ಮಹಿಳೆಯರಿಗೆ ಪ್ರಾಯೋಗಿಕವಾಗಿ ಅವಕಾಶ ನೀಡಿದವರು ಬಸವಾದಿ ಶಿವಶರಣರು

| Published : Apr 02 2025, 01:02 AM IST

ಮಹಿಳೆಯರಿಗೆ ಪ್ರಾಯೋಗಿಕವಾಗಿ ಅವಕಾಶ ನೀಡಿದವರು ಬಸವಾದಿ ಶಿವಶರಣರು
Share this Article
  • FB
  • TW
  • Linkdin
  • Email

ಸಾರಾಂಶ

ಲಿಂಗಭೇದ, ಬಡವ ಶ್ರೀಮಂತ, ಹಿರಿಯ ಕಿರಿಯ ಎಂಬ ಭೇದಭಾವ ಹೊಡೆದು ಹಾಕಿ ಮಹಿಳೆಯರು ಸಮಾಜದಲ್ಲಿ ಸರಿಸಮಾನರು ಮತ್ತು ಹೆಚ್ಚು ಸಾಮರ್ಥ್ಯ ಹೊಂದಿದವರು. ಮಹಿಳೆಯರಿಗೂ ಮುಕ್ತ ಸ್ವಾತಂತ್ರ್ಯ ಇದೆ ಎಂಬುದನ್ನೇ ಬಸವಾದಿ ಶರಣರು ಕೇವಲ ವಚನಗಳಲ್ಲಿ ತಿಳಿಸಲಿಲ್ಲ, ಪ್ರಾಯೋಗಿಕವಾಗಿ ಅವರಿಗೆ ಅವಕಾಶ ನೀಡಿದರು ಎಂದು ಗದುಗಿನ ಗಿರಜಕ್ಕ ಧರ್ಮರಡ್ಡಿ ಹೇಳಿದರು.

ಮುಂಡರಗಿ: ಲಿಂಗಭೇದ, ಬಡವ ಶ್ರೀಮಂತ, ಹಿರಿಯ ಕಿರಿಯ ಎಂಬ ಭೇದಭಾವ ಹೊಡೆದು ಹಾಕಿ ಮಹಿಳೆಯರು ಸಮಾಜದಲ್ಲಿ ಸರಿಸಮಾನರು ಮತ್ತು ಹೆಚ್ಚು ಸಾಮರ್ಥ್ಯ ಹೊಂದಿದವರು. ಮಹಿಳೆಯರಿಗೂ ಮುಕ್ತ ಸ್ವಾತಂತ್ರ್ಯ ಇದೆ ಎಂಬುದನ್ನೇ ಬಸವಾದಿ ಶರಣರು ಕೇವಲ ವಚನಗಳಲ್ಲಿ ತಿಳಿಸಲಿಲ್ಲ, ಪ್ರಾಯೋಗಿಕವಾಗಿ ಅವರಿಗೆ ಅವಕಾಶ ನೀಡಿದರು ಎಂದು ಗದುಗಿನ ಗಿರಜಕ್ಕ ಧರ್ಮರಡ್ಡಿ ಹೇಳಿದರು. ಅವರು ಸೋಮವಾರ ಸಂಜೆ ಪಟ್ಟಣದ ಎ.ಎಂ. ಮೇಟಿಯವರ ನಿವಾಸದಲ್ಲಿ ತಾಲೂಕು ಜಾಗತಿಕ ಲಿಂಗಾಯತ ಮಹಾಸಭಾ ಆಶ್ರಯದಲ್ಲಿ ವೈದ್ಯ ಡಾ. ಅನ್ನದಾನಿ ಮೇಟಿ ಅವರ 66 ನೇ ಜನ್ಮದಿನದ ನಿಮಿತ್ತ ಜರುಗಿದ ಮಾಸಿಕ ಶರಣರ ಚಿಂತನ ಕಾರ್ಯಕ್ರಮದಲ್ಲಿ ಶಿವಶರಣೆ ಅಂದು ಇಂದು ಕುರಿತು ಉಪನ್ಯಾಸ ನೀಡಿದರು.

ಇಂದಿಗೂ ಮಹಿಳೆಯರಿಗೆ ಕಟ್ಟುಪಾಡುಗಳಿದ್ದು, ನಿರ್ಭಯವಾಗಿ ಒಂಟಿ ಮಹಿಳೆ ಓಡಾಡದ ಸ್ಥಿತಿ ನಿರ್ಮಾಣವಾಗಿದೆ. ಕಾರಣ ಮನುಷ್ಯರು ಹೆಣ್ಣುಮಕ್ಕಳನ್ನು ನೋಡುವ ಭಾವನೆ ಸರಿ ಇಲ್ಲ. ಇದಕ್ಕೆಲ್ಲ ಗುರುವಿನ ಮಾರ್ಗದರ್ಶನದ ಕೊರತೆಯಾಗಿದೆ. ಮರೆವು ಉಂಟಾಗಿ ಅರಿವು ಹೊರಟು ಹೋಗಿದೆ. ಹೀಗಾಗಿ ಅನೇಕ ರೀತಿಯಲ್ಲಿ ಅನಾಚಾರಗಳು ನಡೆಯುತ್ತಿವೆ. ಬಸವ ತತ್ವದಿಂದ ಆತ್ಮಬಲ, ಆತ್ಮವಿಶ್ವಾಸ, ಹೆಚ್ಚುವ ಮೂಲಕ ಅರಿವಿನ ಅಸ್ತಿತ್ವ ತೋರಿಸಿ ಕೊಡುತ್ತದೆ. ಇದಕ್ಕೆ ಶರಣರ ವಚನಗಳೇ ದಾರಿದೀಪವಾಗಿವೆ ಎಂದರು.

ಪ್ರಾಯೋಜಕರಾದ ಡಾ. ಅನ್ನದಾನಿ ಮೇಟಿ ಮಾತನಾಡಿ, ಶರಣರ ಚಿಂತನೆಗಳು ನೆಪಕ್ಕೆ ಮಾತ್ರ ನಡೆಯದೆ, ಅವರ ತತ್ವಾದರ್ಶಗಳನ್ನು ನಾವು ನಮ್ಮ ನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ನಮ್ಮಲ್ಲಿ ಬದಲಾವಣೆ ತಂದುಕೊಳ್ಳಬೇಕು. ಶರಣರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿದ್ದು ಅವರ ತತ್ವಾದರ್ಶಗಳು ನಡೆ ಮತ್ತು ನುಡಿಗೆ ಮಾದರಿಯಾಗಿದ್ದವು ಹಾಗೆ ನಾವು ಇರಬೇಕು ಎಂದರು.

ಕಾರ್ಯಕ್ರಮದಲ್ಲಿ ಕದಳಿ ಶ್ರೀಪ್ರಶಸ್ತಿ ಪ್ರರಸ್ಕೃತರಾದ ಶೋಭಾ ಮೇಟಿ, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಸೀತಾ ಬಸಾಪೂರ, ಚೈತನ್ಯ ಶಿಕ್ಷಣ ಸಂಸ್ಥೆ ನಿರ್ದೇಶಕಿ ವೀಣಾ ಪಾಟೀಲ, ಅಕ್ಕನ ಬಳಗ ಅಧ್ಯಕ್ಷೆ ಲಕ್ಷ್ಮಿದೇವಿ ಬೆಳವಟಗಿಮಠ ಅವರನ್ನು ಸನ್ಮಾನಿಸಲಾಯಿತು. ತಾಲೂಕು ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಪ್ರೊ.ಎ.ವೈ.ನವಲಗುಂದ ಅಧ್ಯಕ್ಷತೆವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕೊಟ್ರೇಶ ಅಂಗಡಿ, ಶೇಖಣ್ಣ ಕವಳಿಕಾಯಿ, ಶಿವಣ್ಣ ಮುಗದ, ರೇಖಾ ಮೇಟಿ, ಶಿವಯೋಗಿ ಕೊಪ್ಪಳ, ಈಶ್ವರಪ್ಪ ಹಂಚಿನಾಳ, ಶೋಭಾ ಹೊಟ್ಟಿನ, ಸಿ.ಎಸ್. ಅರಸನಾಳ, ಸಿ.ಕೆ. ಗಣಪ್ಪನವರ, ವೀರನಗೌಡ ಗುಡದಪ್ಪನವರ, ಎಂ.ಎಸ್. ಹೊಟ್ಟಿನ, ಎಂ.ಜಿ.ಗಚ್ಚಣ್ಣವರ, ಡಾ. ಪ್ರಿಯದರ್ಶಿನಿ, ಕೀರ್ತಿರಾಣಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಪಾಲಾಕ್ಷಿ ಗಣದಿನ್ನಿ ಸ್ವಾಗತಿಸಿದರು. ಬಸವರಾಜ ರಾಮೇನಹಳ್ಳಿ ನಿರೂಪಿಸಿದರು.