ಸ್ತ್ರೀ ಸಮಾನತೆಗೆ ಒತ್ತು ನೀಡಿದ ಬಸವಾದಿ ಶರಣರು

| Published : Jul 02 2025, 11:48 PM IST

ಸಾರಾಂಶ

ಶತಶತಮಾನಗಳಿಂದ ಶೋಷಣೆಗೆ ಒಳಪಟ್ಟಿದ್ದ ಸ್ತ್ರೀಸಮುದಾಯದ ಧ್ವನಿಯಾದವರು ಬಸವಾದಿ ಶರಣರು ಎಂದು ಮಹಿಳಾ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎಂ.ಎಸ್. ಸರ್ವಮಂಗಳ ತಿಳಿಸಿದರು. ರಾಮನಾಥಪುರ ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ವಚನಗಳನ್ನು ಕಂಠಪಾಠ ಮಾಡಲು ಉಚಿತವಾಗಿ ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದ ವಚನ ಪುಸ್ತಕಗಳನ್ನು ನೀಡಿದ ನಂತರ ಮಾತನಾಡಿದ ಅವರು, ಹೆಣ್ಣು- ಗಂಡು ಎಂಬ ಕಲ್ಪನೆ ಕೇವಲ ದೇಹಕ್ಕೆ ಮಾತ್ರವೇ ವಿನಃ ಆತ್ಮಕ್ಕೆ ಅಲ್ಲ ಎಂಬ ವಿಶಿಷ್ಟ ಕಲ್ಪನೆ ನೀಡಿದ ಹಿರಿಮೆ ಬಸವಾದಿ ಶರಣರಿಗೆ ಸಲ್ಲುತ್ತದೆ ಎಂದರು.

ರಾಮನಾಥಪುರ: ಶತಶತಮಾನಗಳಿಂದ ಶೋಷಣೆಗೆ ಒಳಪಟ್ಟಿದ್ದ ಸ್ತ್ರೀಸಮುದಾಯದ ಧ್ವನಿಯಾದವರು ಬಸವಾದಿ ಶರಣರು ಎಂದು ಮಹಿಳಾ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎಂ.ಎಸ್. ಸರ್ವಮಂಗಳ ತಿಳಿಸಿದರು.ರಾಮನಾಥಪುರ ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ವಚನಗಳನ್ನು ಕಂಠಪಾಠ ಮಾಡಲು ಉಚಿತವಾಗಿ ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದ ವಚನ ಪುಸ್ತಕಗಳನ್ನು ನೀಡಿದ ನಂತರ ಮಾತನಾಡಿದ ಅವರು, ಲಿಂಗಬೇಧದ ವಿರುದ್ಧ ಸಿಡಿದೇಳುವ ಮೂಲಕ ಸ್ತ್ರೀ ಸ್ವಾತಂತ್ರ್ಯ ಪ್ರತಿಪಾದನೆ ಮಾಡಿದವರು ಬಸವಣ್ಣನವರು. ಹೆಣ್ಣು- ಗಂಡು ಎಂಬ ಕಲ್ಪನೆ ಕೇವಲ ದೇಹಕ್ಕೆ ಮಾತ್ರವೇ ವಿನಃ ಆತ್ಮಕ್ಕೆ ಅಲ್ಲ ಎಂಬ ವಿಶಿಷ್ಟ ಕಲ್ಪನೆ ನೀಡಿದ ಹಿರಿಮೆ ಬಸವಾದಿ ಶರಣರಿಗೆ ಸಲ್ಲುತ್ತದೆ ಎಂದರು.ಈ ಸಂದರ್ಭದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರು ಎಂ.ಎನ್. ಕುಮಾರಸ್ವಾಮಿ, ಸಮಿತಿ ಸದಸ್ಯರು ಸಿದ್ದರಾಮ, ಕಾಲೇಜು ಜೆ. ಮಂಜುನಾಥ್, ಎಸ್.ವಿ. ನಂದಿನಿ, ಕೆ.ಎಸ್. ಶಾಮಾಲಾದೇವಿ, ಕೆ.ಎಂ. ಪ್ರದೀಪ್, ಕೆ.ಎಸ್. ಯುವರಾಜ್, ಕೆ.ಎಸ್. ಕೃಷ್ಣ, ಎಚ್.ಅರ್. ದಯಾನಂದ, ಕೆ.ಸಿ. ಕಿರಣ್, ಪ್ರಿಯದರ್ಶಿನಿ, ಲಾವಣ್ಯ, ಅರ್ಪಿತ ಇದ್ದರು.