ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಬಸವಣ್ಣನವರು ಯಾವುದೇ ಜಾತಿ ಹಾಗೂ ವರ್ಗಕ್ಕೆ ಸಿಮೀತವಾಗಿಲ್ಲ ಎಂದು ಅಫಜಲ್ಪುರ ಕ್ಷೇತ್ರದ ಶಾಸಕ ಎಂ.ವೈ.ಪಾಟೀಲ್ ಹೇಳಿದರು.ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನಗರದ ಡಾ.ಎಸ್.ಎಂ ಪಂಡಿತರಂಗ ಮಂದಿರದಲ್ಲಿ ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ ಭಾವಚಿತ್ರ ಅನಾವರಣ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರ ಬಸವಣ್ಣನವರು ಸಾಂಸ್ಕೃತಿಕ ನಾಯಕ ಎಂಬುದಾಗಿ ಘೋಷಣೆ ಮಾಡಿರುವುದು ನಾಡೇ ಹೆಮ್ಮೆ ಪಡುವಂತಾಗಿದೆ. ಪ್ರಥಮವಾಗಿ ನಾವೆಲ್ಲರೂ ಬಸವ ತತ್ವ ಮನೆ-ಮನೆ ಮುಟ್ಟಿಸೋಣ ಎಂದರು.ಮಳಖೇಡದ ಸೈಯದ ಶಾಹಾ ಮುಸ್ತಪಾ ಖಾದ್ರಿ ಅವರು ಮಾತನಾಡಿ, ಬಸವಣ್ಣನವರು ಲಿಂಗಾಯತರಿಗೆ ಮಾತ್ರ ಮೀಸಲು ಇಲ್ಲ. ಬಸವಣ್ಣನವರ ತತ್ವಗಳು ಸಾರ್ವಕಾಲಿಕವಾಗಿದೆ. ಬದುಕಿನ ತತ್ವಗಳು ಬಸವಣ್ಣನವರ ವಚನ ಗಳಲ್ಲಿ ಅಡಕವಾಗಿವೆ. ಬಸವಣ್ಣನವರ ವಚನ ಓದಿ ಅವರ ತತ್ವದಂತೆ ಮುನ್ನಡೆಯಲಾಗುತ್ತಿದೆ ಎಂದರು.
ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಮಾತನಾಡಿ, ದಾವಣಗೆರೆಯಲ್ಲಿ ನಡೆದ ವೀರಶೈವ ಲಿಂಗಾಯತ ಸಮಾಜದ ಸಮಾವೇಶದಲ್ಲಿ ವಿಶ್ವ ಗುರು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂಬ ನಿರ್ಣಯ ಕೈಗೊಂಡಿರುವುದನ್ನು ರಾಜ್ಯ ಸರ್ಕಾರ ಅನುಷ್ಠಾನಕ್ಕೆ ತಂದಿರುವುದು ಸ್ವಾಗತಾರ್ಹವಾಗಿದೆ ಎಂದರು.ಮೀನಾಕ್ಷಿ ಬಾಳಿ ವಿಶೇಷ ಉಪನ್ಯಾಸ ನೀಡುತ್ತಾ, ರಾಜ ಸತ್ಯ ಮತ ಜಾಗೂ ಪುರುಷ ಸತ್ಯ ಜನ ಸತ್ಯ ಮುನ್ನೆಲೆಗೆ ತರಲು ಯತ್ ಬಸವಣ್ಣ ಶ್ರಮ ಸಂಸ್ಕೃತಿ ನಾಯಕ ಎಲ್ಲ ಶರಣರ ಸಂಕೇತವಾಗಿರುವುದರಿ ವ್ಯಕ್ತಿಯಲ್ಲ ಅವರೊಳಗೆ ಎಲ್ಲ ಶರಣರು ಸೇರಿದ್ದಾರೆ. ವರ್ಣ ಬೇಧ, ಲಿಂಗಬೇಧ ಅಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಭಾರತೀಯ ಅಧ್ಯಾತ್ಮ ದಿಕ್ಕನ್ನೇ ಬದಲಾಯಿಸಿದ ನಾಯಕ ಎಂದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ಸ್ವಾಗತಿಸಿದರು.ಧರ್ಮಗುರುಗಳಾದ ಆಳಂದ ಶ್ರೀ ತೋಂಟದಾರ್ಯ ಅನುಭವ ಮಂಟಪದ ಕೋರಣೇಶ್ವರ ಸ್ವಾಮಿಗಳು, ಗುರುನಾನಕ್ ಮಠದ ಪೂಜ್ಯ ಭಾತ್ ದೀಪ ಸಿಂಗ್ (ಗ್ರಂಥಿ) ಸಂತ ಮೇರಿ ಚರ್ಚಿನ ಪಾದರ್ ಲಾಜರ್ ಚೇತನ್, ಕೆಕೆಆರ್‌ಡಿಬಿ ಕಾರ್ಯದರ್ಶಿ ಎಂ. ಸುಂದರೇಶ ಬಾಬು, ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನಮ್, ಪೋಲಿಸ್ ಆಯುಕ್ತರಾದ ಚೇತನ್ ಅರ್, ಜಿಪಂ ಸಿಇಒ ಭಂವರ್ ಸಿಂಗ್ ಮೀನಾ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು, ತಹಶೀಲ್ದಾರ ಮಧುರಾಜ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ವೀರಶೈವ ಲಿಂಗಾಯತ ಸಮಾಜದ ಮುಖಂಡರು, ಸಾರ್ವಜನಿಕರು ಭಾಗವಹಿಸಿದ್ದರು.ಜಿಲ್ಲಾಡಳಿತಕ್ಕೆ ಧಿಕ್ಕಾರ ಹೇಳಿದ ಬಸವಾಭಿಮಾನಿಗಳು!
ಕಾರ್ಯಕ್ರಮ ಸಮಯಕ್ಕೆ ಸರಿಯಾಗಿ ಶುರುವಾಗಲಿಲ್ಲವೆಂದು, ಸಮಾರಂಭದ ವೇದಿಕೆಯಲ್ಲಿ ಹಿಂದೆ ಬ್ಯಾನರ್ ಹಾಕಿಲ್ಲವೆಂದು ಆಕ್ಷೇಪಿಸುತ್ತಾ ಬಸವಾಭಿಮಾನಿಗಳು ಜಿಲ್ಲಾಡಳಿತದ ವಿರುದ್ಧ ಕೋಪ ಮಾಡಿಕೊಂಡ ಘಟನೆಯೂ ನಡೆಯಿತು. ಸಮಾರಂಭ ಆರಂಭಕ್ಕೂ ಮುನ್ನ ಬಸವಾಭಿಮಾನಿಗಳು ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಸಿದ್ಧತೆ ಸಭೆ ನಡೆಸಿದರೂ ಸಹ ಅವ್ಯವಸ್ಥೆ ಯಾಕೆಂದು ಆಕ್ಷೇಪಿಸಿದರು. ಡಿಸಿ ಫೌಜಿಯಾ ತರನ್ಮುಮ್ ಸ್ಥಳಕ್ಕೆ ಬಂದಾಗಲೂ ಘೋಷಣೆ ಕೂಗೋದು ನಿಂತಿರಲಿಲ್ಲ. ತಕ್ಷಣ ಡೀಸಿ ಬ್ಯಾನರ್ ವ್ಯವಸ್ಥೆ ಮಾಡಿದರು. ಸಮಾರಂಭ ತುಸು ವಿಳಂಬವಾಗಿ ಶುರುವಾಯಿತು.