ಸಾರಾಂಶ
ವಿಶ್ವಗುರು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ ಎಂದು ರಾಜ್ಯ ಸರ್ಕಾರ ಘೋಷಿಸುತ್ತಿದ್ದಂತೆ ಕಮಲನಗರದಲ್ಲಿ ಗುರುವಾರ ಬಸವಾಭಿಮಾನಿಗಳು, ಸಾರ್ವಜನಿಕರು ಪಟಾಕಿ ಸಿಡಿಸಿ, ಸಂಭ್ರಮಿಸಿ, ಹರ್ಷ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಕಮಲನಗರ
ವಿಶ್ವಗುರು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ ಎಂದು ರಾಜ್ಯ ಸರ್ಕಾರ ಘೋಷಿಸುತ್ತಿದ್ದಂತೆ ಪಟ್ಟಣದಲ್ಲಿ ಗುರುವಾರ ಬಸವಾಭಿಮಾನಿಗಳು, ಸಾರ್ವಜನಿಕರು ಪಟಾಕಿ ಸಿಡಿಸಿ, ಸಂಭ್ರಮಿಸಿ, ಹರ್ಷ ವ್ಯಕ್ತಪಡಿಸಿದರು.ಕಸಾಪ ತಾಲೂಕು ಅಧ್ಯಕ್ಷ ಪ್ರಶಾಂತ ಮಠಪತಿ ಮಾತನಾಡಿ, ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನುಇಡಿ ವಿಶ್ವಕ್ಕೆ ಪರಿಚಯಿಸಿದ ಗುರು ಬಸವಣ್ಣನವರು ಅಸ್ಪೃಷ್ಯತೆ ವಿರುದ್ಧ ಚಳವಳಿ ರೂಪಿಸಿ, ಸಮ ಸಮಾಜಕ್ಕಾಗಿ ಧ್ವನಿ ಎತ್ತಿದ ಮೊದಲ ನಾಯಕರಾಗಿದ್ದಾರೆ ಎಂದರು.
ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು, ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರ ನೇತೃತ್ವದ ಸ್ವಾಮೀಜಿಗಳ ನಿಯೋಗದ ನಿರಂತರ ಪ್ರಯತ್ನದ ಫಲವಾಗಿ ರಾಜ್ಯ ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ರಾಯಭಾರಿ ಎಂದು ಮಹತ್ವದ ಘೋಷಣೆ ಮಾಡಿದೆ. ರಾಜ್ಯ ಸರ್ಕಾರದ ಈ ಕ್ರಮಕ್ಕೆ ಕಸಾಪ, ಬಸವಾಭಿಮಾನಿಗಳು ಕೃತಜ್ಞನೆ ಸಲ್ಲಿಸುತ್ತೇವೆ ಎಂದು ತಿಳಿಸಿದರು.ಶಿವಾನಂದ ವಡ್ಡೆ, ಪ್ರವೀಣ ಪಾಟೀಲ್, ಗುರುಶಾಂತ ಶಿವಣಕರ, ಸುರೇಶ ಸೊಲ್ಲಾಪುರೆ, ಶಿವಕುಮಾರ ಝುಲ್ಪೆ, ಅವಿನಾಶ ಶಿವಣಕರ, ಹಾವಗಿರಾವ ಟೊಣ್ಣೆ, ಮಹಾದೇವ ಬಿರಾದಾರ, ಅಮರ ಶಿವಣಕರ, ಕಾಶೀನಾಥ ಬಾವಗೆ, ಚಂದ್ರಕಾಂತ ಭೈರೆ, ರಾಜಕುಮಾರ ಬಿರಾದಾರ, ಉಮಾಕಾಂತ ಮಹಾಜನ, ಪಂಡಿತ ಪಾಟೀಲ್, ರವಿ ಮದನೂರ, ಕಲ್ಲೇಶ ಉದಗಿರೆ, ಮಹಾಳಪ್ಪ ಖಾನಾಪುರೆ ಮತ್ತಿತರರು ಇದ್ದರು.