ಬಸವಾದಿ ಶಿವಶರಣರು ಮಹಿಳಾ ಸಮಾನತೆಯ ಹರಿಕಾರರು-ಡಾ. ಮಲ್ಲಿಕಾರ್ಜುನ ಸ್ವಾಮೀಜಿ

| Published : Dec 02 2024, 01:18 AM IST

ಬಸವಾದಿ ಶಿವಶರಣರು ಮಹಿಳಾ ಸಮಾನತೆಯ ಹರಿಕಾರರು-ಡಾ. ಮಲ್ಲಿಕಾರ್ಜುನ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಶರಣರು ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ, ಸಾಹಿತ್ಯಿಕ ಸಮಾನತೆಯನ್ನು ಕೊಟ್ಟು ಮಹಿಳೆ ಸಮಾಜದ ಮುಖ್ಯ ವಾಹಿನಿಗೆ ಬರಲು ಕಾರಣರಾದವರು. ೧೨ನೇ ಶತಮಾನದ ಬಸವಾದಿ ಶಿವಶರಣರು ಮಹಿಳಾ ಸಮಾನತೆಯ ಹರಿಕಾರರು ಎಂದು ಧಾರವಾಡದ ಮುರುಘಾಮಠ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಜಿಯವರು ಹೇಳಿದರು.

ಹಾವೇರಿ: ಶರಣರು ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ, ಸಾಹಿತ್ಯಿಕ ಸಮಾನತೆಯನ್ನು ಕೊಟ್ಟು ಮಹಿಳೆ ಸಮಾಜದ ಮುಖ್ಯ ವಾಹಿನಿಗೆ ಬರಲು ಕಾರಣರಾದವರು. ೧೨ನೇ ಶತಮಾನದ ಬಸವಾದಿ ಶಿವಶರಣರು ಮಹಿಳಾ ಸಮಾನತೆಯ ಹರಿಕಾರರು ಎಂದು ಧಾರವಾಡದ ಮುರುಘಾಮಠ ಡಾ. ಮಲ್ಲಿಕಾರ್ಜುನ ಮಹಾಸ್ವಾಮೀಜಿಯವರು ಹೇಳಿದರು. ನಗರದ ಶ್ರೀ ದಾನಮ್ಮದೇವಿ ದೇವಸ್ಥಾನದಲ್ಲಿ ದಾನಮ್ಮದೇವಿ ಜಾತ್ರಾ ನಿಮಿತ್ತ ನಡೆದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಗೃಹಸ್ಥ ಜೀವನ ಅತ್ಯುತ್ತಮ ಜೀವನ, ಶರಣರು ಸಂಸಾರ ಜೀವನದಲ್ಲಿಯೂ ಸಾಮರಸ್ಯ ಕಂಡವರಾಗಿದ್ದರು. ಆ ಕಾಲಘಟ್ಟದಲ್ಲಿಯೇ ದಾನಮ್ಮ ಮಾಡಿದ ಧಾರ್ಮಿಕ ಸಾಮಾಜಿಕ ಕಾರ್ಯಗಳು ಎಂದೆಂದಿಗೂ ಪ್ರಸ್ತುತವಾಗಿವೆ ಎಂದರು. ಸಮ್ಮುಖ ವಹಿಸಿದ್ದ ಹಾವೇರಿ ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಮಾತನಾಡಿ, ಸಹನೆ ಮಹಿಳೆಯ ದೌರ್ಬಲ್ಯವಲ್ಲ, ಅದು ಅವರ ಶ್ರೇಷ್ಠಗುಣ ಎಂದರು. ಶರಣರ ಆಚಾರ ವಿಚಾರಗಳು ಎಂದೆಂದಿಗೂ ಪ್ರಸ್ತುತವಾಗಿದ್ದು ಮಹಿಳಾ ಶ್ರೇಷ್ಠರಲ್ಲಿ ದಾನಮ್ಮ ಅಗ್ರಶ್ರೇಣಿಯ ಶರಣೆಯಾಗಿದ್ದಾರೆ ಎಂದರು. ಅಗಡಿ ಅಕ್ಕಿಮಠದ ಗುರುಲಿಂಗಸ್ವಾಮಿಜಿ ಮಾತನಾಡಿ, ದಾನಮ್ಮನವರ ಆದರ್ಶಮಯವಾದ ಬದುಕು ನಮಗೆ ಅನುಕರಣೀಯ ಮತ್ತು ದಾರಿದೀಪವಾಗಿದೆ ಎಂದರು. ರಾಣಿಬೆನ್ನೂರಿನ ಎಸ್‌ಜೆಎಂ ಮಹಿಳಾ ವಿದ್ಯಾಲಯ ಪ್ರಾಚಾರ್ಯ ರೇವಣಸಿದ್ದಪ್ಪ ಹೆಗಡಾಲ ಮಾತನಾಡಿ, ಶರಣೆಯರ ದೃಷ್ಟಿಯಲ್ಲಿ ಸಾಮಾಜಿಕ ಧಾರ್ಮಿಕ ಮಾನವೀಯ ಮೌಲ್ಯಗಳ ಬಗ್ಗೆ ಉಪನ್ಯಾಸ ನೀಡಿ, ಬಸವಾದಿ ಶಿವಶರಣರ ಬದುಕೆ ಮಾನವೀಯ ಮೌಲ್ಯಗಳ ಆಗರವಾಗಿದೆ. ಆ ಕಾಲಘಟ್ಟದಲ್ಲಿಯೇ ಸಾಮುಹಿಕ ವಿವಾಹಗಳಿಗೆ ನಾಂದಿ ಹಾಡಿದವರೇ ದಾನಮ್ಮ ಎಂದರು. ದೇವಸ್ಥಾನ ಕಮಿಟಿ ಅಧ್ಯಕ್ಷೆ ಶೋಭಾತಾಯಿ ಮಾಗಾವಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ದೇವಸ್ಥಾನ ಭಕ್ತರ ಸಹಕಾರದಿಂದ ಕಾಲಕಾಲಕ್ಕೆ ಹಮ್ಮಿಕೊಳ್ಳುವ ಧಾರ್ಮಿಕ ಸಾಮಾಜಿಕ ಕಾರ್ಯಗಳ ಬಗ್ಗೆ ಹೇಳಿದರು. ಲೀಲಾವತಿ ಸಿದ್ದೇಶ್ವರ ಮಾಗಾವಿ ಅವರಿಂದ ಈ ವರ್ಷದಿಂದ ಕೊಡಲ್ಪಡುವ ವರ್ಷದ ವ್ಯಕ್ತಿ ಶ್ರೀ ದಾನೇಶ್ವರಿ ಪ್ರಶಸ್ತಿಯನ್ನು ಬ್ಯಾಡಗಿಯ ಸಾಹಿತಿ ಸಂಕಮ್ಮ ಸಂಕಣ್ಣ ಅವರಿಗೆ ಪ್ರದಾನ ಮಾಡಲಾಯಿತು. ರಾಜ್ಯೋತ್ಸವ ಪ್ರಶಸ್ತಿ ವಿಜೇತ ವಿರುಪಾಕ್ಷಪ್ಪ ಹಾವನೂರ, ಸುಲಕ್ಷಣ ಶಿವಪೂರ ಮತ್ತು ಸಹಕಾರಿ ರತ್ನ ಪುರಸ್ಕೃತ ಶಿವಾನಂದ ರಾಮಗಿರಿ ಅವರನ್ನು ಸನ್ಮಾನಿಸಲಾಯಿತು. ಬೆಳಗಿನ ಕಾರ್ಯಕ್ರಮದಲ್ಲಿ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಗುರುಪಾದೇಶ್ವರ ಮಠ ಹಾವೇರಿ ಅವರಿಂದ ಷಟಸ್ಥಳ ಧ್ವಜಾರೋಹಣ ಮತ್ತು ಆಶೀರ್ವಚನ ನಡೆಯಿತು.ಭಾನುವಾರ ಬೆಳಗ್ಗೆ ದೇವಿಯ ಪಾಲಕಿ ಉತ್ಸವ ನಡೆಯಿತು. ಸಾನಿದ್ಯ ವಹಿಸಿದ್ದ ಹಾವೇರಿ ಹಲಸೂರು ಬಣ್ಣದ ಮಠದ ಅಭಿನವ ರುದ್ರ ಚನ್ನಮಲ್ಲಿಕಾರ್ಜುನ ಸ್ವಾಮಿಜಿ ಮಾತನಾಡಿ, ದಾನಮ್ಮನ ಸಾಧನೆಗಳ ಬಗ್ಗೆ ಹೇಳಿದರು.ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌ಎಫ್‌ಎನ್ ಗಾಜೀಗೌಡ್ರ ಮಾತನಾಡಿದರು. ಶಿಕ್ಷಕ ಮಂಜುನಾಥ ಬಡಿಗೇರ ಚನ್ನಪ್ಪ ಹಲಕೊಪ್ಪ ಅವರಿಂದ ವಚನ ಸಂಗೀತ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಶಿವಬಸಮ್ಮ ಲಕ್ಕಣ್ಣನವರ ಪ್ರಾರ್ಥಿಸಿದರು. ಮಲ್ಲಿಕಾರ್ಜುನ ಹಿಂಚಿಗೇರಿ ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ ರಾಜಶೇಖರ ಮಾಗಾವಿ, ಮಹಂತೇಶ ಸುರಳಿಹಳ್ಳಿ ಮಲ್ಲಿಕಾರ್ಜುನ ಸಾತೇನಹಳ್ಳಿ ಬೆಳಗಾವೆಪ್ಪ ಬೆಳಗಾವಿ, ಶಿವಲಿಂಗಪ್ಪ ಕಲ್ಯಾಣಿ ಸೊಮಶೇಖರ ಯಾದವಾಡ, ನಾಗಪ್ಪ ಹಾವೇರಿ ವಿರುಪಾಕ್ಷಪ್ಪ ಹತ್ತಿಮತ್ತುರ, ಸಂಜಯ ಮಾಗಾವಿ, ಅಜಿತ ಮಾಗಾವಿ, ಸುದಿಪ ಮಾಗಾವಿ ಮುರಿಗೆಪ್ಪ ಕಡೇಕೊಪ್ಪ, ಶಿವಬಸಪ್ಪ ನಂದಿವಾಡ, ವಿಶ್ವನಾಥ ಹಂದ್ರಾಳ, ಶಿವಬಸಪ್ಪ ಹಲಗಣ್ಣನವರ, ಸುರೇಶಬಾಬು ಯಳಮಲ್ಲಿ, ಮಹಾಂತಪ್ಪ ಹಲಗಣ್ಣನವರ, ಶಿವಯೋಗೆಪ್ಪ ವಾಲಿಶೆಟ್ಟರ, ಗುರಣ್ಣ ಸಿಮಿಕೆರಿ, ರವೀಂದ್ರ ಹಿಂಚಿಗೇರಿ, ಶಿವಪ್ಪ ಕೋರಿಶೆಟ್ಟರ, ಶಿವಬಸಪ್ಪ ಮುದ್ದಿ, ಶಿವಯೋಗಿ ಬೆನ್ನೂರ, ತಮ್ಮಣ್ಣ ಮುದ್ದಿ, ಅಮರ ಮಾಗಾವಿ ಸಿ.ಜಿ. ತೋಟಣ್ಣನವರ, ವಿ.ಜಿ. ಯಳಗೇರಿ, ಶಿವಯೋಗಿ ಮುದ್ದಿ, ಪಂಚಲಿಂಗಪ್ಪ ಹಂದ್ರಾಳ, ಚಂದ್ರಶೇಖರ ಹತ್ತಿ, ಶಿವಯೋಗಿ ಅಂಗಡಿ, ಕುಮಾರಸ್ವಾಮಿ ಹಿರೇಮಠ, ಗಿರಿಜಕ್ಕ ತಾಂಡೂರ, ಲೀಲಾವತಿ ಮಾಗಾವಿ ಶಾಂತಕ್ಕ ಮಡಿವಾಳರ, ಸುಂದರಕ್ಕ ತುಪ್ಪದ, ಚಂಬಕ್ಕ ಯರೇಸಿಮಿ, ಗಂಗವ್ವ ನಂದಿವಾಡ, ವಿಜಯಲಕ್ಷ್ಮಿ ಮಾಸೂರ, ರಾಜೇಶ್ವರಿ ಯಳಮಲ್ಲಿ, ಜಯಶ್ರೀ ಮರ್ತೂರ, ಉಮಾದೇವಿ ವಾಲಿಶೆಟ್ಟರ, ನೀಲವ್ವ ಯರೇಸಿಮಿ ಗಿರಿಜಕ್ಕ ತಾಂಡೂರ, ಹಾಗೂ ಸಹಸ್ರಾರು ಭಕ್ತಾಧಿಗಳು ಭಾಗವಹಿಸಿದ್ದರು. ಮಹಾದಾಸೊಹದ ವ್ಯವಸ್ಥೆ ಮಾಡಲಾಗಿತ್ತು.