ಬಸವಣ್ಣ ಸಾರ್ವಕಾಲಿಕ ಕ್ರಾಂತಿ ಪುರುಷ : ಬಿ.ವಾಮದೇವಪ್ಪ

| Published : Feb 19 2024, 01:33 AM IST / Updated: Feb 19 2024, 01:34 AM IST

ಸಾರಾಂಶ

ಮೇಲ್ವರ್ಗದ ಸಂಪ್ರದಾಯಿಗಳ ವಿರೋಧವನ್ನು ಲೆಕ್ಕಿಸದೇ 12 ನೇ ಶತಮಾನದಲ್ಲಿ ಬಸವಣ್ಣನವರು ಸಾರಿದ ತತ್ವಗಳು, ಚಿಂತನೆಗಳು, ವಚನಗಳು ಇಂದಿಗೂ ಪ್ರಸ್ತುತವಾಗಿವೆ ಮತ್ತು ಆದರ್ಶಪ್ರಾಯವಾಗಿವೆ. ಜಾತಿರಹಿತವಾದ, ವರ್ಗರಹಿತವಾದ, ಮೌಡ್ಯರಹಿತವಾದ, ಶೋಷಣೆರಹಿತವಾದ ಸಮ ಸಮಾಜದ ನಿರ್ಮಾಣದ ಕನಸುಗಳನ್ನು ಹೊತ್ತಿದ್ದ ಬಸವಣ್ಣನವರು ವಚನಗಳ ಮೂಲಕ ವಿಶ್ವ ಸಾಂಸ್ಕೃತಿಕ ಲೋಕಕ್ಕೆ ನೀಡಿರುವ ಕೊಡುಗೆ ಅನನ್ಯವಾದುದು.

ದಾವಣಗೆರೆ: 12 ನೇ ಶತಮಾನದ ಸಮಾಜ ಸುಧಾರಕ, ವಚನಗಳ ಮೂಲಕ ಜನರಲ್ಲಿ ಜ್ಞಾನದ ದೀವಿಗೆ ಬೆಳಗಿಸಿದ ಮಹಾನ್ ಮಾನವತಾವಾದಿ, ಅಸಂಖ್ಯಾತ ವಚನಗಳ ಮೂಲಕ ಸಾಹಿತ್ಯ ಲೋಕಕ್ಕೆ ಅನುಪಮ ಕೊಡುಗೆ ನೀಡಿರುವ ಬಸವಣ್ಣ ಸಾರ್ವಕಾಲಿಕ ಕ್ರಾಂತಿ ಪುರುಷ ಹಾಗೂ ಸಮಸ್ತ ವಿಶ್ವಕ್ಕೆ ಸಾಂಸ್ಕೃತಿಕ ರಾಯಭಾರಿಯಾಗಿದ್ದಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ವಾಮದೇವಪ್ಪ ಬಣ್ಣಿಸಿದರು.

ಸರ್ಕಾರದ ಆದೇಶದ ಅನುಸಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ರಾಷ್ಟ್ರಕವಿ ಕುವೆಂಪು ಕನ್ನಡ ಭವನದಲ್ಲಿ ಬಸವಣ್ಣನವರ ಭಾವಚಿತ್ರ ಅನಾವರಣಗೊಳಿಸಿ ಮಾತನಾಡಿ ಮೇಲ್ವರ್ಗದ ಸಂಪ್ರದಾಯಿಗಳ ವಿರೋಧವನ್ನು ಲೆಕ್ಕಿಸದೇ 12 ನೇ ಶತಮಾನದಲ್ಲಿ ಬಸವಣ್ಣನವರು ಸಾರಿದ ತತ್ವಗಳು, ಚಿಂತನೆಗಳು, ವಚನಗಳು ಇಂದಿಗೂ ಪ್ರಸ್ತುತವಾಗಿವೆ ಮತ್ತು ಆದರ್ಶಪ್ರಾಯವಾಗಿವೆ. ಜಾತಿರಹಿತವಾದ, ವರ್ಗರಹಿತವಾದ, ಮೌಡ್ಯರಹಿತವಾದ, ಶೋಷಣೆರಹಿತವಾದ ಸಮ ಸಮಾಜದ ನಿರ್ಮಾಣದ ಕನಸುಗಳನ್ನು ಹೊತ್ತಿದ್ದ ಬಸವಣ್ಣನವರು ವಚನಗಳ ಮೂಲಕ ವಿಶ್ವ ಸಾಂಸ್ಕೃತಿಕ ಲೋಕಕ್ಕೆ ನೀಡಿರುವ ಕೊಡುಗೆ ಅನನ್ಯವಾದುದು. ಹಾಗಾಗಿ ಕರ್ನಾಟಕ ರಾಜ್ಯ ಸರಕಾರವು ಅವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವುದು ಅತ್ಯಂತ ಸೂಕ್ತವಾದ ನಿರ್ಧಾರವಾಗಿದೆ ಎಂದು ತಿಳಿಸಿ ಸರ್ಕಾರಕ್ಕೆ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಬಿ.ದಿಳ್ಯಪ್ಪ, ರೇವಣಸಿದ್ದಪ್ಪ ಅಂಗಡಿ, ಕೆ.ರಾಘವೇಂದ್ರ ನಾಯರಿ,ಸಿ.ಜಿ.ಜಗದೀಶ್ ಕೂಲಂಬಿ, ಜಿಗಳಿ ಪ್ರಕಾಶ್, ಡಿ.ಎಂ.ಮಂಜುನಾಥಯ್ಯ, ಮಧುಕುಮಾರ, ಎನ್.ಎಸ್. ರಾಜು, ಪ್ರಸಾದ್ ಬಂಗೇರ, ಜ್ಯೋತಿ ಉಪಾಧ್ಯಾಯ, ಮಲ್ಲಮ್ಮ, ರುದ್ರಾಕ್ಷಿ ಬಾಯಿ, ಸತ್ಯಭಾಮ ಮಂಜುನಾಥ, ಬಿ.ಎಂ.ಭೈರೇಶ್ವರ, ರಿಯಾಜ್ ಅಹಮದ್ ಮತ್ತಿತರರಿದ್ದರು.....