡಿ, ಮಾನವ ಬಂಧುತ್ವ ವೇದಿಕೆಯಿಂದ ರೋಗಿಗಳಿಗೆ ಹಾಲು, ಬ್ರೆಡ್ ವಿತರಿಸಿ ನಾಗರ ಪಂಚಮಿಯನ್ನು ಬಸವ ಪಂಚಮಿಯನ್ನಾಗಿ ಆಚರಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಕಾರಣ ಹಾವುಗಳು ಹಾಲನ್ನು ಕುಡಿಯುವುದಿಲ್ಲ. ಆದರೂ ಹಾಲನ್ನು ಹುತ್ತಕ್ಕೆಎರೆದು ಹಾಳು ಮಾಡುತಿದ್ದೇವೆ. ಆದರೆ ದೇಶದಲ್ಲಿ ಸಾಕಷ್ಟು ಮಕ್ಕಳು ಅಪೌಷ್ಠಿಕತೆಯಿಂದ ಬಳಲುತಿದ್ದಾರೆ. ಈ ಹಾಲಿನಲ್ಲಿ ಕಾರ್ಬೋಹೈಡೆಟ್, ಪ್ರೋಟೀನ್ ಸೇರಿದಂತೆ ಮಕ್ಕಳಿಗೆ ಏನು ಬೇಕು ಅದೆಲ್ಲ ಇರುತ್ತೆ. ಹಾಲನ್ನು ವೇಸ್ಟ್ ಮಾಡದೆ ಒಳ್ಳೆ ಉದ್ದೇಶಕ್ಕೆ ಬಳಸಿದರೆ ಸಾರ್ಥಕವಾಗುತ್ತದೆ. ಮತ್ತು ನಮ್ಮಲ್ಲಿಅಡಗಿರುವ ಮೂಢನಂಬಿಕೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮ ಸಹಕಾರಿಯಾಗಿದೆ. ಆದ್ದರಿಂದ ಹಾಲನ್ನು ರೋಗಿಗಳಿಗೆ ಹಾಗೂ ಮಕ್ಕಳಿಗೆ ಕೊಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.ತಾಲೂಕುಆ ರೋಗ್ಯಾಧಿಕಾರಿ ಡಾ.ವಿಜಯ್ ಮಾತನಾಡಿ, ನಮ್ಮ ದೇಶದಲ್ಲಿ ಹೆಚ್ಚು ಮಕ್ಕಳು ಅಪೌಷ್ಠಿಕತೆಯಿಂದ ಬಳಲುತಿದ್ದಾರೆ. ಪ್ರಮುಖವಾಗಿ ಮಗು ಹುಟ್ಟಿದಾಗ ತಾಯಿಯ ಹಾಲು ಮಗುವಿಗೆ ಅಮೃತವಿದ್ದಂತೆ. ಆರು ತಿಂಗಳವರೆಗೆ ನಿರಂತರವಾಗಿ ಹಾಲು ಕುಡಿಸಬೇಕು.ಅದೇರೀತಿ ನಾವು ನಾಗರ ಪಂಚಮಿ ಹೆಸರಲ್ಲಿ ಹಾಲನ್ನು ಹಾಳು ಮಾಡದೆ ಅವಶ್ಯಕತೆ ಇರುವ ಮಕ್ಕಳಿಗೆ ಕೊಟ್ಟಲ್ಲಿ ನಿಜವಾದಅರ್ಥ ಬರುತ್ತದೆ. ವೈಜ್ಞಾನಿಕವಾಗಿ ಹಾವು ಹಾಲು ಕುಡಿಯುವುದಿಲ್ಲ ಎಂಬುದು ಸಾಬೀತಾಗಿದ್ದರೂ, ನಾಗರ ಪಂಚಮಿಯ ಹೆಸರಿನಲ್ಲಿ ಸಾವಿರಾರು ಲೀಟರ್ ಹಾಲನ್ನು ಹುತ್ತಕ್ಕೆ ಹಾಕುತ್ತೇವೆ. ಅದೇ ಹಾಲನ್ನು ಮಕ್ಕಳ ಜೊತೆ ಹಂಚಿಕೊಂಡರೆ ಒಳ್ಳೆಯದು. ಈ ನಿಟ್ಟಿನಲ್ಲಿಮಾನವ ಬಂಧುತ್ವ ವೇದಿಕೆಯಿಂದ ನಾಗರ ಪಂಚಮಿಯನ್ನು ಬಸವ ಪಂಚಮಿಯನ್ನಾಗಿ ಆಚರಿಸಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಮಕ್ಕಳು ಹಾಗೂ ರೋಗಿಗಳಿಗೆ ಹಾಲು ಬ್ರೆಡ್‌ ಕೊಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.ದಸಂಸ (ಅಂಬೇಡ್ಕರ್ ವಾದ)ವಿಬಾಗಿಯ ಸಂಚಾಲಕ ಲಕ್ಷ್ಮಣ್ ಬೇಲೂರು, ಮಾನವ ಬಂಧುತ್ವ ವೇದಿಕೆ ಸಂಪನ್ಮೂಲ ವ್ಯಕ್ತಿ ಸೌಬಾಗ್ಯಆಂತೋಣಿಸ್ವಾಮಿ, ವಿದ್ಯಾರ್ಥಿ ವೇದಿಕೆ ಜಿಲ್ಲಾ ಸಂಚಾಲಕ ಲಿಖಿತ್, ತಾಲೂಕು ಸಂಚಾಲಕ ರಂಜನ್, ಮುಖಂಡರಾದ ಮಂಜುನಾಥ್, ಸಂಜಯ್, ಶಿವಕುಮಾರ್, ಉಮೇಶ್, ಚಂದ್ರು, ಕುಮಾರ್, ನೂರ್‌ ಅಹಮದ್, ರಮೇಶ್, ಶೇಷಪ್ಪ ಸೇರಿದಂತೆಇತರರಿದ್ದರು.

==============

ಫೋಟೊ:

ನಾಗರ ಪಂಚಮಿ ಅಂಗವಾಗಿ ಮಾನವ ಬಂಧುತ್ವ ವೇದಿಕೆ ತಾಲೂಕು ಘಟಕದಿಂದ ಬಸವ ಪಂಚಮಿ ಹೆಸರಲ್ಲಿ ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿಮಕ್ಕಳಿಗೆ ಹಾಲು ಬ್ರೆಡ್ ವಿತರಿಸುತ್ತಿರುವ ವೈದ್ಯರು ಮತ್ತಿತರರು.