ಸಾರಾಂಶ
ಬಸವಲಿಂಗೇಶ್ವರ ಸ್ವಾಮೀಜಿಯ ಪೀಠಾರೋಹಣ ಅಂಗವಾಗಿ ಗವಿಮಠದ ನವಲಗುಂದ ಪೂಜ್ಯ ಮ.ನಿ.ಷ.ಬಸವಲಿಂಗ ಸ್ವಾಮೀಜಿಗಳನ್ನು ಅಡ್ಡಪಲ್ಲಕ್ಕಿಯಲ್ಲಿ ಕೂರಿಸಿ ಸೋಮವಾರ ಪಟ್ಟಣದ ವಿವಿಧ ವೃತ್ತಗಳ ಮೂಲಕ ಮೆರವಣಿಗೆ ಜರುಗಿತು
ಯಲಬುರ್ಗಾ: ಬಸವಲಿಂಗೇಶ್ವರ ಸ್ವಾಮೀಜಿಯ ಪೀಠಾರೋಹಣ ಅಂಗವಾಗಿ ಗವಿಮಠದ ನವಲಗುಂದ ಪೂಜ್ಯ ಮ.ನಿ.ಷ.ಬಸವಲಿಂಗ ಸ್ವಾಮೀಜಿಗಳನ್ನು ಅಡ್ಡಪಲ್ಲಕ್ಕಿಯಲ್ಲಿ ಕೂರಿಸಿ ಸೋಮವಾರ ಪಟ್ಟಣದ ವಿವಿಧ ವೃತ್ತಗಳ ಮೂಲಕ ಮೆರವಣಿಗೆ ಜರುಗಿತು.
ಪಟ್ಟಣದ ಶ್ರೀಮಠದಲ್ಲಿ ಬೆಳಿಗ್ಗೆ ಲಿಂ.ಶ್ರೀಬಸವಲಿಂಗೇಶ್ವರ ಸ್ವಾಮೀಜಿಗಳ ಗದ್ದುಗೆಗೆ ವಿಶೇಷ ಧಾರ್ಮಿಕ ರುದ್ರಾಭೀಷೇಕ ಪೂಜೆ ಹಾಗೂ ಶಿವ ದೀಕ್ಷಾ ಕಾರ್ಯಕ್ರಮ ಜರುಗಿತು. ಕುಂಭ ಕಳಸ ವಿವಿಧ ವಾದ್ಯ ವೈಭವದೊಂದಿಗೆ ಅದ್ಧೂರಿ ಮಹೋತ್ಸವ ನಡೆಯಿತು.ಶ್ರೀಧರ ಮುರಡಿ ಹಿರೇಮಠದ ಪೀಠಾಧಿಪತಿ ಬಸವಲಿಂಗೇಶ್ವರ ಸ್ವಾಮೀಜಿ, ಆಡ್ನೂರ-ರಾಜೂರ ಅಭಿನವ ಪಂಚಾಕ್ಷರ ಸ್ವಾಮೀಜಿ, ಜಿಗೇರಿಯ ಗುರುಸಿದ್ಧೇಶ್ವರ ಸ್ವಾಮೀಜಿ, ಕುಕನೂರಿನ ಅನ್ನದಾನೇಶ್ವರ ಮಠದ ಡಾ.ಮಹಾದೇವ ದೇವರು, ಚಿಕ್ಕಮ್ಯಾಗೇರಿ-ಇಟಗಿಯ ಡಾ.ಗುರುಶಾಂತವೀರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.ಬಸವಲಿಂಗಪ್ಪ ಕೊತ್ತಲ, ಬಸವರಾಜ ಸಾದರ, ಅಡಿವೆಯ್ಯ ಪ್ರಜಾರ, ಮಹೇಶ ಹುಬ್ಬಳ್ಳಿ, ಶಿವಕುಮಾರ ಭೂತೆ, ಈಶಪ್ಪ ಬನ್ನಿಕೊಪ್ಪ, ಮಲ್ಲಪ್ಪ ಬನ್ನಿಕೊಪ್ಪ, ದೊಡ್ಡಬಸವ ಹಕಾರಿ, ಶರಣಪ್ಪ ಬನ್ನಿಕೊಪ್ಪ, ವೀರಭದ್ರಯ್ಯ ಗಂಧದ, ಶಂಕರ ಉಳ್ಳಾಗಡ್ಡಿ, ಶಂಕರ್ ಕಲಬುರ್ಗಿ ಮತ್ತಿತರರು ಇದ್ದರು.