ಸಾರಾಂಶ
12ನೇ ಶತಮಾನದಲ್ಲಿ ಬಸವಣ್ಣವರು ಸಮ ಸಮಾಜ ನಿರ್ಮಾಣವಾದರೆ ಮಾತ್ರ ಎಲ್ಲಾ ಮನುಷ್ಯ ಜೀವಗಳು ಸುಖವಾಗಿ ಜೀವಿಸಲು ಸಾಧ್ಯವೆಂದು ಸಮ ಸಮಾಜ ಕನಸ್ಸು ಕಂಡಿದ್ದರೆಂದು ಶಶಿಧರ ಶಾಸ್ತ್ರಿಗಳು ಹಿರೇಮಠ ಹೇಳಿದರು.
ನರಗುಂದ: 12ನೇ ಶತಮಾನದಲ್ಲಿ ಬಸವಣ್ಣವರು ಸಮ ಸಮಾಜ ನಿರ್ಮಾಣವಾದರೆ ಮಾತ್ರ ಎಲ್ಲಾ ಮನುಷ್ಯ ಜೀವಗಳು ಸುಖವಾಗಿ ಜೀವಿಸಲು ಸಾಧ್ಯವೆಂದು ಸಮ ಸಮಾಜ ಕನಸ್ಸು ಕಂಡಿದ್ದರೆಂದು ಶಶಿಧರ ಶಾಸ್ತ್ರಿಗಳು ಹಿರೇಮಠ ಹೇಳಿದರು.
ಅವರು ತಾಲೂಕಿನ ಶಿರೋಳ ಗ್ರಾಮದ ತೋಂಟದಾರ್ಯ ಶಾಖಾ ಮಠದ ಗದ್ದುಗೆ ಶಿಲಾ ಮಂಟಪ ಮತ್ತು ಗೋಪುರ ಲೋಕಾರ್ಪಣೆ ನಿಮಿತ್ತ ಹಮ್ಮಿಕೊಂಡಿರುವ 13ನೇ ದಿನದ ಬಸವ ಪುರಾಣದಲ್ಲಿ ಮಾತನಾಡಿ, ಅಂದಿನ ದಿನಗಳಲ್ಲಿ ಶರಣ ಬಸವಣ್ಣವರು ಈ ಸಮಾಜದಲ್ಲಿ ಸಮ ಸಮಾಜ ನಿರ್ಮಾಣದ ಕನಸು ನನಸಾಗಿಸುವ ಎಲ್ಲ ಪ್ರಯತ್ನಗಳು ಯಶಸ್ವಿ ಮಾಡಲು ಪ್ರಯತ್ನಸಿದರು. ಬಸವಣ್ಣನವರ ದಿವ್ಯ ದೃಷ್ಟಿಯಿಂದ ಬಿಂದಿಗೆ ಹಾಲು ಹಿಂಡುವ ಹಸು ಕೂಡಲ ಸಂಗಮನ ಒಲಿಮೆಯೊಂದಿದ್ದರೆ ಹಂಡೆಗಟ್ಟಲೆ ಹಾಲು ನೀಡುತ್ತದೆ ಎನ್ನುತ್ತ “ನೀನೊಲಿದರೆ ಕೊರಡು ಕೊನರುವದಯ್ಯ, ನೀನೊಲಿದರೆ ಬರಡು ಹಯನುವುದಯ್ಯ, ನೀನೊಲಿದರೆ ಸಕಲ ಪಡಿಪದಾರ್ಥಗಳು ಇದಿರಲ್ಲಿರ್ಪವು ಕೂಡಲ ಸಂಗಮದೇವಾ” ಎಂಬಂತೆ ದೇವನೊಲೊಮೆ ಇಲ್ಲದೇ ಯಾವ ಸಿದ್ಧಿಯಾಗಲಾರದು. ನಾವು ಮಾಡುವ ಕಾಯಕ ದೇವನಿಗೆ ಒಲುಮೆ ತರುವಂತಿರಬೇಕು, ಪ್ರತಿಯೊಬ್ಬರು ದಾಸೋಹ ಕಾಯಕ ನಿಷ್ಠರಾಗಬೇಕು ಅಂದಾಗ ಶಿವ ಮೆಚ್ಚುತ್ತಾನೆ ಎಂದರು. ಇದೇ ಸಂದರ್ಭದಲ್ಲಿ ದಾಸೋಹ ದಾನಿಗಳಾದ ಕಲಗುಡಿಯವರನ್ನು ಶ್ರೀಮಠದದಿಂದ ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಶಾಂತಲಿಂಗ ಶ್ರೀಗಳು, ಪ್ರಕಾಶಗೌಡ ತಿರಕನಗೌಡ್ರ, ವೀರಯ್ಯ ದೊಡ್ಡಮನಿ, ಗುರುಬಸವ ಶೆಲ್ಲಿಕೇರಿ, ದ್ಯಾಮಣ್ಣ ಕಾಡಪ್ಪನವರ, ನಾಗನಗೌಡ ತಿಮ್ಮನಗೌಡ್ರ, ಲಾಲಸಾಬ ಅರಗಂಜಿ, ಆರ್.ಐ. ನದಾಫ, ಹನಮಂತ ಕಾಡಪ್ಪನವರ, ಪ್ರಾಚಾರ್ಯ ಬಿ.ಆರ್. ಸಾಲಮಠ ಮುಂತಾದವರು ಇದ್ದರು.