ಸಾರಾಂಶ
ಕನ್ನಡಪ್ರಭ ವಾರ್ತೆ, ಬೆಂಗಳೂರು
ಕನ್ನಡಪ್ರಭ ಹಾಗೂ ಏಷ್ಯಾನೆಟ್ ಸುವರ್ಣ ನ್ಯೂಸ್ ಸಹಯೋಗದಲ್ಲಿ ಮಾ.1ರಿಂದ 3ರವರೆಗೆ ಬಸವನಗುಡಿಯ ವಿದ್ಯಾಪೀಠ ಸರ್ಕಲ್‌ನಲ್ಲಿರುವ ಕೆಂಪೇಗೌಡ ಮೈದಾನದಲ್ಲಿ ಬಸವನಗುಡಿ ಸಂಭ್ರಮ ನಡೆಯಲಿದೆ.ಮೂರು ದಿನ ನಡೆಯಲಿರುವ ಬಸವನಗುಡಿ ಸಂಭ್ರಮದಲ್ಲಿ ಬೆಂಗಳೂರಿನ ನೆಚ್ಚಿನ ತಿಂಡಿ, ವಿನೋದ ಹಾಗೂ ಮನರಂಜನೆ ಉತ್ಸವ ಎಲ್ಲರನ್ನೂ ಆಕರ್ಷಿಸಲಿದೆ. ಶುಕ್ರವಾರ(ಮಾ.1) ಮಧ್ಯಾಹ್ನ 2ಕ್ಕೆ ಬಸವನಗುಡಿ ಸಂಭ್ರಮಕ್ಕೆ ಚಾಲನೆ ಸಿಗಲಿದೆ. ಸಂಜೆ 5ಕ್ಕೆ ಕ್ಯೂಟ್ ಬೇಬಿ ಮತ್ತು ಫ್ಯಾನ್ಸಿ ಡ್ರೆಸ್ ಕಾರ್ಯಕ್ರಮ ಮಕ್ಕಳಿಗಾಗಿ ಆಯೋಜಿಸಲಾಗಿದೆ. ಸಂಜೆ 7ಕ್ಕೆ ವೇದಿಕೆ ಕಾರ್ಯಕ್ರಮದಲ್ಲಿ ಬಸವನಗುಡಿಯ ಸಾಧಕರಿಗೆ ಸನ್ಮಾನ ನಡೆಯಲಿದೆ.
ಸಂಜೆ 7.30ಕ್ಕೆ ಸಾಗರ್ ತುರುವೇಕೆರೆ ಅವರಿಂದ ಹಾಸ್ಯ ಸಂಜೆ, ಮಂಜು ಹಾಸನ್, ಚಲನಚಿತ್ರ ಕಲಾವಿದ ಮತ್ತು ಹಾಡುಗಾರ ಲೋಕೇಶ್, ವೈಷ್ಣವಿ ಮೆಲೋಡಿಸ್ ಮತ್ತು ತಂಡದಿಂದ ಸಂಗೀತ ಸಂಜೆ ಕಾರ್ಯಕ್ರಮ ಇರಲಿದೆ. ರಾತ್ರಿ 9 ಗಂಟೆಯಿಂದ ನೃತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಮುಂದುವರೆಯಲಿವೆ.ಶನಿವಾರ ಬೆಳಗ್ಗೆ 11ಕ್ಕೆ ಮಕ್ಕಳಿಗಾಗಿ ಫ್ಯಾನ್ಸಿ ಡ್ರೆಸ್, 12ಕ್ಕೆ ಮಹಿಳೆಯರಿಗೆ ಅಡುಗೆ ಸ್ಪರ್ಧೆ, 3ಕ್ಕೆ ಮುಕ್ತ ವೇದಿಕೆ ಗಾಯನ, ಸಂಜೆ 5ಕ್ಕೆ ಮಿನಿಟ್ ಟು ವಿನ್ ಇಟ್(1 ನಿಮಿಷದ ವಿನೋದ ಕ್ರೀಡೆ), ಸಂಜೆ 6ಕ್ಕೆ ಬೊಂಬಾಟ್ ಜೋಡಿ ಮತ್ತು ಫ್ಯಾಷನ್ ಶೋ(ವಿಷಯ-ಸಾಂಪ್ರದಾಯಿಕ), ಸಂಜೆ 7ಕ್ಕೆ ಬಸವನಗುಡಿ ಸಾಧಕರಿಗೆ ಸನ್ಮಾನ, ಸಂಜೆ 7.30ಕ್ಕೆ ಮಿಮಿಕ್ರಿ ಗೋಪಿ ಅವರಿಂದ ಹಾಸ್ಯ ಸಂಭ್ರಮ ಮತ್ತು 8 ರಿಂದ ನೃತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಭಾನುವಾರ ಬೆಳಗ್ಗೆ 11ಕ್ಕೆ ಮಕ್ಕಳಿಗಾಗಿ ಫ್ಯಾನ್ಸಿ ಡ್ರೆಸ್ ಕಾರ್ಯಕ್ರಮ. ಮಧ್ಯಾಹ್ನ 12ಕ್ಕೆ ಬೆಂಕಿ ರಹಿತ ಅಡುಗೆ ಸ್ಪರ್ಧೆ(ಮಕ್ಕಳಿಗಾಗಿ), 1.30ಕ್ಕೆ ಮಹಿಳೆಯರಿಗೆ ಅಡುಗೆ ಸ್ಪರ್ಧೆ, ಸಂಜೆ 4ಕ್ಕೆ ಪ್ರಕೃತಿ ರಕ್ಷಿಸಿ- ವಿಶ್ವ ರಕ್ಷಿಸಿ ವಿಷಯಾಧಾರಿತ ಚಿತ್ರಕಲಾ ಸ್ಪರ್ಧೆ, ಸಂಜೆ 7ಕ್ಕೆ ಬಸವನಗುಡಿ ಸಾಧಕರಿಗೆ ಸನ್ಮಾನ ಮತ್ತು ಬಹುಮಾನ ವಿತರಣೆ. ರಾತ್ರಿ 8ಕ್ಕೆ ಬಾಲು ಮತ್ತು ತಂಡದಿಂದ ಭಾರತೀಯ ಜನಪದ ಸಂಗೀತ ಬ್ಯಾಂಡ್ ಮತ್ತು ರಾತ್ರಿ 9ಕ್ಕೆ ನೃತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.ರಂಜಿಸಲಿರುವ ಅನೇಕ ಸೆಲಿಬ್ರಿಟಿಗಳುಮೂರು ದಿನಗಳ ಈ ಕಾರ್ಯಕ್ರಮದಲ್ಲಿ ಬಿಗ್‌ಬಾಸ್ ಖ್ಯಾತಿಯ ಪ್ರಥಮ್, ತುಕಾಲಿ ಸಂತೋಷ್, ಇಶಾನಿ ಅವರು ಭಾಗವಹಿಸಲಿದ್ದು, ಸಾರ್ವಜನಿಕರನ್ನು ರಂಜಿಸಲಿದ್ದಾರೆ.