ಸಮಾನತೆ, ಕಾಯಕ ತತ್ವ ಪ್ರತಿಪಾದಿಸಿದ ಬಸವಣ್ಣ-ಸಣ್ಣಮನಿ

| Published : Feb 23 2025, 12:34 AM IST

ಸಾರಾಂಶ

ಸಮಾನತೆ, ಕಾಯಕ ತತ್ವ ಆಚರಿಸುವ ಮತ್ತು ಪಾಲಿಸುವ ಯಾರು ಬೇಕಾದರೂ ಶಿವಶರಣರಾಗಬಹುದು ಎನ್ನುವುದು ಬಸವಣ್ಣನವರ ದೃಷ್ಟಿಕೋನವಾಗಿತ್ತು. ಕಾಯಕವೇ ಕೈಲಾಸ ಎಂಬುದು ಅವರು ಜಗತ್ತಿಗೆ ನೀಡಿದ ನಿತ್ಯ ಸತ್ಯ ಮಂತ್ರವಾಗಿದೆ ಎಂದು ಲಕ್ಷ್ಮೇಶ್ವರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ನಂ. 4ರ ಮುಖ್ಯೋಪಾಧ್ಯಾಯ ಎಚ್.ಬಿ. ಸಣ್ಣಮನಿ ಹೇಳಿದರು.

ಲಕ್ಷ್ಮೇಶ್ವರ: ಸಮಾನತೆ, ಕಾಯಕ ತತ್ವ ಆಚರಿಸುವ ಮತ್ತು ಪಾಲಿಸುವ ಯಾರು ಬೇಕಾದರೂ ಶಿವಶರಣರಾಗಬಹುದು ಎನ್ನುವುದು ಬಸವಣ್ಣನವರ ದೃಷ್ಟಿಕೋನವಾಗಿತ್ತು. ಕಾಯಕವೇ ಕೈಲಾಸ ಎಂಬುದು ಅವರು ಜಗತ್ತಿಗೆ ನೀಡಿದ ನಿತ್ಯ ಸತ್ಯ ಮಂತ್ರವಾಗಿದೆ ಎಂದು ಲಕ್ಷ್ಮೇಶ್ವರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ನಂ. 4ರ ಮುಖ್ಯೋಪಾಧ್ಯಾಯ ಎಚ್.ಬಿ. ಸಣ್ಣಮನಿ ಹೇಳಿದರು.

ಲಕ್ಷ್ಮೇಶ್ವರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಶಿಕ್ಷಕ ಎಸ್.ಜಿ. ಅಂಗಡಿ ಅವರ ಮನೆಯಲ್ಲಿ ಏರ್ಪಡಿಸಿದ ಫಕೀರಪ್ಪ ಸೋಮಕ್ಕನವರ ಅವರ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಬಸವ ವಿಚಾರಗಳ ಚಿಂತನ ಮಂಥನ ವಿಷಯದ ಕುರಿತು ಮಾತನಾಡಿದರು.

12ನೇ ಶತಮಾನದಲ್ಲಿ ಬಾಳಿ ಹೋದ ಶರಣರು ಆದರ್ಶ ಮತ್ತು ವಿಚಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಶರಣ ನುಡಿಗಳನ್ನು ಹೇಳುವುದು ಕಾಯಕವಾಗಿದೆ, ಆದರೆ ಅನುಸರಣೆ ಮಾಯವಾಗುತ್ತಿರುವುದು ನೋವಿನ ಸಂಗತಿಯಾಗಿದೆ. ಶರಣರು ತತ್ವ-ವಿಚಾರಗಳನ್ನು ಕೇವಲ ಬಾಯಿಮಾತಿನಲ್ಲಿ ಹೇಳಲಿಲ್ಲ, ಅದರ ಬದಲಾಗಿ ಅವುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಇತರರಿಗೆ ಮಾದರಿಯ ಜೀವನದ ಹಾದಿ ತೋರಿಸಿದರು ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಎಂಜಿನಿಯರ್ ಮಹೇಶ ಸೋಮಕ್ಕನವರ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಇಂತಹ ದತ್ತಿ ಕಾರ್ಯಕ್ರಮಗಳ ಮೂಲಕ ದತ್ತಿದಾನಿಗಳನ್ನು ತಪ್ಪದೇ ಪ್ರತಿ ವರ್ಷ ಸ್ಮರಿಸಿ ಸಮಾಜಮುಖಿ ಕಾರ್ಯಕ್ರಮಗಳನ್ನು ಸಂಘಟಿಸುತ್ತಿರುವುದು ಅಭಿನಂದನೀಯ ಎಂದು ಹೇಳಿದರು.

ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಸಂಗಮೇಶ ಅಂಗಡಿ ಮಾತನಾಡಿ, ಸಾಹಿತ್ಯಿಕ ಕಾರ್ಯಕ್ರಮಗಳ ಮೂಲಕ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಶ್ರೇಷ್ಠ ಕಾರ್ಯ ಇಂದಿನ ಅಗತ್ಯತೆಯಾಗಿದೆ. ನಮ್ಮ ಸಂಸ್ಕೃತಿ ನಮ್ಮ ಬೇರು. ಬೇರು ಸದೃಢವಾಗಿದ್ದರೆ ಮೊಗ್ಗರಳಿ ಹೂವಾಗಿ ಪರಿಮಳಿಸಲು ಸಾಧ್ಯ ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ಅಧ್ಯಕ್ಷ ಈಶ್ವರ ಮೆಡ್ಲೇರಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ಕಾರ್ಯ ಚಟುವಟಿಕೆ ವಿವರಿಸಿದರು.

ಸಿಆರ್‌ಪಿ ಗಿರೀಶ ನೇಕಾರ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ಆರ್.ಎನ್. ಪಂಚಬಾವಿ, ಸಮಾಜ ಸೇವಾ ರತ್ನ ಪುರಸ್ಕೃತ ಕರಿಯಪ್ಪ ಶಿರಹಟ್ಟಿ, ಗ್ರಾಮೀಣ ಶಿಕ್ಷಕ ರತ್ನ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಶಿವಾನಂದ ಅಸುಂಡಿ, ಶ್ರೀಕಾಂತ ನಂದೆಣ್ಣವರ, ಪೀರಸಾಬ ನದಾಫ್‌, ಉಪಾಸಿ, ಸಂಗಮೇಶ ಅಂಗಡಿ ಅವರನ್ನು ಸನ್ಮಾನಿಸಲಾಯಿತು. ಶ್ರೀನಿಧಿ ಶಂಕರ ಶಿಳ್ಳಿನ, ಅಮೃತಾ ಕಾಯಿಶೆಟ್ಟಿ, ವಿ.ಎಂ. ಹೂಗಾರ ವಚನ ಗಾಯನ ನಡೆಸಿಕೊಟ್ಟರು.

ಕಸಾಪ ಪದಾಧಿಕಾರಿಗಳಾದ ಎಸ್.ಬಿ. ಅಣ್ಣಿಗೇರಿ, ಪಿ.ಎಚ್. ಕೊಂಡಾಬಿಂಗಿ, ಶಂಕರ ಶಿಳ್ಳಿನ, ಪಟ್ಟಣಶೆಟ್ಟಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಮಹೇಶ ಹಿರೇಮಠ, ಎನ್‌ಪಿಎಸ್‌ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಶಂಕರ ಮೇಟಿಗೌಡ್ರ, ಯಲ್ಲಾಪುರದ ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಬಿ.ಎನ್. ಗಾಯಕವಾಡ, ಎಂ.ಎಚ್. ದಿಂಡವಾಡ, ವಿ.ಜಿ. ಜೋಗೊಜಿ, ಪ್ರವೀಣ ಅಂಕಲಿ, ನಿಂಗರಾಜ ಮಲ್ಲಣ್ಣವರ, ರವಿ ಮೇಗಿಲಮನಿ, ಶಿಕ್ಷಕ ಪ್ರಭು ಹಾಲಗುಂಡಿ, ಶಿವಾನಂದ ಸಂಶಿ, ಪುಟ್ಟಪ್ಪ ಕಾಯಿಶೆಟ್ಟಿ, ಅಶೋಕ ಬಿಸೆರೊಟ್ಟಿ, ವಸಂತ ನಡುವಲಕೇರಿ, ಮಂಜುನಾಥ ಕುರುಹಿನಶೆಟ್ಟಿ, ಕೆ.ಬಿ. ಗೊಜನೂರ, ಪ್ರೇಮಾ ಅಂಗಡಿ, ರೇಖಾ ವಡಕಣ್ಣವರ, ಆರ್.ಬಿ. ಬಂಡಿವಡ್ಡರ, ಸೌಮ್ಯಾ ಕೊಪ್ಪದ ಇದ್ದರು.

ಕಸಾಪ ತಾಲೂಕು ಕಾರ್ಯದರ್ಶಿ ಮಂಜುನಾಥ ಚಾಕಲಬ್ಬಿ ಕಾರ್ಯಕ್ರಮ ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ನಾಗರಾಜ ಮಜ್ಜಿಗುಡ್ಡ ಸ್ವಾಗತಿಸಿದರು. ಎನ್.ಎಸ್. ಪವಾಡಶೆಟ್ರ ವಂದಿಸಿದರು.