ಬಸವಣ್ಣ ಮನುಕುಲದ ಸಾಂಸ್ಕೃತಿಕ ನಾಯಕ: ಸಿ.ಎಚ್.ಕಾಳೀರಯ್ಯ

| Published : May 10 2024, 11:50 PM IST

ಬಸವಣ್ಣ ಮನುಕುಲದ ಸಾಂಸ್ಕೃತಿಕ ನಾಯಕ: ಸಿ.ಎಚ್.ಕಾಳೀರಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಇಂದಿನ ಜಗತ್ತಿನ ಸಮಸ್ಯೆಗಳಿಗೆ ಬಸವಣ್ಣನವರ ವಚನ ಸಾಹಿತ್ಯ ದ ಒಂದೊಂದು ನುಡಿಗಳು ಪರಿಹಾರ ನೀಡಬಲ್ಲವಾಗಿದೆ. ಕಾಯಕದ ದಾಸೋಹದ ಮೂಲಕ ಪ್ರತಿಯೊಬ್ಬರು ದುಡಿಯಬೇಕು. ದುಡಿಮೆಯ ಅಲ್ಪ ಹಣವನ್ನು ದಾಸೋಹದ ಮೂಲಕ ಸರಳ ಬದುಕಿನ ವಿಧಾನವನ್ನು ಜನರಿಗೆ ತೋರಿಸಿಕೊಟ್ಟ ಮಹಾನ್ ನಾಯಕ ಬಸವಣ್ಣ.

ಕನ್ನಡಪ್ರಭ ವಾರ್ತೆ ಮದ್ದೂರು

ಬಸವಣ್ಣನವರು ಕೇವಲ ಕರ್ನಾಟಕದ ಸಾಂಸ್ಕೃತಿಕ ನಾಯಕರಷ್ಟೇ ಅಲ್ಲ. ಇಡೀ ಮನುಕುಲದ ಸಾಂಸ್ಕೃತಿಕ ನಾಯಕ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಚ್. ಕಾಳೀರಯ್ಯ ಶುಕ್ರವಾರ ಹೇಳಿದರು.

ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ನಡೆದ ಶ್ರೀ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ, ಇಂದಿನ ಜಗತ್ತಿನ ಸಮಸ್ಯೆಗಳಿಗೆ ಬಸವಣ್ಣನವರ ವಚನ ಸಾಹಿತ್ಯ ದ ಒಂದೊಂದು ನುಡಿಗಳು ಪರಿಹಾರ ನೀಡಬಲ್ಲವಾಗಿದೆ ಎಂದರು.

ಕಾಯಕದ ದಾಸೋಹದ ಮೂಲಕ ಪ್ರತಿಯೊಬ್ಬರು ದುಡಿಯಬೇಕು. ದುಡಿಮೆಯ ಅಲ್ಪ ಹಣವನ್ನು ದಾಸೋಹದ ಮೂಲಕ ಸರಳ ಬದುಕಿನ ವಿಧಾನವನ್ನು ಜನರಿಗೆ ತೋರಿಸಿಕೊಟ್ಟ ಮಹಾನ್ ನಾಯಕ ಬಸವಣ್ಣ ಎಂದು ಬಣ್ಣಿಸಿದರು.

ಗ್ರೇಡ್ 2 ತಹಸೀಲ್ದಾರ್ ಸೋಮಶೇಖರ್ ಮಾತನಾಡಿ, ಅಂತರ್ಜಾತಿ ವಿವಾಹಗಳ ಮೂಲಕ ಜನರಲ್ಲಿನ ಮೇಲು ಕೀಳು ಎಂಬ ಭಾವನೆಗಳನ್ನು ತೊಡೆದು ಹಾಕಲು ಬಸವಣ್ಣನವರು ಪ್ರಯತ್ನಿಸಿದ್ದರು. ಇಂದಿನ ಯುವ ಪೀಳಿಗೆ ಬಸವಣ್ಣನವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ತಾಪಂ ಇಒ ಮಂಜುನಾಥ್, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ನಾರಾಯಣ್, ಸೆಸ್ಕಾಂ ಜೂನಿಯರ್ ಎಂಜಿನಿಯರ್ ಅನಿತಾ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮಂಜುನಾಥ ನಾಯ್ಡು, ವೀರಶೈವ ಸಂಘಟನೆಗಳ ಮುಖಂಡರಾದ ಮಂಜುನಾಥ, ವೀರಭದ್ರಸ್ವಾಮಿ. ಸಿದ್ದರಾಮು ಪಿ, ರಾಜಶೇಖರ್, ಮಹೇಶ್, ತ್ರಿವೇಣಿ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.ಸಮಸಮಾಜ ನಿರ್ಮಾಣಕ್ಕಾಗಿ ಜಗತ್ತಿಗೆ ಸಂದೇಶ ಸಾರಿದ ಬಸವಣ್ಣ: ಡಾ.ನಾಗರಾಜುಮಂಡ್ಯ:ಸಮಸಮಾಜ ನಿರ್ಮಾಣಕ್ಕಾಗಿ ಜಗತ್ತಿಗೆ ಸಂದೇಶ ಸಾರಿದ ವಿಶ್ವಗುರು ಬಸವಣ್ಣನವರ ವಚನಗಳು ಸಾರ್ವಕಾಲಿಕವಾದವು ಎಂದು ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ನಿರ್ದೇಶಕ ಡಾ.ನಾಗರಾಜು ವಿ.ಭೈರಿ ಹೇಳಿದರು.

ತಾಲೂಕಿನ ಆಲಕೆರೆ ಗ್ರಾಮದ ಬಳಿ ಅಂತಾರಾಷ್ಟ್ರೀಯ ಅಸೋಷಿಯೇಷನ್ ಆಫ್ ಅಲಯನ್ಸ್ ಸಂಸ್ಥೆಯಿಂದ ನಡೆದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಜಯಂತಿ ಆಚರಣೆ-ವಚನಗಳ ಗಾಯನ ಹಾಗೂ ಕಾಯಕ ಶ್ರೇಷ್ಠ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.ಕಾಯಕವೇ ಕೈಲಾಸ ಎಂದು ಮಾನವ ಕುಲಕ್ಕೆ ಸಂದೇಶ ನೀಡಿದ ಬಸವಣ್ಣ ಸಮಾಜಕ್ಕೆ ತನ್ನದೇ ಆದ ವಚನ, ತತ್ವಗಳ ಮೂಲಕ ಸಾಮಾಜಿಕ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಿದ ಮಹಾ ಸಂತ ಎಂದರು.

ಜಿಲ್ಲಾ ರಾಜ್ಯಪಾಲ ಕೆ.ಟಿ.ಹನುಮಂತು ಮಾತನಾಡಿ, 12ನೇ ಶತಮಾನದಲ್ಲಿ ಇದ್ದ ಅಸ್ಪಶ್ಯತೆ, ವರ್ಗಬೇಧವನ್ನು ತೊಲಗಿಸಲು ತಮ್ಮ ಜೀವನವನ್ನೇ ತ್ಯಾಗಮಾಡಿ ಕಾಂತ್ರಿಕಾರಿ ಬಸವಣ್ಣನವರ ಆದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದರು.ಹಿರಿಯ ಪತ್ರಕರ್ತ ಬಸವರಾಜ್ ಅವರಿಗೆ ಕಾಯಕ ಶ್ರೇಷ್ಠ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಪ್ರತಿಭಾಂಜಲಿ ಪ್ರೊ.ಡೇವಿಡ್ ಅವರು ವಿವಿಧ ವಚನಗಾಯನ ನಡೆಸಿಕೊಟ್ಟರು. ಲಯನ್ಸ್ ಸಂಸ್ಥೆ ಪದಾಧಿಕಾರಿಗಳಾದ ಎಚ್.ಮಾದೇಗೌಡ, ಶಶಿಧರ್ ಈಚಗೆರೆ, ಚಂದ್ರಶೇಖರ್, ರಕ್ಷಿತ್‌ರಾಜ್, ರತ್ನಮ್ಮ, ನೀನಾಪಟೇಲ್, ಮಂಜುನಾಥ್, ಲೋಕೇಶ್, ಡಾ.ಶಿವಕುಮಾರ್ ಮತ್ತಿತರರು ಭಾಗವಹಿಸಿದ್ದರು.