ಬಸವಲಿಂಗೇಶ್ವರ ಸ್ವಾಮೀಜಿ ಸಮಾಜಮುಖಿ ಕಾರ್ಯ ಮಾದರಿ: ಅಂದಾನಗೌಡ

| Published : Feb 05 2025, 12:31 AM IST

ಸಾರಾಂಶ

ಬಸವಲಿಂಗೇಶ್ವರ ಶ್ರೀಗಳ ಸಮಾಜಮುಖಿ ಕಾರ್ಯಗಳು ಸಮಾಜಕ್ಕೆ ಮಾದರಿಯಾಗಿವೆ.

ಜಾತ್ರಾ ಮಹೋತ್ಸವ, ತುಲಾಭಾರ ಸೇವೆ ಕಾರ್ಯಕ್ರಮಕನ್ನಡಪ್ರಭ ವಾರ್ತೆ ಯಲಬುರ್ಗಾ

ಬಸವಲಿಂಗೇಶ್ವರ ಶ್ರೀಗಳ ಸಮಾಜಮುಖಿ ಕಾರ್ಯಗಳು ಸಮಾಜಕ್ಕೆ ಮಾದರಿಯಾಗಿವೆ ಎಂದು ತಾಪಂ ಮಾಜಿ ಕೆಡಿಪಿ ಸದಸ್ಯ ಅಂದಾನಗೌಡ ಪೋ.ಪಾಟೀಲ್ ಹೇಳಿದರು.

ಪಟ್ಟಣದ ಶ್ರೀಮೊಗ್ಗಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀಧರಮುರಡಿ ಹಿರೇಮಠದ ಪೀಠಾಧಿಪತಿ ಬಸವಲಿಂಗೇಶ್ವರ ಸ್ವಾಮೀಜಿ ೨೩ನೇ ವರ್ಷದ ಪೀಠಾರೋಹಣ ವಾರ್ಷಿಕೋತ್ಸವ- ಜಾತ್ರಾ ಮಹೋತ್ಸವ ಮತ್ತು ತುಲಾಭಾರ ಸೇವೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಶ್ರೀಗಳು ಗೋಶಾಲೆ ಸ್ಥಾಪನೆ ಮಾಡುವ ಮೂಲಕ ಗೋವುಗಳ ರಕ್ಷಣೆಗೆ ಮುಂದಾಗಿರುವುದು ಹೆಚ್ಚು ಸಂತಸ ತಂದಿದೆ ಎಂದರು.

ಶ್ರೀಧರಮುರಡಿ ಹಿರೇಮಠವು ಸದಾ ಸಂಗೀತ, ಸಾಹಿತ್ಯ, ಭಕ್ತಿ, ಭಾವದಿಂದ ಶ್ರೀಮಂತಗೊಂಡಿದೆ. ಎಲ್ಲರಿಗೂ ಉತ್ತಮ ಸಂಸ್ಕಾರ ಕೊಟ್ಟು ಒಳ್ಳೆಯ ಕಾರ್ಯವನ್ನು ಮಾಡುತ್ತಿದ್ದಾರೆ. ಮಠದ ಬಸವಲಿಂಗೇಶ್ವರ ಸ್ವಾಮೀಜಿಗಳು ಕಾಯಕದ ಮೂಲಕ ಮಠದ ಪ್ರಗತಿಗೆ ಶ್ರಮಿಸುತ್ತಿದ್ದಾರೆ. ಈ ನಾಡಿಗೆ ಮಠ, ಮಂದಿರಗಳು ತಮ್ಮದೇ ಆದ ಸೇವೆಯನ್ನು ನೀಡಿ ಸಮಾಜಮುಖಿ ಕಾರ್ಯ ಕೈಗೊಂಡಿದ್ದು ಇನ್ನೂ ಶ್ರೀಗಳು ಯೋಗಪಟುಗಳಾಗಿ ಅದೆಷ್ಟೋ ಯುವಕರಿಗೆ ಸ್ಪೂರ್ತಿಯಾಗಿದ್ದಾರೆ ಎಂದರು ಹೇಳಿದರು.

ಮನುಷ್ಯ ಗುರುಹಿರಿಯರನ್ನ ಗೌರವಿಸಿ ಭಕ್ತಿ ಮಾರ್ಗದಲ್ಲಿ ನಡೆದರೆ ಜೀವನ ಪಾವನವಾಗುತ್ತದೆ. ಶಿವಶರಣ ತತ್ವ, ಆದರ್ಶ ಪಾಲಿಸಿಕೊಂಡು ಹೋದಾಗ ಮಾತ್ರ ಯಶಸ್ಸು ಕಾಣಲು ಸಾಧ್ಯವಿದೆ ಎಂದು ಹೇಳಿದರು.

ಗುಳೇದಗುಡ್ಡದ ಮುರುಘಾಮಠದ ಕಾಶಿನಾಥ ಸ್ವಾಮೀಜಿ ಮಾತನಾಡಿದರು. ಶ್ರೀಧರಮುರಡಿ ಹಿರೇಮಠದ ಪೀಠಾಧಿಪತಿ ಬಸವಲಿಂಗೇಶ್ವರ ಸ್ವಾಮೀಜಿಗಳಿಗೆ ಪಟ್ಟಣ ಹಾಗೂ ನಾನಾ ಗ್ರಾಮಸ್ಥರು ತುಲಾಭಾರ ಸೇವೆ ಸಲ್ಲಿಸಿದರು.

ಈ ವೇಳೆಯಲ್ಲಿ ಪಪಂ ಸದಸ್ಯ ಅಮರೇಶ ಹುಬ್ಬಳ್ಳಿ, ಅಶೋಕ ಅರಕೇರಿ, ಕಳಕಪ್ಪ ತಳವಾರ, ಶಿವಪ್ಪ ಪುರ್ತಗೇರಿ, ಮಲ್ಲಿಕಾರ್ಜುನ ಕೆ., ಜಗನ್ನಾಥ್ ದೇಸಾಯಿ, ಬಸಲಿಂಗಪ್ಪ ಲಾಡಿ, ಮಹೇಶ ಹುಬ್ಬಳ್ಳಿ, ಬಸಪ್ಪ ಗೋಗೇರಿ, ಹನುಮಂತಪ್ಪ ಬಂಡಿ, ಈರಪ್ಪ ಬತ್ತಿ, ಶೇಖರಯ್ಯ ಹಿರೇಮಠ, ಶರಣಪ್ಪ ಭಜಂತ್ರಿ, ಸಂಗಪ್ಪ ವಣಗೇರಿ, ಬಸವರಾಜ ಕೊಂಡಗುರಿ ಇದ್ದರು.