ಸಾರಾಂಶ
ವಿಶ್ವಗುರು ಬಸವಣ್ಣನವರು ಶೋಷಣೆಗೊಳಗಾದವರನ್ನು ಸನ್ಮಾರ್ಗದತ್ತ ಕರೆದೊಯ್ಯುವ ಕಾಯಕ ಮಾಡಿದ್ದಾರೆ ಎಂದು ನಿವೃತ್ತ ಪಿಎಸ್‌ಐ ಶರಣ ಬಸವನಗೌಡ ಪೋಲಿಸ್ ಪಾಟೀಲ ಹೇಳಿದರು.
ಕನ್ನಡಪ್ರಭ ವಾರ್ತೆ ಯಲಬುರ್ಗಾ
ಬಸವಣ್ಣನವರು ಸಮಾನತೆ ಎತ್ತಿ ಹಿಡಿದ ಮಾನವತಾವಾದಿ ಆಗಿದ್ದಾರೆ ಎಂದು ನಿವೃತ್ತ ಪಿಎಸ್‌ಐ ಶರಣ ಬಸವನಗೌಡ ಪೋಲಿಸ್ ಪಾಟೀಲ ಹೇಳಿದರು.ತಾಲೂಕಿನ ಗುಳೆ ಗ್ರಾಮದಲ್ಲಿ ರಾಷ್ಟ್ರೀಯ ಬಸವದಳ ಹಾಗೂ ಅಕ್ಕ ನಾಗಲಾಂಬಿಕೆ ಮಹಿಳಾ ಗಣದ ವತಿಯಿಂದ ೮೯೧ನೇ ಬಸವ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಶ್ವಗುರು ಬಸವಣ್ಣನವರು ಶೋಷಣೆಗೊಳಗಾದವರನ್ನು ಸನ್ಮಾರ್ಗದತ್ತ ಕರೆದೊಯ್ಯುವ ಕಾಯಕ ಮಾಡಿದ್ದಾರೆ. ವಚನ ಸಾಹಿತ್ಯದ ತತ್ವಾದರ್ಶದಂತೆ ನಡೆಯುವವರು ಮಾತ್ರ ವ್ಯಕ್ತಿಗತ ದೋಷ ನಿವಾರಿಸಿಕೊಂಡು ನೆಮ್ಮೆದಿಯಿಂದ ಬದುಕುಲು ಸಾಧ್ಯ ಎಂದರು.ಬಸವಣ್ಣನವರ ತತ್ವಗಳಾದ ಕಾಯಕ, ದಾಸೋಹ ಮತ್ತು ಇಷ್ಟಲಿಂಗ ಪೂಜೆ ಇವುಗಳನ್ನು ಪ್ರತಿಯೊಬ್ಬ ಮಾನವ ಅರಿತುಕೊಂಡು ಆಚರಣೆಯಲ್ಲಿ ತಂದರೆ ಜಗತ್ತಿನ ಎಲ್ಲ ಮೌಢ್ಯತೆಯ ಸಮಸ್ಯೆಗಳಿಗೆ ಪರಿಹಾರ ಸಿಕ್ಕಂತಾಗುತ್ತದೆ ಎಂದು ಹೇಳಿದರು.
ಶರಣರಾದ ಮಹಾದೇವಪ್ಪ ಚನ್ನಳಿ ಹಾಗೂ ಅಮರೇಶಪ್ಪ ಬಳ್ಳಾರಿ, ಶರಣಪ್ಪ ಹೊಸಳ್ಳಿ ಮಾತನಾಡಿದರು.ಶರಣೆ ಬಸಮ್ಮ ಹೂಗಾರ, ಸಾವಿತ್ರಮ್ಮ ಆವಾರಿ, ದೇವಪ್ಪ ಕೋಳೂರು, ಲಕ್ಷಮ್ಮ ಚೌಡ್ಕಿ, ನಾಗನಗೌಡ ಜಾಲಿಹಾಳ, ರೇಣುಕಪ್ಪ, ಹಿರೇಹನುಮಗೌಡ ಗೌಡ್ರ, ವಿರೂಪಣ್ಣ ಮೇಟಿ, ಗಿರಿಮಲ್ಲಪ್ಪ ಪರಂಗಿ, ಸೋಮಶೇಖರ ಉಜ್ಜಲಕುಂಟಿ, ನಾಗಮ್ಮ ಜಾಲಿಹಾಳ, ಯಮನಮ್ಮ ಮೇಟಿ, ಚಿದಾನಂದಪ್ಪ ಗೊಂದಿ, ನಿಂಗಪ್ಪ ಪರಂಗಿ, ಬಸವರಾಜ ಹೂಗಾರ ಇತರಿದ್ದರು.