ಸಾರಾಂಶ
ಯಾದಗಿರಿ ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯದ ಕನ್ನಡ ಸ್ನಾತಕೋತ್ತರ ವಿಭಾಗದಲ್ಲಿ ಎಂ.ಎ. ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಕನ್ನಡಪ್ರಭ ವಾರ್ತೆ ಯಾದಗಿರಿ
12ನೇ ಶತಮಾನದ ವಚನ ಪರಂಪರೆ ನೇತಾರ, ಕಾಯಕ ಯೋಗಿ ಬಸವಣ್ಣನವರು ಅಸಮಾನತೆಯನ್ನು ಬುಡ ಸಮೇತ ಕಿತ್ತೆಸೆದು ಸಮ ಸಮಾಜ ಹುಟ್ಟು ಹಾಕಿದವರು ಎಂದು ರಾಯಚೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಅಧ್ಯಾಪಕ ಡಾ. ಶರಣಪ್ಪ ಚಲುವಾದಿ ಹೇಳಿದರು.ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯದ ಕನ್ನಡ ಸ್ನಾತಕೋತ್ತರ ವಿಭಾಗದಲ್ಲಿ ಎಂಎ ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಬಸವಣ್ಣ ಎಲ್ಲಾ ಸಮಾಜದವರನ್ನು ಒಂದುಗೂಡಿಸಿ ಸರ್ವ ಸಮಾನತೆ ನವ ಸಮಾಜ ಕಟ್ಟಿ, ಸಮಾನತೆ ಸಂದೇಶ ಸಾರಿದ ಬಸವಣ್ಣ ನಿಜವಾಗಿಯೂ ಸಾಂಸ್ಕೃತಿಕ ನಾಯಕ ಎಂದು ಬಣ್ಣಿಸಿದರು.ಡಾ.ಬಸವ ಪ್ರಸಾದ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಡಾ. ಸುಭಾಶ್ಚಂದ್ರ ಕೌಲಗಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗುವಿವಿಯಿಂದ ಪಿಎಚ್‌ಡಿ ಪಡೆದ ಡಾ.ರವಿ ಜಿ. ಪವಾರಗೆ ಮತ್ತು ಕನ್ನಡ ವಿಭಾಗದಲ್ಲಿ ಎಂ.ಎ. ಅಧ್ಯಯನ ಮಾಡಿ ಶಿಕ್ಷಕರಾಗಿ ನೇಮಕ ಹೊಂದಿದ ನಾಲ್ಕು ಜನ ವಿದ್ಯಾರ್ಥಿಗಳಾದ ಸುಜಾತ, ಹಣಮಂತ, ಮುರಳಿ ಮೋಹನ ಮತ್ತು ಚೈತ್ರಾ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ವಿಶೇಷವಾಗಿ ಗೌರವಿಸಲಾಯಿತು.
ಡಾ.ನರಸಪ್ಪ ಎಂ. ಚಿತ್ತಾಪುರ, ಡಾ. ಕಮಲಮ್ಮ ಸಿಣ್ಣೂರು, ಡಾ. ಭೀಮರಾಯ ಲಿಂಗೇರಿ, ಡಾ. ಅನಿಲಕುಮಾರ, ಡಾ. ವೆಂಕಟೇಶ ಕಲಾಲ್, ಗುರುಲಿಂಗಯ್ಯ ಮೋಟ್ನಳ್ಳಿ, ಡಾ. ಶ್ರೀಶೈಲ ಪೂಜಾರಿ, ಶಿವು ಮುದ್ನಾಳ, ಮಲ್ಲಿಕಾರ್ಜುನ ಸೇರಿದಂತೆ ಇತರರಿದ್ದರು. ಅನಿತಾ ಪ್ರಾರ್ಥಸಿದರು. ಸರಸ್ವತಿ ಸ್ವಾಗತಿಸಿದರು. ಭವಾನಿ ಮತ್ತು ಪಿಡ್ಡಪ್ಪ ನಿರೂಪಿಸಿದರು. ಭೀಮಪ್ಪ ವಂದಿಸಿದರು.