ಬಸವಣ್ಣವರು ಲೆಕ್ಕಪರಿಶೋಧಕರಾಗಿ ರಾಜ್ಯದ ಬೊಕ್ಕಸ ಸಮೃದ್ಧಿಗೊಳಿಸಿದ್ದರು-ಶಶಿಧರ ಶಾಸ್ತ್ರಿ

| Published : Apr 15 2025, 12:51 AM IST

ಬಸವಣ್ಣವರು ಲೆಕ್ಕಪರಿಶೋಧಕರಾಗಿ ರಾಜ್ಯದ ಬೊಕ್ಕಸ ಸಮೃದ್ಧಿಗೊಳಿಸಿದ್ದರು-ಶಶಿಧರ ಶಾಸ್ತ್ರಿ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜ್ಜಳ ರಾಜರ ಆಸ್ಥಾನದಲ್ಲಿ ಬಸವಣ್ಣವರು ರಾಜ್ಯವನ್ನು ಸಂಪದ್ಭರಿತ ಸಮೃದ್ಧಿಗೊಳಿಸಿದ್ದರೆಂದು ಶಶಿಧರ ಶಾಸ್ತ್ರಿ ಹಿರೇಮಠ ಹೇಳಿದರು.

ನರಗುಂದ: ಬಿಜ್ಜಳ ರಾಜರ ಆಸ್ಥಾನದಲ್ಲಿ ಬಸವಣ್ಣವರು ರಾಜ್ಯವನ್ನು ಸಂಪದ್ಭರಿತ ಸಮೃದ್ಧಿಗೊಳಿಸಿದ್ದರೆಂದು ಶಶಿಧರ ಶಾಸ್ತ್ರಿ ಹಿರೇಮಠ ಹೇಳಿದರು. ಅವರು ತಾಲೂಕಿನ ಶಿರೋಳ ಗ್ರಾಮದ ತೋಂಟದಾರ್ಯ ಶಾಖಾಮಠದಲ್ಲಿ 12ನೇ ದಿನದ ಬಸವ ಪುರಾಣ ಕಾರ್ಯಕ್ರಮದಲ್ಲಿ ಮಾತನಾಡಿ, ಬಿಜ್ಜಳನ ಆಸ್ಥಾನದ ಲೆಕ್ಕಪರಿಶೋಧಕರಾಗಿ ಬಸವಣ್ಣನವರ ಸತ್ಯ ಶುದ್ಧ ಕಾಯಕದಿಂದ ರಾಜ್ಯದ ಬೊಕ್ಕಸವನ್ನು ಇನ್ನಷ್ಟು ಸಮೃದ್ಧಿಗೊಳಿಸಿದರು. ಇದನ್ನ ಅರಿತ ಬಿಜ್ಜಳ ರಾಜನು ಬಸವಣ್ಣನವರನ್ನು ತನ್ನ ರಾಜ್ಯದ ಪ್ರಧಾನಮಂತ್ರಿಯನ್ನಾಗಿ ನೇಮಕ ಮಾಡಿದರು. ಶ್ರೇಣಿ ಕೃತ ಸಮಾಜದ ಧೋರಣೆ ವಿರುದ್ಧವಾಗಿ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎನ್ನುವ ಮೂಲಕ ಹಡಪದ ಅಪ್ಪಣ್ಣನವರನ್ನು ತನ್ನ ಆಪ್ತ ಸಹಾಯಕರನ್ನಾಗಿ ನೇಮಕ ಮಾಡಿಕೊಂಡರು. ತಪ್ಪಿಗೆ ಶಿಕ್ಷೆಯೊಂದೇ ಮಾರ್ಗವಲ್ಲ, ಸೂಕ್ತ ತಿಳಿವಳಿಕೆ ಮುಖ್ಯವೆನ್ನುವುದನ್ನು ಸಾರಿ ಸಾರಿ ಹೇಳಿದರು. ಹಾವು ತಿಂದವರ ನುಡಿಸಬಹುದು ಗರಬಡಿದವರ ನುಡಿಸಬಹುದು ಸಿರಿಗರ ಬಡಿದವರ ನುಡಿಸಲಾಗದು ಹೀಗೆ ಸರ್ವ ರೀತಿಯ ಸಮ ಸಮಾಜ ನಿರ್ಮಾಣ ಕಾರ್ಯವನ್ನು ಬಸವಣ್ಣನವರು ಮುಂದುವರಿಸಿದರು. ಇದೇ ಸಂದರ್ಭದಲ್ಲಿ ದಾಸೋಹ ದಾನಿಗಳಾದ ನಜೀರ ಸಾಬ ಚಳಮರದ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶಾಂತಲಿಂಗ ಶ್ರೀಗಳು, ಪ್ರಕಾಶ್ ಗೌಡ ತಿರಕನಗೌಡ್, ವೀರಯ್ಯ ದೊಡ್ಡವಿನಿ, ಶೆಲ್ಲಿಕೆರಿ, ದ್ಯಾಮಣ್ಣ ಕಾಡಪ್ಪನವರ, ನಾಗಲೋಟಿಮಠ, ನಾಗನಗೌಡ ತಿಮ್ಮನಗೌಡ್ರ, ಆರ್.ಐ. ನದಾಫ, ಹನುಮಂತ ಕಾಡಪ್ಪನವರು, ಪ್ರಾಚಾರ್ಯ ಬಿ.ಆರ್. ಸಾಲಿಮಠ ಮುಂತಾದವರು ಉಪಸ್ಥಿತರಿದ್ದರು.