ಬಿಜ್ಜಳನ ಸೂಚನೆಯಂತೆ ಬಸವಣ್ಣ ಸ್ವರ್ಣ ಪತ್ರ ಓದಿದ್ದರು-ಶಶಿಧರ ಶಾಸ್ತ್ರಿ

| Published : Apr 14 2025, 01:19 AM IST

ಬಿಜ್ಜಳನ ಸೂಚನೆಯಂತೆ ಬಸವಣ್ಣ ಸ್ವರ್ಣ ಪತ್ರ ಓದಿದ್ದರು-ಶಶಿಧರ ಶಾಸ್ತ್ರಿ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜ್ಜಳನ ರಾಜ್ಯ ಆಡಳಿತ ರಾಜ್ಯಸಭೆಯಲ್ಲಿ ಹಾರಿ ಬಂದ ಸ್ವರ್ಣ ಪತ್ರದಲ್ಲಿಯ ವಿಷಯವನ್ನು ಯಾವ ಮಂತ್ರಿಯೂ ಓದಿ ಹೇಳಲಾಗದೆ ಗೊಂದಲದಲ್ಲಿ ಮುಳುಗಿ ಹೋಗಿದ್ದಾಗ ಬಿಜ್ಜಳನ ಸೂಚನೆಯಂತೆ ಬಸವಣ್ಣನವರು ಸ್ವಣ೯ ಪತ್ರವನ್ನು ಓದಿದ್ದರು ಎಂದು ಪುಟ್ಟರಾಜ ಗವಾಯಿಗಳ ಶಿಷ್ಯರಾದ ಶಶಿಧರ ಶಾಸ್ತ್ರಿ ಹಿರೇಮಠ ಹೇಳಿದರು.

ನರಗುಂದ: ಬಿಜ್ಜಳನ ರಾಜ್ಯ ಆಡಳಿತ ರಾಜ್ಯಸಭೆಯಲ್ಲಿ ಹಾರಿ ಬಂದ ಸ್ವರ್ಣ ಪತ್ರದಲ್ಲಿಯ ವಿಷಯವನ್ನು ಯಾವ ಮಂತ್ರಿಯೂ ಓದಿ ಹೇಳಲಾಗದೆ ಗೊಂದಲದಲ್ಲಿ ಮುಳುಗಿ ಹೋಗಿದ್ದಾಗ ಬಿಜ್ಜಳನ ಸೂಚನೆಯಂತೆ ಬಸವಣ್ಣನವರು ಸ್ವಣ೯ ಪತ್ರವನ್ನು ಓದಿದ್ದರು ಎಂದು ಪುಟ್ಟರಾಜ ಗವಾಯಿಗಳ ಶಿಷ್ಯರಾದ ಶಶಿಧರ ಶಾಸ್ತ್ರಿ ಹಿರೇಮಠ ಹೇಳಿದರು. ಅವರು ಶಿರೋಳ ಗ್ರಾಮದ ತೋಂಟದಾರ್ಯ ಶಾಖಾ ಮಠದ ಗದ್ದುಗೆ ಶಿಲಾ ಮಂಟಪ ಮತ್ತು ಗೋಪುರದ ಲೋಕಾರ್ಪಣೆ ನಿಮಿತ್ತ 11ನೇ ದಿನದ ಬಸವ ಪುರಾಣ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸ್ವರ್ಣ ಪತ್ರದಲ್ಲಿ ಉಲ್ಲೇಖಿಸಲಾದಂತೆ ಸಿಂಹಾಸನ ಕೆಳಗೆ 88 ಸಾವಿರ ಕೋಟಿ ಸ್ವರ್ಣ ನಾಣ್ಯಗಳ ಭಂಡಾರ ಇರುವ ವಿಷಯವನ್ನು ಮತ್ತು ಇದನ್ನು ಅವಶ್ಯಕತೆ ಅನುಸಾರವಾಗಿ ಬಳಸಬಹುದು ಎಂಬುದನ್ನು ಪತ್ರ ಓದಿ ಸಭೆಗೆ ಹೇಳುತ್ತಿದ್ದಂತೆ ನಾರಾಯಣ ಕರಣಿಕ, ಕೊಂಡಿ ಮಂಚಣ್ಣ ಕ್ರೋಧದಿಂದ ಎದ್ದು ನಿಂತು ಇದು ಶುದ್ಧ ಸುಳ್ಳು ರಾಜನಿಗೆ ಅವಮಾನ ಮಾಡುವ ಹುನ್ನಾರ ಎಂದು ಕಿರುಚಾಡಿದರು. ನಿಜವಾದ ಸಂಗತಿ ಗೊತ್ತಿದ್ದರೂ ಬಸವಣ್ಣನವರ ಮೇಲಿನ ಮತ್ಸರದಿಂದ ತಮ್ಮ ಅಸ್ತಿತ್ವಕ್ಕೆ ಧಕ್ಕೆ ಬರಬಹುದೆಂದು ಹಾಗೂ ಅವರನ್ನು ಮಂತ್ರಿ ಮಾಡಬಾರದು ಎಲ್ಲಾ ಪ್ರಯತ್ನ ಮಾಡಿದರು. ವಾಸ್ತವ ವಿಷಯ ತಿಳಿದ ಬಿಜ್ಜಳ ರಾಜನು ಬ‌ಸವಣ್ಣನವರನ್ನು ಅಪ್ಪಿ ಒಪ್ಪಿಕೊಂಡರು. ಇಲ್ಲಿಂದ ಬಸವಣ್ಣನವರ ಸಮಾಜ ಸುಧಾರಣೆ ಕಾರ್ಯ ಆರಂಭವಾಯಿತು. ಇದೇ ಸಂದರ್ಭದಲ್ಲಿ ದಾಸೊಹ ದಾನಿ ಶಂಕರಲಿಂಗಯ್ಯ ವಸ್ತ್ರದ ದಂಪತಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶಾಂತಲಿಂಗ ಶ್ರೀಗಳು, ಪ್ರಕಾಶಗೌಡ ತಿರಕನಗೌಡ್ರ, ವೀರಯ್ಯ ದೊಡ್ಡಮನಿ, ಗುರುಬಸವ ಶೆಲ್ಲಿಕೇರಿ, ನಾಗನಗೌಡ ತಿಮ್ಮನಗೌಡ್ರ ಲೀ. ದ್ಯಾಮಣ್ಣ ಕಾಡಪ್ಪನವರ, ಲಾಲಸಾಬ ಅರಗಂಜಿ, ಆರ್.ಐ. ನದಾಫ, ಹನುಮಂತ ಕಾಡಪ್ಪನವರು, ಪ್ರಾಚಾರ್ಯ ಬಿ.ಆರ್. ಸಾಲಿಮಠ ಉಪಸ್ಥಿತರಿದ್ದರು.