ಸಾರಾಂಶ
ಹಾವೇರಿ: ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿ ನಡೆ ನುಡಿಯನ್ನು ಒಂದಾಗಿಸಿ ಅದರಂತೆ ನಡೆದು ಎಂದೆಂದಿಗೂ ಆದರ್ಶಪ್ರಾಯವಾದವರು ಬಸವಣ್ಣನವರು ಎಂದು ಹಾವೇರಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು.ನಗರದ ಸಿಂದಗಿಮಠದಲ್ಲಿ ಹಾವೇರಿ ಬಸವಬಳಗ, ತಾಲೂಕು ಸಾಹಿತ್ಯ, ಶರಣ ಸಾಹಿತ್ಯ ಪರಿಷತ್ ಮತ್ತು ಜಾಗತಿಕ ಲಿಂಗಾಯತ ಮಹಾಸಭಾದ ಸಹಯೋಗದಲ್ಲಿ ಶ್ರಾವಣ ಮಾಸದ ಅಂಗವಾಗಿ ಪ್ರತಿದಿನ ನಗರದ ೩೦ ಮನೆಗಳಲ್ಲಿ ನಡೆದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಬಸವಾದಿ ಶಿವಶರಣರು ನೀಡಿದ ವಚನಗಳು ಸರ್ವಕಾಲಕ್ಕೂ ಸಲ್ಲುವ ವಿಶ್ವಮಾನ್ಯ ಸಂದೇಶಗಳನ್ನು ಒಳಗೊಂಡಿದ್ದು ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ಅಂತರಂಗ ಮತ್ತು ಬಹಿರಂಗಗಳು ಶುದ್ಧಗೊಳ್ಳುತ್ತವೆ ಎಂದರು.ನೇತೃತ್ವ ವಹಿಸಿದ್ದ ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಮಾತನಾಡಿ, ಸಮಸಮಾಜದ ಹರಿಕಾರ ಬಸವಣ್ಣನವರು. ಬಸವಾದಿ ಶಿವಶರಣರ ತತ್ವಾದರ್ಶಗಳು ಅಂದಿಗೂ ಇಂದಿಗೂ ಎಂದೆಂದಿಗೂ ಸುಂದರ ಸಮಾಜ ನಿರ್ಮಾಣಕ್ಕೆ ಅಡಿಪಾಯಗಳಾಗಿವೆ ಎಂದರುಮ್ಯಾಕ್ ಇಂಟರ್ ನ್ಯಾಷನಲ್ ಕಾರ್ಪೋರೇಷನ್ ತುಮಕೂರಿನ ವಿಜಯಕುಮಾರ ಕಮ್ಮಾರ ಅವರು ಸಾಂಸ್ಕೃತಿಕ ನಾಯಕ ಬಸವಣ್ಣ ಎಂಬ ವಿಷಯವಾಗಿ ಉಪನ್ಯಾಸ ನೀಡಿದರು. ಜಗದೀಶ ಹತ್ತಿಕೋಟಿ ಮಾತನಾಡಿ, ವಚನಸಾಹಿತ್ಯದ ಶ್ರೇಷ್ಠತೆ ಮತ್ತು ಅದರಲ್ಲಿನ ಸಂದೇಶಗಳ ಬಗ್ಗೆ ತಿಳಿಸಿದರು. ಹಾವೇರಿಯ ಶ್ರೀ ಸ್ಕ್ಯಾನ್ ಸೆಂಟರ್ ಡಾ. ವಿವೇಕ ಚವಡಿ, ಡಾ. ರೂಪಾದೇವಿ ಹೊಸಮನಿ ಮುಖ್ಯ ಅತಿಥಿಳಾಗಿ ಮಾತನಾಡಿದರು. ಅಧ್ಯಕ್ಷತೆಯನ್ನು ಬಸವಬಳಗದ ಅಧ್ಯಕ್ಷ ಚನ್ನಬಸವಣ್ಣ ರೊಡ್ಡನವರ ವಹಿಸಿದ್ದರು. ಕಾರ್ಯಕ್ರಮದಲ್ಲಿ ಹೆಸ್ಕಾಂ ನಿವೃತ್ತ ಅಧಿಕಾರಿ ವಿಜಯಕುಮಾರ ಮುದುಕಣ್ಣನವರ, ನಿವೃತ್ತ ಶಿಕ್ಷಕ ಪೂಜಾರ, ಪುಟ್ಟಪ್ಪ ಮಲಕಣ್ಣನವರ, ರತ್ನಮ್ಮ ದೊಡ್ಡಮನಿ ಅವರನ್ನು ಸನ್ಮಾನಿಸಲಾಯಿತು. ತೇಜಸ್ವಿಸಿ ನಾಶಿ ವಚನ ನೃತ್ಯ ಮಾಡಿದರು.ಹುಕ್ಕೇರಿಮಠದ ಅಕ್ಕನ ಬಳಗದವರು ವಚನ ಪ್ರಾರ್ಥಿಸಿದರು. ಬಸವರಾಜ ಕೋರಿ ಸ್ವಾಗತಿಸಿದರು. ಶಿವಬಸಪ್ಪ ಮುದ್ದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಲ್ಲಿಕಾರ್ಜುನ ಹಿಂಚಿಗೇರಿ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಕೊಟೆಪ್ಪ ಗುದಗಿ ವಂದಿಸಿದರು.ಕಾರ್ಯಕ್ರಮದಲ್ಲಿ ಕೊಟ್ರೇಶಪ್ಪ ವಿಜಾಪೂರ, ಶಿವಾನಂದ ಹೊಸಮನಿ, ಉಳಿವೆಪ್ಪ ಪಂಪಣ್ಣವರ, ಶಿವಯೋಗಿ ಬೆನ್ನೂರ, ಮುರಿಗೆಪ್ಪ ಕಡೇಕೊಪ್ಪ, ಮಾಲತೇಶ ಕರೆಮಣ್ಣವರ, ನಾಗೇಂದ್ರಪ್ಪ ಮಂಡಕ್ಕಿ, ಗಂಗಣ್ಣ ಮಾಸೂರು, ಶಿವಯೋಗಿ ಮಾಮಲೆಪಟ್ಟಣಶೆಟ್ಟಿ, ಬಸವರಾಜ ಮುಳಗುಂದ, ವಿ.ಜಿ. ಯಳಗೇರಿ, ಎನ್.ಬಿ. ಕಾಳೆ, ಎಸ್.ಆರ್. ಮಠಪತಿ, ಶಿವರಾಜ ಕಾಯಕದ, ಜಯಶ್ರೀ ಶಿವಪೂರ, ಹುಕ್ಕೇರಿ ಮಠದ ಸೂಡಂಬಿಯ ಅಕ್ಕನಬಳಗದ ಸದಸ್ಯರು ಉಪಸ್ಥಿತರಿದ್ದರು.