ಬಸವಣ್ಣನವರು ಸಾಂಸ್ಕೃತಿಕ ನಾಯಕ: ಸಂಭ್ರಮಾಚರಣೆ

| Published : Jan 21 2024, 01:34 AM IST

ಸಾರಾಂಶ

ಸಿಂದಗಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ರಾಷ್ಟ್ರೀಯ ಬಸವದಳ ಶುಕ್ರವಾರ ಹಮ್ಮಿಕೊಂಡಿರುವ ಸಂಭ್ರಮಾಚರಣೆಯಲ್ಲಿ ದಲಿತ ಮುಖಂಡ ವೈ.ಸಿ.ಮಯೂರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಸಿಂದಗಿ

ವಿಶ್ವಗುರು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಕಾರ್ಯಕ್ಕೆ ತಾಲೂಕಿನ ಎಲ್ಲ ಬಸವಾಭಿಮಾನಿಗಳ ಪರವಾಗಿ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇವೆ ಎಂದು ದಲಿತ ಮುಖಂಡ ವೈ.ಸಿ.ಮಯೂರ ಹೇಳಿದರು.

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ರಾಷ್ಟ್ರೀಯ ಬಸವದಳ ಶುಕ್ರವಾರ ಹಮ್ಮಿಕೊಂಡಿರುವ ಸಂಭ್ರಮಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಹಿಕ್ಕಣಗುತ್ತಿ ಪ್ರಭುಲಿಂಗ ಸ್ವಾಮಿಗಳು, ಡಾ.ಎಂ.ಎಂ.ಪಡಶೆಟ್ಟಿ, ಅರವಿಂದ ಮನಗೂಳಿ, ಅಶೋಕ ಅಲ್ಲಾಪೂರ, ಗುರು ತಾರಾಪೂರ ಮಾತನಾಡಿ, ಈ ದೇಶಕ್ಕೆ ಮೋದಲ ಕ್ಯಾಬಿನೆಟ್ ಪರಿಕಲ್ಪನೆ ಕೊಟ್ಟವರು ಬಸವಣ್ಣನವರು. ಜನ ಬದುಕಲಿ ಜಗ ಬದುಕಲಿ ಎಂಬ ಮಾತಿನಂತೆ ಬದುಕಿದವರು. ಅಸ್ಪೃಶ್ಯತೆ, ಮೂಢನಂಬಿಕೆ, ಕಂದಾಚಾರಗಳ ವಿರುದ್ಧ ಹೋರಾಡಿದಂತವರು. ಸಮಾನತೆಗಾಗಿ ನಿರಂತರ ಹೋರಾಟ ಮಾಡಿ ಯಾವ ಸಮೂದಾಯಗಳು ಮೇಲಲ್ಲ, ಕಿಳಲ್ಲ ಎಂಬ ಭಾವವನ್ನು ಮೂಡಿಸಿದ ಕಾತಕಯೋಗಿ ಅಂತವರ ಹೆಸರನ್ನು ಕರ್ನಾಟಕದ ಸಾಂಸ್ಕೃತಿಕ ರಾಯಬಾರಿ ಎಂದು ನಾಮಕರಣ ಮಾಡಿದ್ದು ಸ್ವಾಗತಾರ್ಹ ಎಂದು ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು.

ನಂತರ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು. ಈ ವೇಳೆ ಬಸವ ದಳದ ಗುರಣ್ಣ ಬಸರಕೋಡ, ದಾನಪ್ಪ ಜೋಗೂರ, ಶಿವು ಶಿವಶಿಂಪಗೇರ, ಆರ್.ಆರ್.ಪಾಟೀಲ, ಎಸ್.ಎಂ.ಕುಂಬಾರ, ಶರಣು ಯಾಳವಾರ, ಸಂಗಣ್ಣ ಬ್ಯಾಕೋಡ, ಜಗದೀಶ ಪಟ್ಟಣಶೆಟ್ಟಿ, ಪ್ರವೀಣ ಹಾಲಹಳ್ಳಿ, ಜಗದೀಶ ಕಲಬುರ್ಗಿ, ಶಾಂತು ಬಮ್ಮಣ್ಣಿ, ವಿಶ್ವನಾಥ ಜೋಗೂರ, ಶಾಂತಪ್ಪ ರಾಣಾಗೋಳ, ಕಾಳೆಣ್ಣ ಬಗಲಿ ಸೇರಿದಂತೆ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.